
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ವೀಕ್ಷಕರ ಮನಸ್ಸು ಗೆದ್ದಿದೆ. ನಟ ದಿಲೀಪ್ ರಾಜ್ ಅವರ ಲುಕ್ ಮತ್ತು ಮ್ಯಾನರಿಸಮ್‌ಗೆ ಚಿಕ್ಕ ವಯಸ್ಸಿನಿಂದ ಹಿರಿಯರವರೆಗೂ ಫಿದಾ ಆಗಿದ್ದಾರೆ. ಆರಂಭದಲ್ಲಿ ಧಾರಾವಾಹಿ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿತ್ತು, ಆದರೀಗ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಳ್ಳುತ್ತಿದೆ.
ಕೊಟ್ಟ ಮಾತು ತಪ್ಪಬಾರದು ಎಂದು ಲೀಲಾ ಮದುವೆಗೆ ಒಪ್ಪಿಕೊಂಡಿದ್ದಾಳೆ. ಎಜಿ ಮದುವೆಯನ್ನು ಅದ್ಧೂರಿಯಾಗಿ ನಡೆಸುತ್ತಿರುವ ಮೂರು ಸೊಸೆಯಂದಿರು ಈಗಿನಿಂದಲೇ ಅತ್ತೆಗೆ ಸವಾಲ್ ಹಾಕಲು ಮುಂದಾಗಿದ್ದಾರೆ. ಮುಳ್ಳಿನ ಹಾರ ತಂದು ಲೀಲಾ ಕುತ್ತಿಗೆಗೆ ಹಾಕಿದ್ದಾರೆ. ಎಜಿ ಮಾತ್ರವಲ್ಲ ಇಡೀ ಕುಟುಂಬ ನೀಡುವ ಸವಾಲು ಸ್ವೀಕರಿಸಲು ಲೀಲಾ ರೆಡಿ ಎಂದಿದ್ದಾಳೆ.
ಒಂದು ವಾರ ನಡೆಯಲಿರುವ ಮದುವೆ ಕಾರ್ಯಕ್ರಮದ ಮೊದಲ ಶಾಸ್ತ್ರ ಮೆಹಂದಿ. ಈ ಕಾರ್ಯಕ್ರಮದ ರಂಗು ಹೆಚ್ಚಿಸಲು ನಾಗಿಣಿ 2 ಖ್ಯಾತಿಯ ನಮ್ರತಾ ಗೌಡ ಆಗಮಿಸುತ್ತಿದ್ದಾರೆ. ಸೂಪರ್ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಇದರ ಸಣ್ಣ ತುಣುಕು ನಮ್ರತಾ ಹಂಚಿಕೊಂಡಿದ್ದಾರೆ. ಧಾರವಾಹಿಯಲ್ಲಿ ಲೀಲಾಗೆ ನಟನೆ ಕ್ರೇಜಿ ಇರುತ್ತದೆ. ಹೇಗಾದರೂ ಮಾಡಿ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಅಭಿನಯಿಸಬೇಕು ಎಂಬ ಕನಸು ಕಂಡಿರುತ್ತಾಳೆ ಅದರೆ ಸಣ್ಣ ಎಡವಟ್ಟಿನಿಂದ ಧಾರಾವಾಹಿ ಆಡಿಷನ್ ಬದಲು ಮದುವೆ ಆಡಿಷನ್‌ನಲ್ಲಿ ಭಾಗಿಯಾಗಿ ಎಜಿ ಪತ್ನಿ ಆಗುತ್ತಿದ್ದಾಳೆ. ಒಂದು ವಾರದ ಮದುವೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.