Vaastu Tips: ಈ 8 ವಸ್ತುಗಳನ್ನ ಎಂದಿಗೂ ಯಾರಿಗೂ ಗಿಫ್ಟ್‌ ಮಾಡ್ಬೇಡಿ; ನೆಗೆಟಿವಿಟಿ ಹೆಚ್ಚುತ್ತೆ

By Suvarna NewsFirst Published Mar 6, 2024, 4:58 PM IST
Highlights

ಯಾವ್ಯಾವುದೋ ವಸ್ತುಗಳನ್ನು ಉಡುಗೊರೆ ನೀಡುವುದು ಉತ್ತಮವಲ್ಲ. ನಾವು ನೀಡುವ ವಸ್ತುಗಳು ಆ ಮನೆಯ ಎನರ್ಜಿ ಹರಿವಿನ ಮೇಲೆ ಪ್ರಭಾವ ಬೀರುವುದರಿಂದ ಗಿಫ್ಟ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ಎಂಟು ವಸ್ತುಗಳನ್ನಂತೂ ಉಡುಗೊರೆ ಮಾಡಲೇಬಾರದು.
 

ಯಾವುದಾದರೂ ಸನ್ನಿವೇಶ, ಸಮಾರಂಭಗಳಲ್ಲಿ ಬಂಧುಗಳಿಗೆ ಉಡುಗೊರೆ ನೀಡಲು ಉತ್ತಮ ಆಯ್ಕೆಗಳನ್ನು ಹುಡುಕುತ್ತೇವೆ. ಕೆಲವು ವಸ್ತುಗಳು ಗಿಫ್ಟ್‌ ನೀಡಲು ಅತ್ಯಂತ ಪ್ರಶಸ್ತವಾಗಿರುತ್ತವೆ. ಆದರೆ, ದಿನನಿತ್ಯದ ಜೀವನದಲ್ಲಿ ಬಳಕೆಗೆ ಬರುವ ವಸ್ತುಗಳನ್ನು ಗಿಫ್ಟ್‌ ಮಾಡಬೇಕು ಎನ್ನುವ ಆತುರದಲ್ಲಿ ಹಲವರು ಯಾವ್ಯಾವುದೋ ವಸ್ತುಗಳನ್ನು ಗಿಫ್ಟ್‌ ಮಾಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ನಾವು ನೀಡುವ ಉಡುಗೊರೆಗೆ ಮಹತ್ವದ ಸ್ಥಾನವಿದೆ. ಹೀಗಾಗಿ, ಕೆಲವು ವಸ್ತುಗಳನ್ನು ಗಿಫ್ಟ್‌ ಮಾಡುವುದು ಉಚಿತವಲ್ಲ. ನಾವು ನೀಡುವ ವಸ್ತುಗಳು ಆ ಮನೆಯ ಹಾಗೂ ಅಲ್ಲಿರುವ ಎನರ್ಜಿ ಹರಿವಿನ ಮೇಲೆ ಪ್ರಭಾವ ಬೀರುತ್ತವೆ. ಅದರಿಂದಾಗಿ ಅಲ್ಲಿನ ಎನರ್ಜಿ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ, ಪ್ರಮುಖವಾಗಿ 8 ವಸ್ತುಗಳನ್ನು ಯಾವ ಸನ್ನಿವೇಶದಲ್ಲೂ ಗಿಫ್ಟ್‌ ಮಾಡಬಾರದು. ನಿಮ್ಮ ಬಂಧುಗಳ ಜೀವನದಲ್ಲಿ ಧನಾತ್ಮಕ ಪ್ರಗತಿ ಉಂಟಾಗಬೇಕು ಎಂದು ನೀವು ಬಯಸುವುದಾದರೆ ಈ ವಸ್ತುಗಳನ್ನು ಗಿಫ್ಟ್‌ ಮಾಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ. ಇದನ್ನು ಅರಿತುಕೊಂಡು ಎಲ್ಲರೂ ಅನುಸರಿಸುವುದು ಉತ್ತಮ.

•    ಚೂಪಾದ (Sharp) ವಸ್ತುಗಳು
ಮನೆ ಬಳಕೆಯ ಚಾಕು, ಕತ್ತಿ ಸೇರಿದಂತೆ ಯಾವುದೇ ರೀತಿಯ ಚೂಪಾದ ಅಥವಾ ಮೊನಚಾದ ತುದಿಯನ್ನು ಹೊಂದಿದ ವಸ್ತುಗಳನ್ನು (Things) ಯಾವುದೇ ಕಾರಣಕ್ಕೂ ಗಿಫ್ಟ್‌ (Gift) ಮಾಡಬಾರದು. ಇವು ನೆಗೆಟಿವ್‌ ಎನರ್ಜಿಯನ್ನು (Negative Energy) ಉಂಟುಮಾಡುತ್ತವೆ. ಏಕತೆ (Unity) ಮತ್ತು ಧನಾತ್ಮಕತೆ ಹೆಚ್ಚಿಸುವ ವಸ್ತುಗಳನ್ನೇ ಉಡುಗೊರೆಯಾಗಿ ನೀಡಬೇಕು.

Vastu Tips: ಸಂಗಾತಿಗೆ ಇಂತಹ ಗಿಫ್ಟ್ ನೀಡೋದ್ರಿಂದ ಸಂಬಂಧ ಚೆನ್ನಾಗಿರುತ್ತೆ

•    ಕಪ್ಪು ಬಣ್ಣದ (Black Color) ವಸ್ತುಗಳು
ಕಪ್ಪು ಬಣ್ಣಕ್ಕೆ ನಕಾರಾತ್ಮಕ ಸಂಕೇತವಿದೆ. ಹೀಗಾಗಿ, ಕಪ್ಪು ಬಟ್ಟೆ (Cloth) ಸೇರಿದಂತೆ ಕಪ್ಪು ಬಣ್ಣದ ಯಾವುದೇ ವಸ್ತುವನ್ನು ಉಡುಗೊರೆಯನ್ನಾಗಿ ನೀಡಬಾರದು. 

•    ಕ್ಯಾಕ್ಟಿ ಅಥವಾ ಮುಳ್ಳುಗಳನ್ನು (Thorny) ಹೊಂದಿದ ಸಸ್ಯ
ಸಸ್ಯಗಳನ್ನು (Plant) ಉಡುಗೊರೆಯನ್ನಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಬೇರೆ ಯಾವುದಾದರೂ ಸಸ್ಯಗಳನ್ನು ನೀಡಬಹುದು, ಆದರೆ ಕ್ಯಾಕ್ಟಸ್‌ ನಂತಹ ಮುಳ್ಳುಗಳನ್ನು ಹೊಂದಿರುವ ಗಿಡಗಳನ್ನು ನೀಡಬಾರದು. ಇವು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ, ಜೀವನದ ಎಲ್ಲ ಹಂತಗಳಲ್ಲೂ ಅಡೆತಡೆಯನ್ನು ಉಂಟುಮಾಡುತ್ತವೆ ಎಂದು ವಾಸ್ತು ಶಾಸ್ತ್ರ (Vastu Shastra) ಎಚ್ಚರಿಕೆ ನೀಡುತ್ತದೆ.

•    ಗಡಿಯಾರ (Clock)
ಗಡಿಯಾರಗಳನ್ನು ಗಿಫ್ಟ್‌ ಮಾಡುವುದು ಸರ್ವೇ ಸಾಮಾನ್ಯ. ಆದರೆ, ವಾಸ್ತು ಶಾಸ್ತ್ರದಲ್ಲಿ ಗಡಿಯಾರ ಅಥವಾ ವಾಚ್‌ (Watch) ಉಡುಗೊರೆಯಾಗಿ ನೀಡುವ ವಸ್ತುಗಳಲ್ಲ. ಇವು ಸಮಯದ ಮಿತಿಯನ್ನು (Time Limit) ಸೂಚಿಸುತ್ತವೆ, ಕೆಲವೇ ಸಮಯವಿದೆ ಎಂದು ಹೇಳುತ್ತವೆ. ಸಮಯದೊಂದಿಗೆ ತಳುಕು ಹಾಕಿಕೊಂಡಿರುವ ಗಡಿಯಾರ ಸಂಬಂಧವನ್ನು (Relation) ಉತ್ತೇಜಿಸುವುದಿಲ್ಲ. ಪ್ರೀತಿ ಮತ್ತು ವೈಚಾರಿಕತೆಯ ಸಂಬಂಧವನ್ನು ಹೆಚ್ಚಿಸಲು, ಮುಂದುವರಿಸಲು ಸಮಯದ ಮಿತಿ ಮೀರಿರುವ ಯಾವುದೇ ವಸ್ತುವನ್ನು ಗಿಫ್ಟ್‌ ಮಾಡಬಹುದು. 

ಈ ಚಿಹ್ನೆಗಳನ್ನು ನೋಡಿದರೆ ಸಾವು ಹತ್ತಿರವಾಗಿದೆ ಎಂದರ್ಥ.. ಶಿವಪುರಾಣ ಏನು ಹೇಳುತ್ತದೆ?

•    ಇಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ (Electronic Gadget)
ಇಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ ಉಡುಗೊರೆ ನೀಡುವುದು ಸಹ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಮನೆಯಲ್ಲಿ ಇವು ನೈಸರ್ಗಿಕ (Natural) ಎನರ್ಜಿ ಹರಿವಿಗೆ ಧಕ್ಕೆ ತರುತ್ತವೆ. ಶಾಂತವಾದ ವಾತಾವರಣಕ್ಕೆ ಉತ್ತೇಜನ ನೀಡುವ ವಸ್ತುಗಳನ್ನು ಗಿಫ್ಟ್‌ ಮಾಡುವುದು ಉತ್ತಮ.

•    ಕನ್ನಡಿಗಳು (Mirrors)
ಕನ್ನಡಿಗಳು ಎನರ್ಜಿ ಹರಿವಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ವಾಸ್ತು ಶಾಸ್ತ್ರ ಕನ್ನಡಿಗಳನ್ನು ಮನೆಯಲ್ಲಿ ಎಲ್ಲಾದರೂ ಅಳವಡಿಸಬಾರದು ಎಂದು ಹೇಳುತ್ತದೆ. ಹಾಗೆಯೇ ಇದು ಗಿಫ್ಟ್‌ ಮಾಡಲು ಯೋಗ್ಯವಾದ ವಸ್ತುವಲ್ಲ. ಕನ್ನಡಿಗಳು ನಕಾರಾತ್ಮಕ ಎನರ್ಜಿಯನ್ನು ಪ್ರತಿಬಿಂಬಿಸುತ್ತವೆ ಹಾಗೂ ದುಪ್ಪಟ್ಟುಗೊಳಿಸುತ್ತವೆ ಎನ್ನಲಾಗುತ್ತದೆ. ಸಂತೋಷ (Joy) ಮತ್ತು ಸಕಾರಾತ್ಮಕತೆ ಹೆಚ್ಚಿಸುವ ವಸ್ತುಗಳನ್ನು ನೀಡುವುದು ಶ್ರೇಯಸ್ಕರ.

•    ಚರ್ಮದ (Leather) ವಸ್ತುಗಳು
ಹಲವರು ಪರ್ಸ್‌, ಬ್ಯಾಗ್‌ ಇನ್ನಿತರ ಚರ್ಮದ ವಸ್ತುಗಳನ್ನು ಗಿಫ್ಟ್‌ ಮಾಡುವುದು ಕಂಡುಬರುತ್ತದೆ. ಆದರೆ, ಚರ್ಮದ ವಸ್ತು ಉಡುಗೊರೆ ನೀಡಲು ಯೋಗ್ಯವಲ್ಲ. ಚರ್ಮಕ್ಕೂ ನೆಗೆಟಿವ್‌ ಎನರ್ಜಿಗೂ ಸಂಬಂಧವಿದೆ. 

•    ಕಲಾತ್ಮಕ ವಸ್ತು (Art Work)
ಪೇಂಟಿಂಗ್‌, ಶಿಲ್ಪಕಲೆಯಂತಹ ಕಲಾತ್ಮಕ ವಸ್ತುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಇರಲಿ. ಏಕೆಂದರೆ, ಅವು ನಕಾರಾತ್ಮಕ ಹಾಗೂ ಅಗ್ರೆಸ್ಸಿವ್‌ ಧೋರಣೆಗೆ ಪ್ರೇರಣೆ ನೀಡಬಲ್ಲವು. ಖುಷಿ ಮತ್ತು ಶಾಂತಿ (Peace) ನೀಡುವ ವಸ್ತುಗಳನ್ನು ಮಾತ್ರ ಆಯ್ಕೆ ಮಾಡಬೇಕು. 
 

click me!