Sa Re Ga Ma Pa Kannada Audition 2026: ಬೆಂಗಳೂರಿನಲ್ಲಿ ಸರೆಗಮಪ ಶೋ ಆಡಿಷನ್‌ ಯಾವಾಗ?

Published : Jul 16, 2026, 05:41 PM IST
Sa Re Ga Ma Pa Kannada Audition 2026

ಸಾರಾಂಶ

Saregamapa Kannada Show: ಜೀ ಕನ್ನಡ ಸಂಗೀತ ಕಾರ್ಯಕ್ರಮ 'ಸರಿಗಮಪ' ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಡಿಷನ್‌ ಕೂಡ ಆಗಿದೆ. ಹಾಗಿದ್ದರೆ ಯಾವಾಗ? ಎಲ್ಲಿ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Sa Re Ga Ma Pa Kannada Audition 2026: ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಪ್ರೋಮೋದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸೀಸನ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿ ಸಂಗೀತದ ಹಬ್ಬವನ್ನೇ ಸೃಷ್ಟಿಸಲಿದ್ದಾರೆ. ಜೊತೆಗೆ ಈ ಬಾರಿ ಬೆಂಗಳೂರಿನಲ್ಲಿ ಕೂಡ ಆಡಿಷನ್ ನಡೆಯಲಿದ್ದು, ಸಂಗೀತ ಪ್ರಿಯರಿಗೆ ಅದ್ಬುತ ಅವಕಾಶ ಸಿಗಲಿದೆ.

ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ನಡೆದ ಆಡಿಷನ್‌ಗಳಿಗೆ ಸಾವಿರಾರು ಸಿಂಗರ್ಸ್ ಭಾಗವಹಿಸಿ ಭರ್ಜರಿ ಬೆಂಬಲ ನೀಡಿದ್ದಾರೆ. ಈಗ ಈ ಹುಡುಕಾಟ ಮುಂದಿನ ಹಂತಕ್ಕೆ ತಲುಪಿದ್ದು, ಬೆಂಗಳೂರು, ನಾಗ್ಪುರ ಮತ್ತು ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ.

ಆಡಿಷನ್ ಸ್ಥಳಗಳ ವಿವರ

ಬೆಂಗಳೂರು (ಜುಲೈ 19): ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜು, ಪಿ. ಕಳಿಂಗ ರಾವ್ ರಸ್ತೆ, ಸಂಪಂಗಿರಾಮನಗರ (ಟೌನ್ ಹಾಲ್ ಬಳಿ), ಬೆಂಗಳೂರು - 560027.

ನಾಗ್ಪುರ (ಜುಲೈ 18): ವಿಬ್ಗೈರ್ ವರ್ಲ್ಡ್ ಸ್ಕೂಲ್, 103, ಎನ್ ಅಂಬಾಜರಿ ರಸ್ತೆ, ನ್ಯೂ ರಾಮ್‌ದಸ್‌ಪೇಠ್, ನಾಗ್ಪುರ, ಮಹಾರಾಷ್ಟ್ರ - 440010.

ಇಂದೋರ್ (ಜುಲೈ 19): ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್, 1398/1, ಬಿಚೋಲಿ ರಸ್ತೆ, ಬಂಗಾಳಿ ಸ್ಕ್ವೇರ್ ಹತ್ತಿರ, ಇಂದೋರ್ - 452016.

ಆಸಕ್ತರು 9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಬಹುದು. ಬಳಿಕ ನಿಮಗೆ SMS ಮೂಲಕ ಆಡಿಷನ್ ಲಿಂಕ್ ಸಿಗುತ್ತದೆ. ಅಥವಾ 8655780787 ಈ ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ ನಿಮ್ಮ ವಿವರಗಳು ಹಾಗೂ ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಕಳುಹಿಸಿ ಆಡಿಷನ್ ನೀಡಬಹುದು. ಇದರ ಜೊತೆಗೆ, ನೀವು ನೇರವಾಗಿ saregamapaauditions.zee5.com ವೆಬ್‌ಸೈಟ್‌ಗೂ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rukmini Radha Krishna Movie: 'ರುಕ್ಮಿಣಿ ರಾಧಾ ಕೃಷ್ಣ' ಮೂಲಕ ಬೆಳ್ಳಿ ತೆರೆ ಮೇಲೆ ನಟಿ ಮೋಕ್ಷಿತಾ ಪೈ
Vijayalakshmi: ತೆಲುಗು ಧಾರಾವಾಹಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ ಕನ್ನಡ ಕಿರುತೆರೆ ಜನಪ್ರಿಯ ನಟಿ ವಿಜಯಲಕ್ಷ್ಮಿ