ಹಾವಿನೊಂದಿಗೆ ಸರಸವಾಡುವ ಶಿರಸಿಯ ಆರು ವರ್ಷದ ಬಾಲಕ: ವೀಡಿಯೋ ವೈರಲ್

Published : Jul 02, 2023, 04:06 PM IST
ಹಾವಿನೊಂದಿಗೆ ಸರಸವಾಡುವ ಶಿರಸಿಯ ಆರು ವರ್ಷದ ಬಾಲಕ: ವೀಡಿಯೋ ವೈರಲ್

ಸಾರಾಂಶ

ಹಾವಿನೊಂದರ ಬಾಲ ಹಿಡಿದು ಪುಟ್ಟ ಬಾಲಕನೋರ್ವ ಆಟವಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಘಟನೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಶಿರಸಿ: ಹಾವಿನೊಂದರ ಬಾಲ ಹಿಡಿದು ಪುಟ್ಟ ಬಾಲಕನೋರ್ವ ಆಟವಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಘಟನೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೊವನ್ನು ಸುಭಾಷ್ ಚಂದ್ರ ಎನ್‌ ಎಸ್‌ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರು ನೀಡಿರುವ ವಿವರದಂತೆ ಈ ಪುಟ್ಟ ಹುಡುಗ ಶಿರಸಿಯವನಾಗಿದ್ದು,  ಆರು ವರ್ಷದ ಬಾಲಕನ ಹೆಸರು ವಿರಾಜ್ ಪ್ರಶಾಂತ್ (Viraj Prashant)ಎಂದು ಉಲ್ಲೇಖಿಸಿದ್ದಾರೆ. 

ವೀಡಿಯೋದಲ್ಲಿ ನಗು ಮುಖದ ಪುಟ್ಟ ಬಾಲಕ ತಲೆಗೊಂಡು ಟೋಪಿ ಹಾಕಿಕೊಂಡಿದ್ದು, ಬರಿಗೈಲಿ ಈ ಬಾರಿ ಗಾತ್ರದ ಹಾವನ್ನು ಹಿಡಿದುಕೊಂಡಿದ್ದಾನೆ. ಹಾವು ಆತನ ಮೂರು ಪಾಲು ಉದ್ದವಿದ್ದರೂ ಆತ ಸ್ವಲ್ಪವೂ ಬೆದರದೇ ಹಾವಿನೊಂದಿಗೆ ಆಟವಾಡುತ್ತಿರುವುದು ಅಚ್ಚರಿ ಮೂಡಿಸಿದೆ. ವೀಡಿಯೋದ ಹಿನ್ನೆಲೆಯಲ್ಲಿ ಜನ ಭಯದಿಂದ ದೂರ ನಿಂತು ನೋಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ವಿಷ ಸರ್ಪ ಕಚ್ಚಿ ಆಸ್ಪತ್ರೆ ಸೇರಿದ, ಚೇತರಿಸಿಕೊಂಡು ಮರಳಿದ ಬೆನ್ನಲ್ಲೇ ಮತ್ತೆ ಹಾವು ಕಚ್ಚಿ ಸಾವು!

ಬಹುತೇಕ ಜನ ಹಾವು ಎಂದರೆ ಹೆದರಿ ಓಡಿ ಹೋಗೋದೆ ಹೆಚ್ಚು, ಪ್ರಪಂಚದ ಅತ್ಯಂತ ವಿಷಕಾರಿ ಹಾಗೂ ಭಯಾನಕ ಸೃಷ್ಟಿ ಎನಿಸಿರುವ ಹಾವುಗಳು ಅವುಗಳ ವಿಶಿಷ್ಟತೆಯಿಂದ ಆಗಾಗ ಜನರನ್ನು ಆಕರ್ಷಿಸುವುದು ಕೂಡ ಸುಳ್ಳಲ್ಲ, ವಿಷಕಾರಿಯಾದ ಈ ನಾಗರಹಾವುಗಳು ಕಚ್ಚಿದರೆ ತತ್‌ಕ್ಷಣವೇ ಚಿಕಿತ್ಸೆ ಸಿಗದಿದ್ದಲ್ಲಿ ಸಾವು ಗ್ಯಾರಂಟಿ. ಆದರೂ ಕೂಡ ಕೆಲವರು ಆ ಹಾವಿನತ್ತ ಅತೀಯಾಗಿ ಆಕರ್ಷಿತರಾಗುತ್ತಾರೆ ಅವುಗಳೊಂದಿಗೆ ಸರಸವಾಡುತ್ತಾರೆ. ಹಾಗೆಯೇ ಇಲ್ಲಿ ಬಾಲಕ ತನಗಿಂತ ಮೂರು ಪಾಲು ಉದ್ದ ನಾಗರಹಾವಿನೊಂದಿಗೆ ಆಟವಾಡುತ್ತಿದ್ದು, ಹಾವು ಏನು ಮಾಡದೇ ಇರುವುದು ಅಚ್ಚರಿ ಮೂಡಿಸಿದೆ.

ಭಯ ಹಾಗೂ ಕುತೂಹಲವನ್ನು ಹುಟ್ಟಿಸಿದ ಈ ಹಾವು ಹಾಗೂ ಪುಟ್ಟ ಬಾಲಕನ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಅನೇಕರು ವೀಡಿಯೋ ನೋಡಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  ಈ ಬಾಲಕನ ಪೋಷಕರ ವಿರುದ್ಧ ದೂರು ದಾಖಲಿಸಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಹಾವು ಆ ಪುಟ್ಟ ಬಾಲಕನ ಮೂರು ಪಾಲು ಉದ್ದವಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇಂತಹ ದೃಶ್ಯವನ್ನು ಪ್ರೋತ್ಸಾಹಿಸಬಾರದು, ಒಂದೇ ಒಂದು ಕಡಿತ ಮಾರಣಾಂತಿಕವಾಗಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಹಾವಿನ ಎದುರು ಯಾರೋ ಇದ್ದಾರೆ, ಅವರು ಈ ಹಾವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. 

Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!

ಇದೊಂದು ಭಯಾನಕ ದೃಶ್ಯ, ಹಾವುಗಳು ತುಂಬಾ ವೇಗವಾಗಿ ದಾಳಿ ಮಾಡಬಲ್ಲವು. ಕೂಡಲೇ ತಿರುಗಿ ನಿಂತು ಆತನಿಗೆ ಕಚ್ಚುವ ಸಾಧ್ಯತೆಯೂ ಇದೆ. ಆತನ ಜೊತೆ ಇರುವ ಹಾವು ರಕ್ಷಕ ಯಾರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಗಮನ ಸೆಳೆಯುವ ಸಲುವಾಗಿ ಮಕ್ಕಳ ಜೀವ ಅಪಾಯಕ್ಕೆ ತಳ್ಳುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

 

PREV
Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!