Ananth kumar hegde;ರಾಜಕೀಯ ಬದ್ಧವೈರಿ ಅಸ್ನೋಟಿಕರ್ ಮನೆಗೆ ದಿಢೀರ್ ಭೇಟಿ ನೀಡಿದ ಹೆಗಡೆ!

By Suvarna NewsFirst Published Nov 8, 2021, 5:12 PM IST
Highlights
  • ರಾಜಕೀಯ ಬದ್ಧವೈರಿ ಮನೆಗೆ ಅನಂತ್ ಕುಮಾರ್ ಹೆಗಡೆ ಭೇಟಿ
  • ಅಸ್ನೋಟಿಕರ್ ತಾಯಿ ಆರೋಗ್ಯ ವಿಚಾರಿಸಲು ಕಾರವಾರ ನಿವಾಸಕ್ಕೆ ಭೇಟಿ
  • ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಆನಂದ್ ಅಸ್ನೋಟಿಕರ್ ತಾಯಿ

ಕಾರವಾರ(ನ.08):  ರಾಜಕೀಯ ಬದ್ಧವೈರಿ(Karnataka political), ಪರಸ್ವರ ಗಂಭೀರ ಆರೋಪ ಪ್ರತ್ಯಾರೋಪದ ಮೂಲಕ ಬಿಜೆಪಿ(BJP MP) ನಾಯಕ, ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಜೆಡಿಎಸ್ ನಾಯಕ ಆನಂದ್ ಅಸ್ನೋಟಿಕರ್ ಗುರುತಿಸಿಕೊಂಡಿದ್ದಾರೆ. ಎದುರು ಬದರು ಸಿಕ್ಕರೂ ಮುಖ ನೋಡದೆ ಹೋಗುವಷ್ಟರ ಮಟ್ಟಿಗೆ ಇವರಿಬ್ಬರ ಜಗಳ ತಾರಕಕ್ಕೇರಿತ್ತು. ಆದರೆ ದಿಢೀರ್ ಅನಂತ್ ಕುಮಾರ್ ಹೆಗಡೆ, ಅಸ್ನೋಟಿಕರ್ ಮನೆಗೆ ಭೇಟಿ ನೀಡಿ ಅಚ್ಚರಿ ನೀಡಿದ್ದಾರೆ. ಎಲ್ಲಾ ವೈರತ್ವ ಮರೆತು ಅಸ್ನೋಟಿಕರ್ ತಾಯಿ ಆರೋಗ್ಯ ವಿಚಾರಿಸಲು ಅನಂತ್ ಕುಮಾರ್ ಹೆಗಡೆ ಅಸ್ನೋಟಿಕರ್ ಮನೆಗೆ ಭೇಟಿ ನೀಡಿದ್ದಾರೆ.

ಅನಂತ್ ಕುಮಾರ್ ಹೆಗಡೆ(Ananth kumar hegde) ಹಾಗೂ ಆನಂದ್ ಅಸ್ನೋಟಿಕರ್(anand asnotikar) ಆರೋಪ ಪತ್ಯಾರೋಪಗಳ ವಿಡಿಯೋ ಇನ್ನು ಹರಿದಾಡುತ್ತಿದೆ. ಆದರೆ ಈ ಎಲ್ಲಾ ದ್ವೇಷವನ್ನು ಬದಿಗಿಟ್ಟು ಅನಂತ್ ಕುಮಾರ್ ಹೆಗಡೆ, ಅಸ್ನೋಟಿಕರ್ ಮನೆಗೆ ಭೇಟಿ ನೀಡಿದ್ದಾರೆ.  ಆನಂತ್ ಕುಮಾರ್ ಹೆಗೆಡೆಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಸಾಥ್ ನೀಡಿದ್ದಾರೆ. ಹಲವು ಆರೋಗ್ಯ(Health) ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅಸ್ನೋಟಿಕರ್ ತಾಯಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್(Shubhalatha Asnotikar) ಆರೋಗ್ಯ ವಿಚಾರಿಸಿದ್ದಾರೆ.

ಸಚಿವ ಅನಂತ್ ಕುಮಾರ್ ಹೆಗಡೆಗೆ ಕೊಲೆ ಬೆದರಿಕೆ

ಶುಭಲತಾ ಅಸ್ನೋಟಿಕರ್ ಇತ್ತೀಚೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಶಸ್ತ್ರಚಿಕಿತ್ಸೆ, ಡಯಾಲಿಸ್ ಸೇರಿದಂತೆ ಹಲವು ಆರೋಗ್ಯ ಸಮಸ್ಸೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ಪೆಯಿಂದ ಬಿಡುಗಡೆಯಾಗಿ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶುಭಲತಾ ಅಸ್ನೋಟಿಕರ್ ಆರೋಗ್ಯ ವಿಚಾರಿಸಿ, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಸಂಸದ ಅನಂತ್ ಕುಮಾರ್ ಹೆಗಡೆ ಮನಗೆ ಆಗಮಿಸುತ್ತಿದ್ದಂತೆ ಆನಂದ್ ಅಸ್ನೋಟಿಕರ್ ಆತ್ಮೀಯ ಸ್ವಾಗತ ನೀಡಿದ್ದಾರೆ. ಬಳಿಕ ಇಬ್ಬರು ಜೊತೆಗೂಡಿ ಶುಭಲತಾ ಅಸ್ನೋಟಿಕರ್ ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಗೆ ತೆರಳಿದ್ದಾರೆ. ಆನಂತ್ ಕುಮಾರ್ ಹೆಗೆಡೆ ಹಾಗೂ ಅಸ್ನೋಟಿಕರ್ ತಾಯಿ ಶುಭಲತಾ ಆತ್ಮೀಯರಾಗಿದ್ದಾರೆ. ಹಲವು ಬಾರಿ ಅನಂತ್ ಕುಮಾರ್ ಹೆಗಡೆ ಪ್ರಚಾರ ಸಭೆಯಲ್ಲಿ ಶುಭಲತಾ ಕಾಣಿಸಿಕೊಂಡಿದ್ದಾರೆ. 

ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಅನಂತ್ ಕುಮಾರ್ ಹೆಗಡೆ ನಿರಾಕರಿಸಿದ್ದಾರೆ. ಇತ್ತ ಅನಂತ್ ಕುಮಾರ್ ಹೆಗೆಡೆ ಜೊತೆ ರಾಜಕೀಯ ಭಿನ್ನಾಭಿಪ್ರಾಯವಿದೆ. ಆದರೆ ವೈಯುಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾವಿಲ್ಲ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.  

ನನ್ನ ಹೇಳಿಕೆ ಅರ್ಥ ಆಗದವರಿಂದ ವಿವಾದ ಸೃಷ್ಟಿ

ಚೇತರಿಸಿಕೊಂಡ ಆನಂತ್ ಕುಮಾರ್ ಹೆಗಡೆ :
ಸಂಸದ ಅನಂತ್ ಕುಮಾರ್ ಹೆಗಡೆ ಇತ್ತೀಚೆಗಷ್ಟೇ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬೆನ್ನು ನೋವು ಹಾಗೂ ಕಾಲು ನೋವು ಹೆಚ್ಚಾದ ಕಾರಣ ಮಂಗಳೂರಿನ ಆಸ್ಪತ್ರೆ ದಾಖಲಾಗಿದ್ದರು. ಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಮನೆಯಲ್ಲಿ ವಿಶ್ರಾಂತಿಗೆ ಜಾರಿದ್ದರು. ಹೀಗಾಗಿ ಯಾವುದೇ ಸಭೆ ಸಮಾರಂಭಗಳಿಂದ ಅನಂತ್ ಕುಮಾರ್ ಹೆಗಡೆ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಎಲ್ಲಾ ಕಾಣಿಸಿಕೊಳ್ಳದ ಅನಂತ್ ಕುಮಾರ್ ಹೆಗೆಡೆ ಇದೀಗ ದಿಢೀರ್ ಆನಂದ್ ಅಸ್ನೋಟಿಕರ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೆಡಿಎಸ್‌ನಲ್ಲಿ ಮುಂದುವರಿತರಾ ಅಸ್ನೋಟಿಕರ್?
ತಾಯಿ ಆರೋಗ್ಯಕಾರಣದಿಂದ ರಾಜಕೀಯದಿಂದ ದೂರ ಉಳಿದಿರುವ ಆನಂದ್ ಅಸ್ನೋಟಿಕರ್ ಮತ್ತೆ ಜೆಡಿಎಸ್‌ನಲ್ಲಿ ಮುಂದುವರಿಯುತ್ತಾರಾ ಅನ್ನೋ ಪ್ರಶ್ನೆ ಹಲವು ಬಾರಿ ಎದ್ದಿದೆ. ಕಾರಣ ಇತ್ತೀಚೆಗೆ ಜೆಡಿಎಸ್‌ನಿಂದಲೂ ದೂರ ಉಳಿದಿರುವ ಅಸ್ನೋಟಿಕರು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಸೇರಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತು ಅಸ್ನೋಟಿಕರ್ ಯಾವುದೇ ಹೇಳಿಕೆ ಅಥವಾ ಸ್ಪಷ್ಟನೆ ನೀಡಿಲ್ಲ. 

ತಾಯಿ ಆರೋಗ್ಯ ಚೇತರಿಕೆ ಬಳಿಕ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಅಸ್ನೋಟಿಕರ್ ನಿರ್ಧರಿಸಿದ್ದಾರೆ. ಇದರ ನಡುವೆ ಅಭ್ಯರ್ಥಿಯಾಗಿ ಸ್ಪರ್ಧಿಸುವತ್ತವೂ ಅಸ್ನೋಟಿಕರ್ ಚಿತ್ತ ಹರಿಸಿದ್ದಾರೆ. ಸದ್ಯ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಇನ್ನು ವರ್ಷಗಳ ಅಂತರವಿದೆ. ಹೀಗಾಗಿ ಸದ್ಯ ಅಸ್ನೋಟಿಕರ್ ಮನೆಯಲ್ಲೇ ತಾಯಿ ಆರೋಗ್ಯ ನೋಡಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದಾರೆ.

click me!