ಅರೆಬರೆ ಉಡುಪು ಧರಿಸಿ ಸಂಚರಿಸಬೇಡಿ: ಗೋಕರ್ಣ ಮಹಾಬಲೇಶ್ವರ ದೇಗುಲ ಸಮಿತಿಯ ವಿವಾದಿತ ಬ್ಯಾನರ್..!

By Suvarna NewsFirst Published Nov 12, 2022, 3:27 PM IST
Highlights

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಿಂದ ಕಡಲತೀರ ಹಾಗೂ ಇತರೆಡೆ ತೆರಳುವ ಪ್ರದೇಶದಲ್ಲಿ ದೇವಸ್ಥಾನದ ಸಮಿತಿಯಿಂದ  ವಿವಾದಾತ್ಮಕ ಸೂಚನಾ ಫಲಕ ಅಳವಡಿಕೆ ಮಾಡಲಾಗಿದೆ.

ಕಾರವಾರ, ಉತ್ತರಕನ್ನಡ (ನವೆಂಬರ್ 12) - ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಸಮಿತಿ ತೆಗೆದುಕೊಂಡಿರುವ ನಿರ್ಧಾರವೊಂದು ವಿವಾದಕ್ಕೀಡಾಗಿದೆ. ದೇವಾಲಯದ ಆಡಳಿತ ಸಮಿತಿ ವಿವಾದಿತ ಬ್ಯಾನರ್‌ ಅಳವಡಿಕೆ ಮಾಡಿದ್ದು, ಇದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವಸ್ಥಾನದ ರಥಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೇರಿದೆ. ಸಾರ್ವಜನಿಕ ಸ್ಥಳವಾದರೂ ದೇವಸ್ಥಾನದ ಸಮಿತಿ ಸೂಚನಾ ಫಲಕದ ಬ್ಯಾನರ್ ಅಳವಡಿಕೆ ಮಾಡಿದೆ. 

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಿಂದ ಕಡಲತೀರ ಹಾಗೂ ಇತರೆಡೆ ತೆರಳುವ ಪ್ರದೇಶದಲ್ಲಿ ದೇವಸ್ಥಾನದ ಸಮಿತಿಯಿಂದ ಸೂಚನಾ ಫಲಕ ಅಳವಡಿಕೆ ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ 8 ಜನರ ಸಮಿತಿ ಈ ವಿವಾದಿತ ಬ್ಯಾನರ್‌ ಅನ್ನು ಅಳವಡಿಕೆ ಮಾಡಿದೆ. ಇದಕ್ಕೆ ತೀವ್ರ ವಿರೋಧ ಕೇಳಿಬರುತ್ತಿದೆ. 

ಇದನ್ನು ಓದಿ: ಗೋಕರ್ಣ ಮಹಾಬಲೇಶ್ವರ ದೇಗುಲದ ಮೊಬೈಲ್‌ ಆ್ಯಪ್‌ ಲೋಕಾರ್ಪಣೆ

ಈ ಹಿಂದೆ ದೇವಸ್ಥಾನದಲ್ಲಿ ಮಾತ್ರ ದೇವಸ್ಥಾನ ಮೇಲುಸ್ತುವಾರಿ ಸಮಿತಿ ವಸ್ತ್ರ ಸಂಹಿತೆ ಜಾರಿ ಮಾಡಿತ್ತು. ಆದರೀಗ, ದೇವಸ್ಥಾನ ಮಾತ್ರವಲ್ಲ ಸಾರ್ವಜನಿಕ ಪ್ರದೇಶದಲ್ಲೂ ಅಂದರೆ, ದೇವಸ್ಥಾನದ ರಥ ಬೀದಿಯಿಂದ ಕಡಲತೀರ ಹಾಗೂ ಇತರೆಡೆ ತೆರಳುವ ಪ್ರದೇಶದಲ್ಲಿ ಸಹ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಇದು ಹಲವರಿಂದ ತೀವ್ರ ಟೀಕೆಗೆ ಗುರಿಯಾಗಿದೆ. 

ಇದನ್ನೂ ಓದಿ: ಇದು ಪುಷ್ಕರಣಿಯೋ, ಕಸ ಕಡ್ಡಿಗಳ ಗುಡ್ಡೆಯೋ? ಗೋಕರ್ಣದ ಮಹಾಬಲೇಶ್ವರ ಪುಷ್ಕರಣಿಯ ದುರಾವಸ್ಥೆ ಇದು!

ಫಲಕವನ್ನು ತೆಗೆದ ಆಡಳಿತ ಸಮಿತಿ: ಜನ ವಿರೋಧದ ಹಿನ್ನಲೆಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ವಿವಾದಿತ ಫಲಕವನ್ನು ತೆಗೆದು ಹಾಕಲಾಗಿದೆ. ನಿನ್ನೆ ರಾತ್ರಿ ಹಾಕಿದ್ದ ನಿಯಮ ಫಲಕವನ್ನು ಇಂದು ದೇವಸ್ಥಾನ ಆಡಳಿತ ಸಮಿತಿ ತೆಗೆದು ಹಾಕಿದೆ. ದೇವಸ್ಥಾನದ ರಥಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿ ಫಲಕ ಅಳವಡಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲೂ ದೇವಸ್ಥಾನದ ಸಮಿತಿಯಿಂದ ಸೂಚನಾ ಫಲಕ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ರಥ ಬೀದಿಯಿಂದ ಕಡಲತೀರ ಹಾಗೂ ಇತರೆಡೆ ತೆರಳುವ ಪ್ರದೇಶದಲ್ಲಿ ಸಮಿತಿಯಿಂದ ಸೂಚನಾ ಫಲಕ ಅಳವಡಿಕೆ ಮಾಡಲಾಗಿತ್ತು. ಈ ಹಿಂದೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದ ದೇವಸ್ಥಾನ ಮೇಲುಸ್ತುವಾರಿ ಸಮಿತಿ. ದೇವಸ್ಥಾನ ಹೊರತುಪಡಿಸಿ ಸಾರ್ವಜನಿಕ ಪ್ರದೇಶದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಿದ ಸಮಿತಿ ಜನರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಫಲಕವನ್ನು ಸಮಿತಿ ತೆಗೆದು ಹಾಕಿದೆ.

click me!