ಅಮಿತಾಭ್‌ ಬಚ್ಚನ್‌ ಲಕ್ಕಿ: ಅಷ್ಟಕ್ಕೂ ಅವರ ಮನೆ ವಾಸ್ತು ಹೇಗಿದೆ?

By Suvarna NewsFirst Published Jan 8, 2020, 12:34 PM IST
Highlights

ಬಾಲಿವುಡ್‌ನ ಶೆಹನ್‌ಶಾ ಆಗಿರುವ ಅಮಿತಾಭ್‌ ಬಚ್ಚನ್‌ ಅವರಲ್ಲಿ ನಟನಾ ಪ್ರತಿಭೆ ಹೇರಳವಾಗಿದೆ. ಅದರ ಜೊತೆಗೆ, ಅವರ ಮನೆಯ ವಾಸ್ತು ಕೂಡ ಅವರ ವೃತ್ತಿ ಜೀವನಕ್ಕೆ ಪೂರಕವಾಗಿದ್ದು, ಅದರಿಂದಲೂ ಅವರು ಅಷ್ಟೊಂದು ಫೇಮಸ್‌ ಆಗೋಕೆ ಸಾಧ್ಯವಾಗಿದೆ!

ಬಾಲಿವುಡ್‌ನ ನಟ ನಟಿಯರಿಗೆ ವಾಸ್ತು ಟಿಫ್ಸ್‌ ಕೊಡೋ ತಜ್ಞರ ಪ್ರಕಾರ, ಈಗಿರುವ ಶ್ರೀಮಂತ, ಪ್ರತಿಭಾವಂತ ನಟ ನಟಿಯರ ಮನೆಗಳಲ್ಲೆಲ್ಲ ಅಮಿತಾಭ್‌ ಬಚ್ಚನ್‌ ಮನೆ ವಾಸ್ತು ಪ್ರಕಾರ ಹಂಡ್ರಡ್‌ ಪರ್ಸೆಂಟ್‌ ಅದೃಷ್ಟ ತಂದುಕೊಡೋ ಹಾಗೆ ನಿರ್ಮಾಣವಾಗಿದೆ. ಅದರಿಂದಲೇ ಅವರು ಕೈಹಾಕಿದ ಎಲ್ಲ ಪ್ರಾಜೆಕ್ಟ್ಗಳಲ್ಲೂ ಸಕ್ಸಸ್‌ ಹೊಂದುವಂತಾಗಿದೆ. 70 ವರ್ಷವಾಗಿದ್ದರೂ ಇನ್ನೂ ಕೂಡ ಬಾಲಿವುಡ್ಡನ್ನು ಆಳಲು ಅವರಿಂದ ಸಾಧ್ಯವಾಗಿರೋದು ಇದರಿಂದಲೇ! ಹಾಗೆನ್ನುತ್ತಾರೆ ವಾಸ್ತು ತಜ್ಞರು. ಅದೇನು ವಿಶೇಷತೆ ತಿಳಿಯೋಣ ಬನ್ನಿ.

ಈಶಾನ್ಯ ದಿಕ್ಕಿಗೆ ಮುಖ್ಯದ್ವಾರ
ಅಮಿತಾಭ್‌ ತಮ್ಮ ಮನೆಗೆ ಪ್ರತೀಕ್ಷಾ’ ಎಂಬ ಚಂದದ ಹೆಸರಿಟ್ಟಿದ್ದಾರೆ. ಇದು ಮಂಗಳವನ್ನು ಉಂಟುಮಾಡುವಂಥದ್ದು. ಈ ಬಂಗಲೆಯ ಮುಖ್ಯ ದ್ವಾರ ಈಶಾನ್ಯ - ಅಂದರೆ ದೇವರ ದಿಕ್ಕಿಗೆ ಇದೆ. ಯಶಸ್ಸು ಮತ್ತು ಲಕ್ಷ್ಮೇದೇವಿ ಮನೆಗೆ ಆಗಮಿಸುವುದು ಈ ದಿಕ್ಕಿನಿಂದಲೇ. ಎಲ್ಲ ಪಾಸಿಟಿವ್‌ ಎನರ್ಜಿಗಳೂ ಈಶಾನ್ಯ ದಿಕ್ಕಿನಿಂದಲೇ ಮನೆಗೆ, ಮನಸ್ಸಿಗೆ ಆಗಮಿಸುತ್ತವೆ. ಮನೆಯ ಜನಮಾನ ಧನವಂತ, ಆರೋಗ್ಯವಂತ ಅನಿಸುತ್ತಾನೆ.

ಹಲ್ಲಿ ನೋಡಿ ಹಳ್ಳಕ್ಕೆ ಬೀಳೋ ಮುನ್ನ

ಎರಡು ದಿಕ್ಕಿಗೆ ರಸ್ತೆಗಳು
ಅಮಿತಾಭ್‌ ಅವರ ಭವನ ಎರಡು ರಸ್ತೆಗಳು ಬಂದು ಸಂಧಿಸುವ ಕಾರ್ನರ್‌ನಲ್ಲಿದೆ. ಈ ರಸ್ತೆಗಳು ಮನೆಯ ಪೂರ್ವ ಹಾಗೂ ಉತ್ತರ ದಿಕ್ಕಿಗೆ ಇವೆ. ಮನೆಯಿಂದ ಈ ಎರಡೂ ದಿಕ್ಕಿಗೆ ರಸ್ತೆಗಳಿದ್ದರೆ ಆ ಭವನಕ್ಕೆ ಖುಲಾಯಿಸುವ ಅದೃಷ್ಟವೇ ಬೇರೆ. ಈ ದಿಕ್ಕಿನಿಂದ ತೆರೆದಿಟ್ಟಿರುವ ಬಾಗಿಲು ಕಿಟಕಿಗಳ ಮೂಲಕ ಬಂಗಲೆಗೆ ಕಾಸ್ಮಿಕ್‌ ಕಿರಣಗಳ ಪ್ರವೇಶ ಆಗುತ್ತದೆ. ಸೂರ‍್ಯನ ಕಿರಣಗಳ ಮೂಲಕ ಆಗಮಿಸುವ ವಿಟಮಿನ್‌ ಡಿಯು ಮನುಷ್ಯನ ದೇಹದ ಆರೋಗ್ಯ ಕಾಪಾಡಿಕೊಳ್ಳಲೂ ಅಗತ್ಯವಾಗಿದೆ. ಮುಂಜಾನೆ ಹೊತ್ತಿಗೆ ಹೆಚ್ಚಿನ ಬೆಳಕು ಮತ್ತು ಮಿತ ಶಾಖ ನೀಡುವ ಸೂರ‍್ಯ ಕಿರಣಗಳು ಹೆಚ್ಚಿನ ಪ್ರಯೋಜನಕಾರಿ.

ಆಗ್ನೇಯ ದಿಕ್ಕಿಗೆ ಟ್ರಾನ್ಸ್‌ಫಾರ್ಮರ್‌
ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಲಿ ಅನ್ನುವುದು ಎಲ್ಲ ವಾಸ್ತು ತಜ್ಞರೂ ಮನೆ ಕಟ್ಟಿಸಿಕೊಳ್ಳುವವರಿಗೆ ಹೇಳುವ ಕಿವಿಮಾತು. ಅಗ್ನಿಯು ಮನುಷ್ಯಯರಿಗೆ ಅಗತ್ಯವಾದ ಶಾಖ, ಮತ್ತು ಪಾಕ (ಅಡುಗೆ)ಗಳನ್ನು ನೀಡುವ ದೇವತೆ. ಈತನ ಪ್ರಸ್ತುತಿ ಸದಾ ಕಾಲ ಮನೆಯಲ್ಲಿ ಹಿತಮಿತವಾಗಿ ಇರಬೇಕೆಂದಿದ್ದರೆ ಅಡುಗೆಮನೆ ಆಗ್ನೇಯದಲ್ಲಿರಬೇಕು. ಅಮಿತಾಭ್‌ ಅವರ ಕಿಚನ್‌ ಆಗ್ನೇಯ ದಿಕ್ಕಿನಲ್ಲಿದೆ ಮಾತ್ರವಲ್ಲ, ಅವರ ಮನೆಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕೂಡ ಆಗ್ನೇಯದಲ್ಲಿದೆ.

ಕನ್ನಡಿ ಮತ್ತು ಯಂತ್ರ
ಮನೆಯಲ್ಲಿ ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಬಳಸುವುದು, ಯಂತ್ರಗಳನ್ನು ಬಳಸುವುದು ಇವುಗಳನ್ನೆಲ್ಲ ಅಮಿತಾಭ್‌ ನಂಬುತ್ತಾರೆ. ವಾಸ್ತು ತಜ್ಞರ ಸಲಹೆಯಂತೆ ಮನೆಯ ಉತ್ತರ ದಿಕ್ಕಿನ ಗೋಡೆಯಲ್ಲಿ ಒಮದಾಳೆತ್ತರದ ಕನ್ನಡಿ ಇಟ್ಟಿದ್ದಾರೆ. ಅಲ್ಲೇ ಕುಬೇರ ಯಂತ್ರವನ್ನೂ ಫಿಕ್ಸ್‌ ಮಾಡಿದ್ದಾರೆ. ಇದು ಅವರಲ್ಲಿ ಶ್ರೀಮಂತಿಕೆ ನಿಕ್ಷೇಪವಾಗಲು ಒಂದು ಪ್ರಮುಖ ಕಾರಣ.

ಮನೆ, ಕಚೇರಿಗೆ ಸಂತೋಷ, ಸಮೃದ್ಧಿ ತರೋ ಸಸ್ಯಗಳಿವು

ಆಭರಣಗಳು ನೈರುತ್ಯದಲ್ಲಿ
ಅಮಿತಾಭ್‌ ತಮ್ಮ ಮನೆಯ ಶ್ರೀಮಂತಿಕೆಯನ್ನು ಅರ್ಥಾತ್‌ ಆಭರಣಗಳು ಇತ್ಯಾದಿಗಳನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟಿರುತ್ತಾರಂತೆ. ನೈರುತ್ಯ ಲಕ್ಷ್ಮೇದೇವಿಗೆ ಪ್ರಿಯವಾದ ದಿಕ್ಕು. ಮನೆಯ ಆಭರಣಗಳನ್ನು, ಹಣವನ್ನು ಇಡುವ ವಾರ್ಡ್‌ರೋಬ್‌ ಅಥವಾ ಶೆಲ್ಫ್‌ಗಳನ್ನು ಈ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂಬುದು ತಜ್ಞರ ಅಭಿಮತ. ಆದರೆ ವಾರ್ಡ್‌ರೋಬ್‌ನ ಬಾಗಿಲುಗಳು ದಕ್ಷಿಣ ಅಥವಾ ಉತ್ತರಕ್ಕೆ ತೆರೆಯುವಂತೆ ಇರಕೂಡದು. ಹೀಗಿದ್ದರೆ ಖರ್ಚು ಹೆಚ್ಚಾಗುತ್ತದಂತೆ. ಅಮಿತಾಭ್‌ ಈ ಸಲಹೆಗಳನ್ನು ಪಾಲಿಸುತ್ತಾರೆ.

ವಾಯುವ್ಯದಲ್ಲಿ ಕಾರಂಜಿ
ವಾಸ್ತುತಜ್ಞರ ಪ್ರಕಾರ ಮನೆಯ ವಾಯುವ್ಯ ದಿಕ್ಕಿನಲ್ಲಿ ಶುದ್ಧ ನೀರಿನ ತಾಣಗಳು ಇರಬೇಕು. ಹೀಗಾಗಿ ಅಕ್ವೇರಿಯಂ ಮತ್ತು ಪುಟ್ಟ ಕಾರಂಜಿಗಳನ್ನು ಅಮಿತಾಭ್‌ ಈ ದಿಕ್ಕಿನಲ್ಲಿ ಸ್ಥಾಪಿಸಿದ್ದಾರೆ. ಈ ದಿಕ್ಕಿನಲ್ಲೇ ಅಮಿತಾಭ್‌ ಮನೆಯ ಪಾರ್ಕ್‌ ಕೂಡ ಇದೆ.

ಆರೋಗ್ಯ ಸ್ಥಿರವಾಗಿರಲು ವಾಸ್ತು ಶಾಸ್ತ್ರ

click me!