ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಹಿಳೆಯೋರ್ವರು 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆ ಘಟನೆ ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಡೆದಿದೆ.
ಉತ್ತರ ಕನ್ನಡ (ಏ.21): ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಹಿಳೆಯೋರ್ವರು 108 ಆ್ಯಂಬುಲೆನ್ಸ್‌ನಲ್ಲೇ (108 ambulance) ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆ ಘಟನೆ ನಡೆದಿದೆ. ಉತ್ತರ ಕನ್ನಡ (Uttarakannada) ಜಿಲ್ಲೆಯ ಯಲ್ಲಾಪುರ (Yellapura) ತಾಲೂಕಿನ ಸಣ್ಣಯಲವಳ್ಳಿಯ ಗೀತಾ ಎಂಬ ಮಹಿಳೆಗೆ ಸಣ್ಣಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಶಾ ಕಾರ್ಯಕರ್ತೆ (ASHA worker) ಸೀಮಾ ನಾಯ್ಕ್ ಅವರ ಮೂಲಕ 108ಕ್ಕೆ ಕರೆ ಮಾಡಿ ಕರೆಯಿಸಲಾಗಿತ್ತು. ಬಳಿಕ ಗರ್ಭಿಣಿ ಗೀತಾ ಅವರನ್ನು 108 ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ
ಆದರೆ, ರಕ್ತದೊತ್ತಡ ಹೆಚ್ಚಿದ್ದ ಕಾರಣ ಹೆರಿಗೆ ಮಾಡಿಸುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಈ ಕಾರಣದಿಂದ ಹುಬ್ಬಳ್ಳಿಯ ಕಿಮ್ಸ್ (Hubballi Kims) ಆಸ್ಪತ್ರೆಗೆ ಹೋಗಬೇಕೆಂದು ವೈದ್ಯರು ತಿಳಿಸಿದ್ದರು. ಆದರೆ, ಹುಬ್ಬಳ್ಳಿಗೆ ಕರೆದೊಯ್ಯುವ ಮಾರ್ಗಮಧ್ಯೆ ಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
108 ವಾಹನದ ಸಿಬ್ಬಂದಿ, ತಂತ್ರಜ್ಞ ಶಿವಕುಮಾರ್ ಇಟಗಿ, ಚಾಲಕ ಶ್ರೀಶೈಲ ಮಾದರ್‌ರಿಂದ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ನಂತರ ಪ್ರಥಮ ಚಿಕಿತ್ಸೆ ನೀಡಿ, ಗೀತಾ ಹಾಗೂ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC Nagesh
ಸಿದ್ದರಾಮಯ್ಯರನ್ನು ಸುಳ್ಳಿನ ರಾಮಯ್ಯ ಎಂದ HDK: ಮಾಜಿ ಸಿಎಂಗಳಾದ ಹೆಚ್‌ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಸಿದ್ದರಾಮಯ್ಯ (Siddaramaiah) ನಡುವಣ ವಾಕ್ ಸಮರ ತಾರಕಕ್ಕೇರಿದೆ. ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಇಂದು ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಖಾರವಾಗಿ ಉತ್ತರಿಸಿದರು. ನಾನು ಚಪಲಕ್ಕೊ ಅಥವಾ ಯಾರಿಗೋ ತೊಂದರೆ ಕೊಡಲು ಮಾತನಾಡುವುದಿಲ್ಲ ಎಂದರು.
ಸುಳ್ಳಿನ ರಾಮಯ್ಯ ಪುನರುಚ್ಚಿಸಿದ ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು. 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದ ಮೂಲಕ ಅಂತ ಪ್ರಯತ್ನ ನಡೆಸಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ರು. ಸಿದ್ದರಾಮಯ್ಯ ಮಹಾನ್ ನಾಯಕ. ಅವರು ಹುಟ್ಟಿದಾಗಿನಿಂದಲೂ ಜಾತ್ಯಾತೀತ ಶಕ್ತಿಗಳನ್ನು ಬೆಳೆಸಿದ್ದಾರಾ ಅಂತ ಪ್ರಶ್ನೆ ಮಾಡಿದರು.
ನಾನು ಕೆ ಎಸ್ ಈಶ್ವರಪ್ಪ ಲಾಯರ್ ಅಲ್ಲ. ಅವರ ಮೇಲೆ ಯಾವ ಸಾಫ್ಟ್ ಕಾರ್ನರ್ ಸಹಾ ಇಲ್ಲ. ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ. ಸಂತೋಷ ಅವರೇ ವಾಟ್ಸ್‌ಅಪ್ ಕಳುಹಿಸಿದ್ದಾರೆ. ನಾನು ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಈಶ್ವರಪ್ಪ ತಪ್ಪು ಮಾಡಿದ್ದರೆ ಸಂತೋಷ್ ಸಾವಿಗೆ ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ ಎಂದರು. ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಅಂತಾ ಸಂತೋಷ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದರು.
ಇನ್ನು ರಾಜ್ಯದಲ್ಲಿ ಆಜಾನ್ ದಂಗಲ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಸಿಎಂ ನೇತೃತ್ವದಲ್ಲಿ ಧಾರ್ಮಿಕ ಗುರುಗಳ ಸಭೆ ನಡೆದು ಆ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಿ ಎಂದರು. ಹುಬ್ಬಳಿ ಗಲಭೆ ವಿಚಾರವಾಗಿ ಮಾತಾನಡಿದ ಅವರು ಇಬ್ಬರು ಪೊಲೀಸರ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಅವರಿಗೆ ಪ್ರೇರೆಪಣೆ ಕೊಟ್ಟವರು ಯಾರು ? ಪೊಲೀಸ್ ವಾಹನದ ಮೇಲೆ ನಿಂತು ಭಾಷಣ ಮಾಡಲು ಅವಕಾಶ ಕೊಟ್ಟವರು ಯಾರು. ಆತನನ್ನು ಏಕೆ ಬಂಧಿಸಿಲ್ಲ ಆತ ಎಲ್ಲಿ ಹೋದ ಎಂದೆಲ್ಲ ಪ್ರಶ್ನೆ ಮಾಡಿದರು. ಎರಡು ಪಕ್ಷಗಳೂ ಒಬ್ಬರು ಬೆಂಕಿ ಹಚ್ಚುತ್ತಾರೆ. ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.