Latest Videos

ನಟ ಚಂದ್ರಕಾಂತ್‌ ಸಾವು ಹತ್ಯೆಯೋ ಆತ್ಮಹತ್ಯೆಯೋ? ಶಿಲ್ಪಾ ತಂದೆ ಸಂಶಯ ವ್ಯಕ್ತಪಡಿಸಿ ಹೇಳಿದ್ದೇನು?

By Shriram BhatFirst Published May 23, 2024, 4:05 PM IST
Highlights

ನಟ ಚಂದ್ರಕಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಈಗ ಹೊಸ ಬೆಳವಣಿಗೆಯೊಂದು ಆಗಿದೆ. ನಿಧನರಾಗಿರುವ ನಟ ಚಂದ್ರಕಾಂತ್ ಮಾವ, ಅಂದರೆ ಚಂದು ಪತ್ನಿ ಶಿಲ್ಪಾ ಪ್ರೇಮಾ ತಂದೆ ಹೊಸ ಮಾಹಿತಿಯೊಂದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಕರ್ನಾಟಕ ಮಂಡ್ಯ ಮೂಲದ, ತೆಲುಗಿನ 'ತ್ರಿನಯನಿ' (Trinayani) ಧಾರಾವಾಹಿಯಲ್ಲಿ ನಟಿಸಿ ಖ್ಯಾತರಾಗಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಆಕಸ್ಮಿಕ ಸಾವು ಬಹುತೇಕರಿಗೆ ಗೊತ್ತಿದೆ. ಕಾರು ಅಪಘಾತದ ವೇಳೆ ಕೊನೆಯುಸಿರು ಎಳೆದಿರುವ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ, ಅದೇ ಸಿರಿಯಲ್‌ನಲ್ಲಿ ಸಹನಟರು ಹಾಗೂ ಪವಿತ್ರಾ ಜಯರಾಂ ಸ್ನೇಹಿತರೂ ಆಗಿದ್ದ ಚಂದು ಅಲಿಯಾಸ್ ಚಂದ್ರಕಾಂತ್ (Chandrakanth) ಅವರು ಆತ್ಮಹತ್ಯೆ ಮಾಡಿಕೊಂಡಿದ್ದೂ ಕೂಡ ಬಹಳಷ್ಟು ಜನರಿಗೆ ಗೊತ್ತಿದೆ. ಪವಿತ್ರಾ ಜಯರಾಂ ಹಾಗೂ ನಟ ಚಂದ್ರಕಾಂತ್ ಲಿವಿಂಗ್ ಟುಗೇದರ್ (Living Together) ರೀತಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದೂ ಹೇಳಲಾಗಿದೆ. 

ಇದೀಗ, ನಟ ಚಂದ್ರಕಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಈಗ ಹೊಸ ಬೆಳವಣಿಗೆಯೊಂದು ಆಗಿದೆ. ನಿಧನರಾಗಿರುವ ನಟ ಚಂದ್ರಕಾಂತ್ ಮಾವ, ಅಂದರೆ ಚಂದು ಪತ್ನಿ ಶಿಲ್ಪಾ ಪ್ರೇಮಾ ತಂದೆ ಹೊಸ ಮಾಹಿತಿಯೊಂದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಹಾಗೇ, ಶಿಲ್ಪಾ ತಂದೆ ಇದೇ ಸಂಗತಿಯನ್ನುಈ ಕೇಸ್ ಇನ್‌ವೆಸ್ಟಿಗೇಶನ್ ಮಾಡುತ್ತಿರುವ ಪೊಲೀಸ್‌ಗೂ ತಿಳಿಸಿದ್ದಾರಂತೆ. ಅದೇನೆಂದರೆ, ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದ ತಕ್ಷಣ ಸ್ಥಳಕ್ಕಾಗಿಮಿಸಿ ನೋಡಿದವರಲ್ಲಿ ಈ ಶಿಲ್ಪಾ ತಂದೆ ಮೊದಲಿಗರಾಗಿದ್ದು, ತಾವು ನೋಡಿದಾಗ ಚಂದ್ರಕಾಂತ್ ಕಾಲನ್ನು ಹಗ್ಗದಿಂದ ಕಟ್ಟಿಹಾಕಲಾಗಿತ್ತು' ಎಂದಿದ್ದಾರೆ. 

ದೊಡ್ಡವರೆಲ್ಲ ಜಾಣರಲ್ಲ, ಸದ್ಯದಲ್ಲೇ ಬರಲಿದೆ 'ಪಾತರಗಿತ್ತಿ' ಸೃಷ್ಟಿಕರ್ತನ ಪೆನ್‌ ಡ್ರೈವ್!

ಆತ್ಮಹತ್ಯೆ ಮಾಡಿಕೊಳ್ಳಬೇಕಾದ ವ್ಯಕ್ತಿ ತನ್ನ ಕಾಲನ್ನು ತಾನೇ ಯಾಕೆ ಕಟ್ಟಿಹಾಕಿಕೊಳ್ಳುತ್ತಾನೆ ಎಂಬ ಸಂಶಯವನ್ನು ವ್ಯಕ್ತಪಡಿಸಿರುವ ಅವರು, ಇದು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬ ಸಂದೇಹದಲ್ಲಿ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ನಿಟ್ಟಿನಲ್ಲಿ ಕೂಡ ಪೊಲೀಸ್ ತನಿಖೆ ಸಾಗುತ್ತಿದ್ದು, ಮುಂದೆ ಈ ಕೇಸ್ ಯಾವ ಹಾದಿಯಲ್ಲಿ ಸಾಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, 'ಆತ್ಮಹತ್ಯೆ ಆಗುವುದಕ್ಕೂ ಮೊದಲು ನಟ ಚಂದ್ರಕಾಂತ್ ಕಾಲು ಕಟ್ಟಿಹಾಕಿದ್ದು ಯಾರು' ಎಂಬುದು ಈಗ ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ. 

ಕರ್ನಾಟಕದಲ್ಲಿ ಚಿತ್ರಮಂದಿರಗಳ ಬಂದ್ ವಿಚಾರ, ಫಿಲಂ ಚೇಂಬರ್‌ನಲ್ಲಿ ಹೈ ವೋಲ್ಟೇಜ್ ಮೀಟಿಂಗ್!

ಜತೆಗೆ, ಸೋಷಿಯಲ್ ಮೀಡಿಯಾದಲ್ಲಿ ನಟ ಚಂದ್ರಕಾಂತ್ ಸಾವಿಗೂ ಮೊದಲು ಹಾಕಿದ್ದ ಪೋಸ್ಟ್‌ ಒಂದನ್ನು ಅವರ ಸಾವಿನ ನಂತರ ಎಡಿಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಹಾಗಿದ್ದರೆ, ಚಂದ್ರಕಾಂತ್ ಅವರ ಸೋಷಿಯಲ್ ಮೀಡಿಯಾ ಅಕೌಂಟನ್ನು ಚಂದ್ರಕಾಂತ್ ಹೊರತಾಗಿಯೂ ಬೇರೆ ಯಾರೋ ಹ್ಯಾಂಡಲ್‌ ಮಾಡುತ್ತಿದ್ದರೇ? ಒಮ್ಮೆ ಪವಿತ್ರಾ ಜಯರಾಂ ಮಾಡುತ್ತಿದ್ದರೂ ಕೂಡ, ಈ ಮೆಸೇಜ್ ಅವರು ಎಡಿಟ್ ಮಾಡಲು ಅಸಾಧ್ಯ. ಕಾರಣ, ಅವರು ನಟ ಚಂದ್ರಕಾಂತ್‌ ಅವರಿಗಿಂತಲೂ ಮೊದಲೇ ತೀರಿಕೊಂಡಿದ್ದಾರೆ. 

ನಾನಿನ್ನೂ ಮದುವೆಯಾಗಿಲ್ಲ, ಉಪೇಂದ್ರರ 'A'ಸಿನಿಮಾ ನನ್ನ ತಲೆ ಹಾಳು ಮಾಡಿದೆ; ನಟಿ ಚಾಂದಿನಿ

ಹಾಗಿದ್ದರೆ, ಈ ಚಂದ್ರಕಾಂತ್ ಸಾವು ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎಂಬ ಹೊಸ ಸಂದೇಹ ಈಗ ಮೂಡತೊಡಗಿದೆ. ಶಿಲ್ಪಾ ತಂದೆ ಹೇಳಿದ 'ಕಾಲು ಕಟ್ಟಿಹಾಕಿರುವುದು' ಈ ಸಂದೇಹಕ್ಕೆ ಒಮದು ಕಾರಣವಾದರೆ, ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಮೆಸೇಜ್ ಎಡಿಟ್ ಆಗಿರುವುದೂ ಕೂಡ ಮತ್ತೊಂದು ಕಾರಣವಾಗಿ ಹಲವರನ್ನು ಕಾಡತೊಡಗಿದೆ. ಇದೀಗ, ಚಂದ್ರಕಾಂತ್‌ ಸಾವಿನ ಕೇಸ್‌ ತನಿಖೆ ನಡೆಯುತ್ತಿದ್ದು, ಪೊಲೀಸ್ ರಿಪೋರ್ಟ್‌ನತ್ತ ಎಲ್ಲರ ಕಣ್ನು ನೆಟ್ಟಿದೆ. 

click me!