ಮನೆಯನ್ನು ಅಂದಗಾಣಿಸುವ ಈ ವಸ್ತುಗಳು ಅದೃಷ್ಟ ತರುತ್ತವೆ

By Suvarna NewsFirst Published Mar 30, 2021, 6:31 PM IST
Highlights

ಮನೆಯನ್ನು ಅಲಂಕರಿಸುವಾಗ ಅನೇಕ ಚಂದದ ಫೋಟೋಗಳನ್ನು ಹಾಕುತ್ತೇವೆ. ಅಂತಹ ಫೋಟೋಗಳು ವಾಸ್ತು ಪ್ರಕಾರ ಸಕಾರಾತ್ಮಕತೆಯನ್ನು ಹೆಚ್ಚಿಸುವಂತಿದ್ದಾಗ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವೆಂಬುದು ವಾಸ್ತು ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲದೆ ಮನೆಯ ಸರಿಯಾದ ಅಲಂಕಾರ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಕ್ಕೆಂದು ಹಾಕುವ ಫೋಟೋಗಳು ಹೇಗಿರಬೇಕೆಂಬುದನ್ನು ತಿಳಿಯೋಣ..
 

ಮನೆಯನ್ನು ಚಂದವಾಗಿಡಲು ಅನೇಕ ಅಲಂಕಾರಿಕ ವಸ್ತುಗಳನ್ನು ಇಡುತ್ತೇವೆ. ಅನೇಕ ಪ್ರತಿಮೆಗಳು, ಫೋಟೋಗಳು, ಶೋ ವಸ್ತುಗಳು, ಹೂದಾನಿಗಳು ಹೀಗೆ ಬಗೆ ಬಗೆಯ ವಸ್ತುಗಳನ್ನಿಟ್ಟು ಮನೆಯ ಸಿಂಗಾರ ಮಾಡುತ್ತೇವೆ. ಇಂಥಹ ಕೆಲವು ವಸ್ತುಗಳು ನಮಗೆ ಜೀವನದಲ್ಲಿ ಖುಷಿ ಮತ್ತು ಅದೃಷ್ಟವನ್ನು ತರುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮನೆಯಲ್ಲಿ ಕೆಲವೊಂದು ಫೋಟೋಗಳನ್ನು ಇಟ್ಟುಕೊಳ್ಳುವುದರಿಂದ ಅದೃಷ್ಟ ಒಲಿದು ಬರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ.

ಕೆಲವೊಮ್ಮೆ ಚಂದವಾಗಿರಬೇಕೆಂದು ಹೆಚ್ಚಿನ ದೇವರ ಫೋಟೋಗಳು, ಇತರ ಪೇಂಟಿಂಗ್ ಮತ್ತು ಹಲವು ರೀತಿಯ ಶೋ ವಸ್ತುಗಳನ್ನು ಮನೆಯಲ್ಲಿ ತಂದಿಡುತ್ತೇವೆ. ಚಂದಕಾಣುವ ಎಲ್ಲ ವಸ್ತುಗಳು ಮನೆಗೆ ಒಳಿತಿಗೆ ಕಾರಣವಾಗುವುದಿಲ್ಲ. ಬದಲಾಗಿ ಕೆಲವು ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಮನೆಯ ಒಳಾಂಗಣದ ಅಲಂಕಾರವು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾಗಿ ಮನೆಯನ್ನು ಅಲಂಕಾರ ಮಾಡುವಾಗ ವಾಸ್ತು ನಿಯಮಗಳನ್ನು ಗಮನದ್ಲಲಿರಿಸಿಕೊಂಡರೆ ಮನೆಯಲ್ಲಿ ಅಭಿವೃದ್ಧಿ ಉಂಟಾಗುತ್ತದೆ.   



ಚಂದಕಾಣಿಸುವ ಅಥವಾ ಇಷ್ಟವಾಗುವ ಎಲ್ಲ ಚಿತ್ರಗಳನ್ನು ಮನೆಯಲ್ಲಿ ಹಾಕಿಕೊಳ್ಳುವುದು ಉಚಿತವಲ್ಲ. ಕೆಲವು ಚಿತ್ರಗಳು ನಕಾರಾತ್ಮಕ ಪ್ರಭಾವವನ್ನು ಬೀರುವಂತಹ ಚಿತ್ರಗಳಾಗಿರುತ್ತವೆ. ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ  ರಕ್ತಸಿಕ್ತವಾಗಿರುವಂಥ ದೃಶ್ಯದ ಫೋಟೊಗಳು, ಬಂಜರು ಭೂಮಿ, ಒಣಗಿದ ಮರ, ಖಿನ್ನತೆಯನ್ನು ಬಿಂಬಿಸುವ ದೃಶ್ಯವುಳ್ಳ ಫೋಟೊಗಳನ್ನು ಮನೆಯಲ್ಲಿ ಹಾಕಿಕೊಂಡರೆ ಅವು ನಕಾರಾತ್ಮಕ ಪ್ರಭಾವವನ್ನು ಬೀರುವುದು ಖಚಿತ. ಕೆಲವು ಪ್ರಾಣಿಗಳ ಚಿತ್ರಗಳು ಮನೆಗೆ ಶುಭವನ್ನು ತರುತ್ತವೆ. ಮುಖ್ಯವಾಗಿ ಕುದುರೆಯ ಫೋಟೊವು ಅತ್ಯಂತ ಶುಭವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! 

ಹಾಗೆಯೇ ವಾಸ್ತು ಶಾಸ್ತ್ರದಲ್ಲಿ ಕೆಲವು ವಿಶೇಷವಾದ ಸುಂದರ ಫೋಟೋಗಳನ್ನು ಮನೆಯಲ್ಲಿಟ್ಟು ಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೆ, ಮನೆಗೆ ಎಲ್ಲ ರೀತಿಯಿಂದಲು ಏಳಿಗೆಯುಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಅಂತಹ ಫೋಟೋಗಳು ಯಾವುವು ಎಂದು ತಿಳಿಯೋಣ...

ಈಜುತ್ತಿರುವ ಮೀನು
ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಈಜುತ್ತಿರುವ ಮೀನಿನ ಫೋಟೋವನ್ನು ಹಾಕಿಕೊಳ್ಳುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಯಲ್ಲಿ ಈಜುತ್ತಿರುವ ಮೀನಿನ ಫೋಟೋವು ದೀರ್ಘಾಯಸ್ಸನ್ನು ಸೂಚಿಸುತ್ತದೆ. ಈ ರೀತಿಯ ಫೋಟೋವು ಮನೆಯಲ್ಲಿದ್ದರೆ ಮನೆಯ ಸದಸ್ಯರ ಆಯಸ್ಸು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು.. 

ಕುರಿಮರಿಯ ಫೋಟೋ
ಸಾಮಾನ್ಯವಾಗಿ ಪ್ರಾಣಿಮರಿಗಳ ಫೋಟೋವನ್ನು  ಮನೆಯ ಗೋಡೆಗೆ ಹಾಕುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಗೋಡೆಗೆ ಕುರಿಮರಿಯ ಫೋಟೋವನ್ನು ಹಾಕಿಕೊಳ್ಳುವುದರಿಂದ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ-ಸಂತೋಷ ನೆಲೆಸಿರುತ್ತದೆ.

ಉದಯಿಸುತ್ತಿರುವ ಸೂರ್ಯನ ಚಿತ್ರ
ಉದಯಿಸುತ್ತಿರುವ ಸೂರ್ಯನ ಚಿತ್ರವು ಶುಭವೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಪಕ್ಷಿ, ಪರ್ವತ ಮತ್ತು ನೀರಿನ ಚಿತ್ರಗಳು ಖುಷಿ ಮತ್ತು ಜೀವಂತಿಕೆಯ ಪ್ರತೀಕವೆಂದು ಹೇಳಲಾಗುತ್ತದೆ. ಉದಯಿಸುತ್ತಿರುವ ಸೂರ್ಯನ ಫೋಟೋವನ್ನು ಮನೆಯಲ್ಲಿ ಹಾಕಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಆತ್ಮವಿಶ್ವಾಸವು ದ್ವಿಗುಣಗೊಳ್ಳುತ್ತದೆ.

ಹರಿಯುತ್ತಿರುವ ನೀರು
ವಾಸ್ತು ಶಾಸ್ತ್ರದ ಪ್ರಕಾರ ಹರಿಯುತ್ತಿರುವ ನೀರು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ನದಿ, ಕೊಳ, ಜಲಪಾತ ಮತ್ತು ಸಮುದ್ರಗಳ ಫೋಟೋಗಳು ಇದ್ದರೆ ಸೌಭಾಗ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ.

ಇದನ್ನು ಓದಿ:

ನಗುತ್ತಿರುವ ಮಗು
ನಗುತ್ತಿರುವ ಮುದ್ದಾದ ಮಗುವಿನ ಫೋಟೋವನ್ನು ಮನೆಯಲ್ಲಿ ಹಾಕಿಕೊಳ್ಳುವುದರಿಂದ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ  ನಗುತ್ತಿರುವ ಮಕ್ಕಳ ಫೋಟೋವನ್ನು ಇಟ್ಟುಕೊಂಡರೆ, ಅಂಥವರ ಮನೆಯಲ್ಲಿ ಎಲ್ಲ ಸದಸ್ಯರು ಖುಷಿಯಿಂದ ಇರಲು ಸಾಧ್ಯವಾಗುತ್ತದೆ.

click me!