ಉತ್ತಮ ಹಣದ ಹರಿವಿಗಾಗಿ ದೀಪಾವಳಿ 2022ರ ವಾಸ್ತು ಸಲಹೆಗಳು

By Suvarna News  |  First Published Oct 15, 2022, 10:37 AM IST

ದೀಪಾವಳಿಯು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ. ದೀಪಾವಳಿಯ ಸಂದರ್ಭದಲ್ಲಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.


ದೀಪಾವಳಿಗೆ ಇನ್ನು ಹೆಚ್ಚು ದಿನಗಳಿಲ್ಲ. ಬಹುತೇಕ ಮನೆಗಳಲ್ಲಿ ದೀಪಾವಳಿ ಹಬ್ಬದ ತಯಾರಿ ಮನೆಯ ಸ್ವಚ್ಛತೆಯಿಂದ ಈಗಾಗಲೇ ಶುರುವಾಗಿದೆ. ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಆದ್ದರಿಂದ, ದೀಪಾವಳಿಯ ಸಾಲು ಸಾಲು ಹಬ್ಬಗಳಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ.

ಈ ಹಬ್ಬಕ್ಕೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ವಾಸ್ತು ಶಾಸ್ತ್ರ(Vastu Shastra)ದಲ್ಲಿಯೂ ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ, ತಾಯಿ ಲಕ್ಷ್ಮಿಯ ಅನುಗ್ರಹವು ಯಾವಾಗಲೂ ವ್ಯಕ್ತಿಯ ಮೇಲೆ ಇರುತ್ತದೆ ಮತ್ತು ಅವನು ಸಂಪತ್ತು ಮತ್ತು ಐಶ್ವರ್ಯವನ್ನು ಪಡೆಯುತ್ತಾನೆ. ಮನೆಯ ಯಾವ ಮೂಲೆಯ ಶುಚಿತ್ವದಿಂದ ಲಕ್ಷ್ಮಿಯ ವಿಶೇಷ ಕೃಪೆಯು ನಿರ್ವಹಿಸಲ್ಪಡುತ್ತದೆ ಎಂದು ತಿಳಿಯೋಣ.

Tap to resize

Latest Videos

undefined

ಮನೆಯ ಈ ಭಾಗಗಳಲ್ಲಿ ಶುಚಿತ್ವ(Cleanliness)ವನ್ನು ನೋಡಿಕೊಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ, ಈಶಾನ್ಯವನ್ನು ಮನೆ ಅಥವಾ ಕಚೇರಿಯಲ್ಲಿ ಪ್ರಮುಖ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ಕೋನದಲ್ಲಿ ಕುಬೇರ ದೇವರು ನೆಲೆಸಿದ್ದಾನೆ. ಆದ್ದರಿಂದ, ದೀಪಾವಳಿಯ ಮೊದಲು, ಮನೆಯ ಈ ಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ದೀಪಾವಳಿ ಟೈಮಲ್ಲಾದರೂ ಇವನ್ನೆಲ್ಲ ಮನೆಯಿಂದ ಹೊರ ಹಾಕಿ, ಇಲ್ಲವೆಂದರೆ ಲಕ್ಷ್ಮಿ ಒಲಿಯೋಲ್ಲ

ಈಶಾನ್ಯದಲ್ಲಿ ಯಾವುದೇ ರೀತಿಯ ಅಶುದ್ಧ ಅಥವಾ ಅನಗತ್ಯ ವಸ್ತುಗಳನ್ನು ಇಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಆಶೀರ್ವಾದವಿಲ್ಲದೆ ಮನೆಯಿಂದ ಹಿಂದಿರುಗುತ್ತಾಳೆ. ಇದು ಸಂಭವಿಸದಿರಲು, ಈಶಾನ್ಯ(North east) ಮೂಲೆಯನ್ನು ಸ್ವಚ್ಛವಾಗಿಡಿ.

ಇದರೊಂದಿಗೆ ಮನೆಯಲ್ಲಿನ ಬ್ರಹ್ಮ ಸ್ಥಳದ ಶುಚಿತ್ವವೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸ್ಥಳವನ್ನು ವಾಸ್ತು ಶಾಸ್ತ್ರದಲ್ಲಿ ಫಲಪ್ರದವೆಂದು ವಿವರಿಸಲಾಗಿದೆ. ಆದ್ದರಿಂದ, ದೀಪಾವಳಿಯ ಮೊದಲು, ಬ್ರಹ್ಮಸ್ಥಾನವನ್ನು ಸ್ವಚ್ಛಗೊಳಿಸಿ ಮತ್ತು ಇಲ್ಲಿ ಯಾವುದೇ ಭಾರವಾದ ಪೀಠೋಪಕರಣಗಳು(furnitures) ಅಥವಾ ಯಾವುದೇ ಬಳಕೆಯಾಗದ ವಸ್ತು ಇಲ್ಲದಂತೆ ನೋಡಿಕೊಳ್ಳಿ.

ಮನೆಯ ಪೂರ್ವ ದಿಕ್ಕಿನಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಕಾರಣದಿಂದಾಗಿ, ಕುಟುಂಬದಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂವಹನ ಇರುತ್ತದೆ. ಆದ್ದರಿಂದ, ದೀಪಾವಳಿ ದಿನದಂದು ಪೂಜೆ ಮಾಡುವ ಮೊದಲು, ಈ ದಿಕ್ಕನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಈ ಎಲ್ಲಾ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಪರಿಶುದ್ಧವಾಗಿ ಇರಿಸುವ ಮೂಲಕ, ಲಕ್ಷ್ಮಿ ದೇವಿ(Goddess Lakshmi)ಯು ಅತ್ಯಂತ ಸಂತುಷ್ಟಳಾಗಿದ್ದಾಳೆ ಮತ್ತು ಯಾವಾಗಲೂ ತನ್ನ ಆಶೀರ್ವಾದವನ್ನು ಭಕ್ತರ ಮೇಲೆ ಸುರಿಸುತ್ತಾಳೆ.

ತಾಯಿ ಲಕ್ಷ್ಮೀಯ ಫೋಟೋ
ಇನ್ನು, ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆಗಾಗಿ ಆಕೆಯ ಫೋಟೋ ಇಡುವಾಗ ಕೂಡಾ ಕೊಂಚ ಜಾಗರೂಕತೆ ವಹಿಸಬೇಕು. ಯಾವುದೇ ಕಾರಣಕ್ಕೂ ರಾಕ್ಷಸ ಸಂಹಾರ ಮಾಡುತ್ತಿರುವ ದೇವಿಯ ಫೋಟೋ ಇರಿಸಬಾರದು. ಕ್ರೂರ ರೂಪದಲ್ಲಿರುವ, ಕೋಪಗೊಂಡಿರುವ ಲಕ್ಷ್ಮಿಯ ರೂಪಗಳನ್ನು ಇಟ್ಟುಕೊಳ್ಳಬಾರದು. 

Diwali 2022: ಧನ ತ್ರಯೋದಶಿ ದಿನ ರಾಶಿ ನೋಡಿ ಖರೀದಿ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿಯು ಆಶೀರ್ವಾದ ನೀಡುತ್ತಿರುವ ಭಂಗಿಯಲ್ಲಿರುವ ವಿಗ್ರಹ ಅಥವಾ ಫೋಟೋವನ್ನು ಇರಿಸಬೇಕು. ಇಂತಹ ಚಿತ್ರವನ್ನು ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ. ಒಳ್ಳೆಯ ಭಾವನೆಗಳು ಮನಸ್ಸಿಗೆ ಬರುತ್ತವೆ. ಲಕ್ಷ್ಮೀದೇವಿಯ ಕೃಪೆ ಇಡೀ ಕುಟುಂಬದ ಮೇಲಿರುತ್ತದೆ. ಭಗವಾನ್ ವಿಷ್ಣು ಮತ್ತು ಲಕ್ಷ್ಮಿ  ಇರುವ ಫೋಟೋ ಅಥವಾ ವಿಗ್ರಹವನ್ನು ಸಹ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ಲಕ್ಷ್ಮಿಯ ಕೈಯಿಂದ ಹಣದ ಸುರಿಮಳೆಯಾಗುತ್ತಿರುವ ಚಿತ್ರವನ್ನು ಸಹ ಮಂಗಳಕರ(Auspicious)ವೆಂದು ಪರಿಗಣಿಸಲಾಗುತ್ತದೆ. ಇಂತಹ ಚಿತ್ರವನ್ನು ಹಾಕುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!