ಮನೆಯ ಪ್ರವೇಶ ದ್ವಾರದ ಗೋಡೆಯಲ್ಲಿ ಸೂರ್ಯನನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ತಾಮ್ರದಿಂದ ಮಾಡಿದ ಸೂರ್ಯನನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ತಾಮ್ರದ ಸೂರ್ಯನಿಂದಾಗುವ ಲಾಭಗಳೆಷ್ಟೊಂದಿವೆ ಗೊತ್ತಾ?
ವಾಸ್ತು ಪ್ರಕಾರ ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಚಿಹ್ನೆಗಳು ಮತ್ತು ಸಾಧನಗಳನ್ನು ಕಾಣಬಹುದು. ಅವುಗಳಲ್ಲಿ ಅತ್ಯಂತ ಪರಿಣೀಮಕಾರಿಯಾದುದು ತಾಮ್ರದ ಸೂರ್ಯ.
ಇದು ತಾಮ್ರದಲ್ಲಿ ಮಾಡಿದ ಲೋಹೀಯ ಸೂರ್ಯ(Copper Sun), ಇದು ಅತ್ಯುತ್ತಮ ವಾಸ್ತು ಹಾರ್ಮೋನೈಸರ್ ಆಗಿದೆ. ಅದರಿಂದ ಗರಿಷ್ಠ ಲಾಭವನ್ನು ಪಡೆಯಲು ಅದನ್ನು ನಿರ್ದಿಷ್ಟ ದಿಕ್ಕಿನಲ್ಲಿ ನಿಮ್ಮ ಮನೆಯ ಗೋಡೆಗಳ ಮೇಲೆ ಇಡಬೇಕು. ಇದು ವಿವಿಧ ಲೋಹಗಳಲ್ಲಿ ಲಭ್ಯವಿದ್ದರೂ, ತಾಮ್ರದ ಸೂರ್ಯನ ವಾಸ್ತು ಪ್ರಯೋಜನಗಳು(Vastu benefits) ಸಾಟಿಯಿಲ್ಲದ ಕಾರಣ, ತಾಮ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ..
undefined
ತಾಮ್ರದ ಸೂರ್ಯನ ವಾಸ್ತು ಪ್ರಾಮುಖ್ಯತೆ
ಪ್ರಾಚೀನ ಅಧ್ಯಯನಗಳ ಪ್ರಕಾರ, ಸೂರ್ಯನು ಭೂಮಿಗೆ ಬೆಳಕನ್ನು ತರುತ್ತಾನೆ ಮತ್ತು ಆತನನ್ನು ಕಣ್ಣಿಗೆ ಕಾಣುವ ಏಕೈಕ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಅನೇಕ ಗೌರವಾನ್ವಿತ ಪುರುಷರು ಮತ್ತು ಸಂತರು ಸೂರ್ಯನನ್ನು ಅದರ ಶಕ್ತಿಗಾಗಿ ಪೂಜಿಸುತ್ತಾರೆ.
ಸೂರ್ಯನೇ ಈ ಭೂಮಿಯ ಜೀವಿಗಳಿಗೆ ಆಧಾರವಾಗಿದ್ದು, ಮಾನವರಿಗೆ ಸಾಕಷ್ಟು ದೈಹಿಕ ಪ್ರಯೋಜನಗಳನ್ನು ಕೊಡುತ್ತಾನೆ. ಸೂರ್ಯನು ವಿಟಮಿನ್ ಡಿ ಅನ್ನು ಸಂಶ್ಲೇಷಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಕಡ್ಡಾಯವಾಗಿದೆ. ಸೂರ್ಯನಿಂದ ನಾವು ಪಡೆಯುತ್ತಿರುವ ಪ್ರಯೋಜನಗಳು ಅನೇಕ.
Vastu tips: ಮನೆಯಲ್ಲಿ ಸದಾ ಜಗಳವೇ? ಈ ರೀತಿಯ ಕನ್ನಡಿ, ಪಾತ್ರೆಗಳನ್ನು ಕೂಡಲೇ ಎಸೆಯಿರಿ
ಹೀಗಾಗಿ, ಸೂರ್ಯನಿಗೆ ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಬಹಳ ಪ್ರಾಮುಖ್ಯತೆ ಇದೆ. ವಾಸ್ತುವಿನಲ್ಲಿ ಮನೆಯ ಸಂತೋಷ, ಸಮೃದ್ಧಿ ಸೇರಿದಂತೆ ಅನೇಕ ಪ್ರಯೋಜನಗಳಿಗಾಗಿ ತಾಮ್ರದ ಸೂರ್ಯನನ್ನು ಬಳಸಲು ಹೇಳಲಾಗುತ್ತದೆ.
ತಾಮ್ರದ ಸೂರ್ಯನ ವಾಸ್ತು ಪ್ರಯೋಜನಗಳು:
ತಾಮ್ರದ ಸೂರ್ಯ
ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಮತ್ತು ಪ್ರತಿದಿನ ಬೆಳಿಗ್ಗೆ ಉದಯಿಸುವ ಸೂರ್ಯನಿಗೆ ನೀವು ಪ್ರಾರ್ಥಿಸಿದರೆ, ನಿಮ್ಮ ಜೀವನವನ್ನು ಬದಲಾಯಿಸಬಹುದು ಎಂದು ಅನೇಕ ಜನರು ನಂಬುತ್ತಾರೆ. ಸೂರ್ಯನು ಅಂತಹ ಶಕ್ತಿಯನ್ನು ಒದಗಿಸುತ್ತದೆ, ನೀವು ಸೂರ್ಯನ ಆಶೀರ್ವಾದವನ್ನು ಪಡೆದರೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮನ್ನು ಪರಿವರ್ತಿಸಬಹುದು. ಸೂರ್ಯನ ಕಿರಣಗಳನ್ನು(Sun rays) ನೇರವಾಗಿ ಅಥವಾ ಭೌತಿಕವಾಗಿ ಪಡೆಯಲು ಸಾಧ್ಯವಾಗದವರಲ್ಲಿ ನೀವೂ ಒಬ್ಬರಾಗಿದ್ದರೆ, ತಾಮ್ರದ ಸೂರ್ಯ ವಾಸ್ತುವಿನಿಂದ ಈ ಶಕ್ತಿಯ ಪ್ರಯೋಜನಗಳನ್ನು ಪಡೆಯಬಹುದು.
ತಾಮ್ರದ ಸೂರ್ಯನ ವಾಸ್ತು ಪ್ರಯೋಜನಗಳನ್ನು ಅತ್ಯುತ್ತಮವಾಗಿಸಲು ನಿಮ್ಮ ಮನೆ ಅಥವಾ ಕೆಲಸದ ಸ್ಥಳದ ಪೂರ್ವ ದಿಕ್ಕಿನಲ್ಲಿ ತಾಮ್ರದ ಸೂರ್ಯನ ಚಿಹ್ನೆಯನ್ನು ನೇತುಹಾಕಿ.