
ಜೀ ಕನ್ನಡ ವಾಹಿನಿಯಲ್ಲಿ ಸಂಗೀತ ರಿಯಾಲಿಟಿ ಶೋ ಮತ್ತೊಮ್ಮೆ ಶುರುವಾಗುತ್ತಿದೆ. ನಾದಬ್ರಹ್ಮ ಹಂಸಲೇಖ ಅವರ ನೇತೃತ್ವದಲ್ಲಿ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, ಸೆಪ್ಟೆಂಬರ್ 18ರಿಂದ ಶುರುವಾಗುತ್ತಿದೆ. ಈಗಾಗಲೇ ಮಹಾ ಪ್ರೋಮೋ ಬಿಡುಗಡೆಯಾಗಿದೆ.
'ಸ್ವರ ಲೋಕದ ಹೊಸ ಮನ್ವಂತರ, ಅದ್ಧೂರಿ ವೇದಿಕೆಯಲ್ಲಿ ಗಾನ ಸಮರ! ಸರಿಗಮಪ ಚಾಂಪಿಯನ್ ಶಿಪ್, ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 7.30ಕ್ಕೆ' ಎಂದು ಬರೆದು ಜೀ ಕನ್ನಡ ಪೇಜ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಒಟ್ಟು 16 ಸೀಸನ್‌ಗಳು ನಡೆದಿದೆ, ಈ 17ನೇ ಸೀಸನ್ ಓಪನಿಂಗ್‌ನಲ್ಲಿ ಪ್ರತಿಯೊಬ್ಬ ಜ್ಯೂರಿಯೂ ಹಾಡುವ ಮೂಲಕ ಸೀಸನ್ ಆರಂಭಿಸಲಿದ್ದಾರೆ..
ಪ್ರತಿ ಸೀಸನ್ ನಡೆದುಕೊಂಡು ಬಂದಂತೆ, ಹಂಸಲೇಖ ಅವರೊಂದಿಗೆ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ತೀರ್ಪುಗಾರಗಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿ ಹಿನ್ನಲೆ ಗಾಯಕ ಹೇಮಂತ್ ಸರಿಗಮಪ ಶೋ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಕಳೆದ ಸೀಸನ್‌ನಲ್ಲಿ ಗಾಯಕ ಶ್ರೀನಿಧಿ ಶಾಸ್ತ್ರಿ ವಿಜೇತರಾಗಿದ್ದು, ಟ್ರೋಫಿ ಜೊತೆಗೆ 10 ಲಕ್ಷ ರೂ. ಹಣ ಪಡೆದು ಕೊಂಡಿದ್ದಾರೆ. ಕಂಬದ ರಂಗಯ್ಯ ಎರಡನೇ ಸ್ಥಾನ ಪಡೆದು ಕೊಂಡಿದ್ದಾರೆ. ಪ್ರತಿ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ದೊಡ್ಡ ಅವಕಾಶಗಳನ್ನು ಪಡೆದುಕೊಂಡಿದ್ದಾರೆ, ಕೆಲವರು ಸಿನಿಮಾಗಳಲ್ಲಿಯೂ ಹಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.