
ಪ್ರತಿಯೊಬ್ಬರ ಜೀವನದಲ್ಲೂ ಸಹಿ (Signature) ವಿಶೇಷ ಸ್ಥಾನವನ್ನು ಪಡೆದಿದೆ. ಸಹಿ ಹಾಕೋದು ಒಂದು ಕಲೆ ಮಾತ್ರವಲ್ಲ, ಸಹಿ ವ್ಯಕ್ತಿಯ ಸ್ವಾಭಿಮಾನ, ಆತ್ಮವಿಶ್ವಾಸ (confidence) ಮತ್ತು ಭಾವನಾತ್ಮಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತೆ. ಅತಿ ಸುಂದರ ಹಾಗೂ ಆಕರ್ಷಕ ಸಹಿ ಹಾಕಲು ಎಲ್ಲರೂ ಬಯಸ್ತಾರೆ. ಒಬ್ಬೊಬ್ಬರ ಸಹಿ ಒಂದೊಂದು ರೀತಿ ಇರುತ್ತೆ. ನೀವು ಹಾಕಿರುವ ಸಹಿಯಿಂದಲೇ ತಜ್ಞರು ನಿಮ್ಮ ಸ್ವಭಾವವನ್ನು ಹೇಳಬಲ್ಲರು. ಸಹಿ ನಿಮ್ಮ ಯಶಸ್ಸು, ಆತ್ಮವಿಶ್ವಾಸಕ್ಕೆ ಅಡ್ಡಿಯಾಗ್ಬಹುದು. ಅನೇಕರು ತಮ್ಮ ಸಹಿ ಕೆಳಗೆ ಗೆರೆ ಎಳೆಯುತ್ತಾರೆ. ಸಹಿ ಕೆಳಗೆ ಗೆರೆ ಎಳೆಯೋದು ಎಷ್ಟು ಸರಿ, ಇದು ಏನನ್ನು ಸೂಚಿಸುತ್ತೆ ಗೊತ್ತಾ?.
ಸಹಿ ಕೆಳಗೆ ಗೆರೆ ಎಳೆಯೋದು ಒಬ್ಬ ವ್ಯಕ್ತಿಯ ದೃಢನಿಶ್ಚತ ಬಯಕೆಯನ್ನು ಸೂಚಿಸುತ್ತದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಕ್ತಿ ತನ್ನ ಕೆಲಸದಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ರೆ ನೀವು ಯಾವ ರೀತಿ ಸಹಿ ಹಾಕಿದ್ದೀರಿ ಎಂಬುದರ ಆಧಾರದ ಮೇಲೆ ಇದನ್ನು ನಿರ್ಣಯಿಸಲಾಗುತ್ತದೆ.
ದಾರಿಲಿ ದುಡ್ಡು ಸಿಕ್ಕಿದ್ರೆ ಏನರ್ಥ? ಅದೃಷ್ಟವೋ, ಗ್ರಾಚಾರವೋ?
ಗೆರೆಯ ಉದ್ದ ಹಾಗೂ ದಿಕ್ಕು : ನೀವು ಸಹಿ ಕೆಳಗೆ ಉದ್ದವಾದ ಹಾಗೂ ನೇರವಾದ ಗೆರೆ ಎಳೆದರೆ ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತಶಾಸ್ತ್ರದ ಪ್ರಕಾರ, ಸಹಿ ಕೆಳಗೆ ಎಳೆಯುವ ಗೆರೆ, ಸಹಿಗಿಂತ ಉದ್ದವಾಗಿರಬೇಕು. ನೇರವಾಗಿವಾಗಿರಬೇಕು.
ವಕ್ರ ಗೆರೆ : ಸಹಿ ಕೆಳಗೆ ನೀವು ಎಳೆದ ಗೆರೆ ಹಿಮ್ಮುಖವಾಗಿದ್ದರೆ, ವಕ್ರವಾಗಿದ್ದರೆ ಅದು ಶುಭವಲ್ಲ. ಯಾವುದೇ ಕಾರಣಕ್ಕೂ ಗೆರೆಯನ್ನು ಮತ್ತೆ ಹಿಂದೆ ತರಬಾರದು. ಒಂದ್ವೇಳೆ ನಿಮ್ಮ ಸಹಿಯ ಗೆರೆ, ಸಹಿಗಿಂತ ಚಿಕ್ಕದಿದ್ದರೆ ಹಾಗೂ ಅದು ಹಿಮ್ಮುಕವಾಗಿದ್ದರೆ ಅದು ನಿಮ್ಮ ಜೀವನದಲ್ಲಿ ಅಲಕ್ಷತೆಯನ್ನುಂಟು ಮಾಡುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ.
ಒಂದಕ್ಕಿಂತ ಹೆಚ್ಚು ಗೆರೆ : ಕೆಲವರು ತಮ್ಮ ಸಹಿ ಕೆಳಗೆ ಒಂದಕ್ಕಿಂತ ಹೆಚ್ಚು ಗೆರೆಗಳನ್ನು ಎಳೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಒಂದಕ್ಕಿಂತ ಹೆಚ್ಚು ಗೆರೆ ಎಳೆಯೋದು ಶುಭವಲ್ಲ. ಒಂದಕ್ಕಿಂತ ಹೆಚ್ಚು ಗೆರೆ ಎಳೆಯೋದು ಮಾನಸಿಕ ಭ್ರಮೆ ಹಾಗೂ ಗೊಂದಲವನ್ನು ಹೆಚ್ಚಿಸುತ್ತದೆ. ಇದ್ರಿಂದಾಗಿ ವ್ಯಕ್ತಿ ಅನೇಕ ಬಾರಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ. ಇದು ಯಶಸ್ಸಿಗೆ ಅಡ್ಡಿಯನ್ನುಂಟು ಮಾಡುತ್ತದೆ. ಗೆರೆ ಹೀಗಿದ್ದರೂ ಒಳ್ಳೆಯದಲ್ಲ : ಅನೇಕರು ಸಹಿ ಮಧ್ಯೆ ಗೆರೆ ಎಳೆಯುತ್ತಾರೆ ಇಲ್ಲವೆ ಗೆರೆಯನ್ನು ಅರ್ಧಕ್ಕೆ ಕತ್ತರಿಸಿ ಅದಕ್ಕೆ ಬೇರೆ ಶೇಪ್ ನೀಡ್ತಾರೆ. ಯಾವಾಗ್ಲೂ ಗೆರೆ ನೇರವಾಗಿರಬೇಕು. ಯಾವುದೇ ಏರಿಳಿತವಿರಬಾರದು. ಇದು ನಿಮ್ಮ ಜೀವನದಲ್ಲಿ ಸಮಸ್ಯೆ ಹುಟ್ಟು ಹಾಕುತ್ತದೆ. ಸಫಲತೆಯ ಮಾರ್ಗಕ್ಕೆ ತಡೆಯಾಗುತ್ತದೆ.
ಜೀವನದಲ್ಲಿ ಉದ್ಧಾರ ಆಗ್ಬೇಕಾ? ಅಪ್ಪಿ ತಪ್ಪಿ ಈ ವಿಷಯಗಳನ್ನು ಯಾರಿಗೂ
ಸಹಿ ಕೆಳಗೆ ಗೆರೆ ಪ್ರಯೋಜನಕಾರಿಯೇ? : ನೀವು ಸಹಿ ಕೆಳಗೆ ಗೆರೆ ಎಳೆಯೋದ್ರಿಂದ ಯಾವುದೇ ನಷ್ಟವಿಲ್ಲ. ಆದ್ರೆ ನೀವು ಹೇಗೆ ಗೆರೆ ಎಳೆದಿದ್ದೀರಿ ಎಂಬುದು ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಗೆರೆ ನೇರ ಹಾಗೂ ಉದ್ದವಿದ್ದರೆ ಮಾತ್ರ ಒಳ್ಳೆಯದು. ಒಂದ್ವೇಳೆ ನೀವು ವಕ್ರವಾದ, ತಿರುಗಿದ ಸಹಿ ಹಾಕ್ತಿದ್ದರೆ ಅದನ್ನು ಬದಲಿಸಬಹುದು. ಸಹಿ ಬದಲಿಸುವ ಮುನ್ನ ನೇರವಾದ, ದೊಡ್ಡದಾದ, ಸ್ಪಷ್ಟವಾದ ಗೆರೆಯನ್ನು ಹಾಕಿ. ಭಾರತದಲ್ಲಿ, ಯಾವುದೇ ವ್ಯಕ್ತಿ ತನ್ನ ಸಹಿಯನ್ನು ಕಾನೂನುಬದ್ಧವಾಗಿ ಬದಲಾಯಿಸಲು ಯಾವುದೇ ಔಪಚಾರಿಕ ಕಾರ್ಯವಿಧಾನವಿಲ್ಲ. ನಿಮ್ಮ ಚಾಲನಾ ಪರವಾನಗಿ, ಪಾಸ್ಪೋರ್ಟ್, ಬ್ಯಾಂಕ್ ಖಾತೆ ಮತ್ತು ಇತರ ಕಾನೂನು ದಾಖಲೆಗಳಂತಹ ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳಲ್ಲಿ ನಿಮ್ಮ ಹೊಸ ಸಹಿಯನ್ನು ನವೀಕರಿಸುವುದು ಮುಖ್ಯವಾಗುತ್ತದೆ.