ಮುಂಬೈನ ಬೀದಿಯಲ್ಲಿ ಕುಸಿದ ವ್ಯಕ್ತಿಯೊಬ್ಬರಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ ಮೂಲಕ ಜೀವ ಕಾಪಾಡಿದ ನಟ ಗುರ್ಮೀತ್. ಇದರ ವಿಡಿಯೋ ವೈರಲ್ ಆಗಿದೆ.
ಮುಂಬೈನ ಬೀದಿಯಲ್ಲಿ ಕುಸಿದುಬಿದ್ದ ವ್ಯಕ್ತಿಗೆ ಟಿವಿ ಮತ್ತು ಚಲನಚಿತ್ರ ನಟ ಗುರ್ಮೀತ್ ಚೌಧರಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ನೀಡುವ ಜೀವ ಉಳಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಗೆ ನಟ ಗುರ್ಮೀತ್ ಚೌಧರಿ ಸಿಪಿಆರ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈನ ಬೀದಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2008ರಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಪೌರಾಣಿಕ 'ರಾಮಾಯಣ' ಧಾರಾವಾಹಿ ನಟ ಗುರ್ಮೀತ್ ಚೌಧರಿ ಖ್ಯಾತಿ ಪಡೆದವರು. ಅದಾದ ಬಳಿಕ ಹಲವಾರು ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ನಟ ಇದೀಗ ಜೀವ ಉಳಿಸಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಂತರ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿಯ ಹೆಚ್ಚಿನ ವಿವರಗಳಿಲ್ಲ.
ಕುಸಿದುಬಿದ್ದ ವ್ಯಕ್ತಿಗೆ ಸಿಪಿಆರ್ ಮಾಡಿ ಮತ್ತು ಸ್ಟ್ರೆಚರ್ ಅನ್ನು ಮೇಲಕ್ಕೆ ಸಾಗಿಸಲು ನಟ ಸಹಾಯ ಮಾಡಿದ್ದಾರೆ. ವಿಡಿಯೊದಲ್ಲಿ, ಗುರ್ಮೀತ್ ಚೌಧರಿ ಮುಂಬೈನ ಜನನಿಬಿಡ ರಸ್ತೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡುತ್ತಿರುವುದನ್ನು ಕಾಣಬಹುದು. ಎದೆಯನ್ನು ಪಂಪ್ ಮಾಡಿ, ಅವರ ಪಾದಗಳನ್ನು ಉಜ್ಜಲು ಬೇರೊಬ್ಬರು ನಟ ಕರೆಯುತ್ತಿರುವುದು ಕಂಡು ಬಂದಿದೆ. ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದ ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದಕ್ಕೆ ಸಕತ್ ಕಮೆಂಟ್ಗಳು ಬರುತ್ತಿವೆ. ಕೆಲವರು ಇನ್ನಷ್ಟು ಸಲಹೆ ನೀಡಿದ್ದಾರೆ. ಬಾಯಿಗೆ ಗಾಳಿಯನ್ನು ಊದಬೇಕಿತ್ತು ಎಂದಿದ್ದರೆ, ಮತ್ತೆ ಕೆಲವರು ನೀವು ನಿಜವಾದ ಹೀರೋ ಎಂದಿದ್ದಾರೆ. ಇನ್ನು ಕೆಲವರು, ಸಹಾಯ ಮಾಡುವುದನ್ನು ಬಿಟ್ಟು ವಿಡಿಯೋ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
undefined
ಹೃದಯಾಘಾತ ಉಂಟಾದಾಗ ಸಿಪಿಆರ್ನಿಂದ ಜೀವ ಉಳಿಸಿ: ನಟಿ ಮೇಘನಾ ರಾಜ್ ಸಂದೇಶ
ಇನ್ನು ಗುರ್ಮೀತ್ ಅವರ ಕುರಿತು ಹೇಳುವುದಾದರೆ, ಪಾಸಿಟಿವ್ ಪಾತ್ರಗಳ ಜೊತೆಗೆ ಗುರ್ಮೀತ್ ಸಿಂಗ್ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ‘ಖಾಮೋಷಿಯನ್’ ಸಿನಿಮಾದಲ್ಲಿ ಗುರ್ಮೀತ್ ಸಿಂಗ್ ಅವರು ವಿಲನ್ ಆಗಿ ಅಬ್ಬರಿಸಿದ್ದರು. ಈ ಸಿನಿಮಾದಲ್ಲಿ ದೆಬಿನಾ ಕೂಡ ಅತಿಥಿ ಪಾತ್ರ ಮಾಡಿದ್ದರು. ಈ ಪಾತ್ರ ಅವರ ನಟನಾ ಬದುಕಿಗೆ ಬಹುದೊಡ್ಡ ತಿರುವು ನೀಡಿತು. ಆನಂತರದಲ್ಲಿ ಗುರ್ಮೀತ್ ಸಿಂಗ್ ಅವರನ್ನು ಅರಸಿ ಬರುವ ಪಾತ್ರಗಳು ವಿಭಿನ್ನ-ವಿಶಿಷ್ಟವಾದವು.
ಇನ್ನು ಗುರ್ಮೀತ್ ಮದುವೆಯ ವಿಷಯಕ್ಕೆ ಹೆಚ್ಚು ಸುದ್ದಿಯಾದವರು. 2006ರಲ್ಲಿ ಗುರ್ಮೀತ್ ಚೌಧರಿ-ದೆಬಿನಾ ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಬಾಲಿವುಡ್‌ನ ಲವ್‌ಲೀ ಜೋಡಿಗಳಲ್ಲಿ ಇವರೂ ಒಂದು. ದೆಬಿನಾಗೆ ಸದಾ ಬೆಂಗಾಳಿ ಮಾದರಿಯಲ್ಲಿ ಮದುವೆಯಾಗುವ ಆಸೆಯಿತ್ತಂತೆ. ಈ ವಿಷಯದ ಕುರಿತಾಗಿ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಗುರ್‌ಗಾವ್‌ನಲ್ಲಿ 2006ರಲ್ಲಿ ದೇವಸ್ಥಾನದಲ್ಲಿ ಗುರ್ಮೀತ್ ಹಾಗೂ ದೆಬಿನಾ ಮದುವೆಯಾಗಿದ್ದರು, ಆ ಸಮಯದಲ್ಲಿ ಅವರಿಬ್ಬರು ಚಿಕ್ಕವರಾಗಿದ್ದರು, ಅಷ್ಟೇ ಅಲ್ಲದೆ ಕೆಲಸ ಪಡೆಯಲು ಒದ್ದಾಡುತ್ತಿದ್ದರು. ‘ರಾಮಾಯಣ’ದಲ್ಲಿ ಸೀತೆಯಾಗಿದ್ದ ದೆಬಿನಾ ಬ್ಯಾನರ್ಜಿ ಅವರೇ ಮುಂದೆ ಗುರ್ಮೀತ್ ಪತ್ನಿಯೂ ಆಗಿದ್ದು ವಿಶೇಷ. ಇದರಿಂದ 10 ವರ್ಷಗಳ ಬಳಿಕ ಈ ಜೋಡಿ ಬಂಗಾಳಿ ಸಂಪ್ರದಾಯದ ಪ್ರಕಾರ ಮರು ಮದುವೆ ಆಗಿತ್ತು.
ಹೊಟ್ಟೆ ಕರಗಿಸುವ ಮ್ಯಾಜಿಕ್! ಎರಡು ಗಂಟೆಯ ಸೀಕ್ರೆಟ್ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ