Puttakkana Makkalu : ಖಡಕ್ ಬಡ್ಡಿ ಬಂಗಾರಮ್ಮ ಆಗಿ ಮಿಂಚುತ್ತಿರುವ ಮಂಜುಭಾಷಿಣಿ

By Suvarna News  |  First Published May 8, 2022, 12:57 PM IST

ಮಂಜುಭಾಷಿಣಿ ಅಂದರೆ ನೆಕ್ಸ್ಟ್ ಬರೋ ಮಾತೇ 'ಸಮಾಜ ಸೇವಕಿ ಲಲಿತಾಂಬಾ'. ಆದರೆ ಇನ್ಮೇಲೆ ಮಂಜುಭಾಷಿಣಿ ಅಂದರೆ ಬಡ್ಡಿ ಬಂಗಾರಮ್ಮ ಅನ್ನಬೇಕು, ಆ ಲೆವೆಲ್‌ಗೆ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ಖಡಕ್ ಪಾತ್ರದ ಮೂಲಕ ಮಿಂಚುತ್ತಿದ್ದಾರೆ ಮಂಜುಭಾಷಿಣಿ.


ಮಂಜುಭಾಷಿಣಿ (Manjubhashini) ಮಂಗಳೂರು ಕಡೆಯ ಹೆಣ್ಣುಮಗಳು. ಸೀರಿಯಲ್‌ ಮೂಲಕ ಮನೆ ಮಾತಾದವರು. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸೀರಿಯಲ್‌ನಿಂದ ಹೊರಗುಳಿದಿದ್ದರು. ಆರೂರು ಜಗದೀಶ್‌(Arror Jagadish) ನಿರ್ದೇಶನದ 'ಪುಟ್ಟಕ್ಕನ ಮಕ್ಕಳು' ಅವರನ್ನು ಮತ್ತೆ ಕಿರುತೆರೆಗೆ ಎಳೆದುತಂದ ಸೀರಿಯಲ್. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್‌ನಲ್ಲಿ ಬಡ್ಡಿ ಬಂಗಾರಮ್ಮನಾಗಿ ಮಿಂಚುತ್ತಿದ್ದಾರೆ. ಇದೊಂದು ಖಡಕ್ ರೋಲ್ ಆದರೂ ಕಂಪ್ಲೀಟ್ ನೆಗೆಟಿವ್ ಪಾತ್ರ ಅಲ್ಲ. ಈ ಸೀರಿಯಲ್‌ ಹೀರೋನ ತಾಯಿ ಬಡ್ಡಿ ಬಂಗಾರಮ್ಮ(Baddi Bangaramma). ಮೈಮೇಲೆಲ್ಲ ಒಡವೆ ಹೇರಿಕೊಂಡಿರುವ ಈಕೆ ಬಡ್ಡಿ ವ್ಯವಹಾರ ಮಾಡೋ ಹೆಂಗಸು. ಅವಳು ಎಲ್ಲರಿಗೂ ಸಾಲ ನೀಡಲ್ಲ. ಆ ಹಳ್ಳಿಯಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಲೋ, ಇನ್ಯಾವ ಕಾರಣಕ್ಕೂ ನಿಜಕ್ಕೂ ಸಾಲದ ಅಗತ್ಯ ಇದ್ದರೆ ಮಾತ್ರ ಸಾಲ ನೀಡ್ತಾಳೆ. ಹಾಗೆ ನೀಡಿದ ಸಾಲವನ್ನು ವಾಪಾಸ್ ತರಿಸ್ಕೊಳ್ಳೋದಕ್ಕೂ ಗೊತ್ತಿರೋ ಗಟ್ಟಿಗಿತ್ತಿ. ಸದ್ಯಕ್ಕೀಗ ಪುಟ್ಟಕ್ಕನ ಮಗಳು ಸ್ನೇಹ (Sneha)ಮತ್ತು ಬಂಗಾರಮ್ಮನ ಮಗ ಕಾಂತಿಯ(Kanthi) ನಡುವೆ ಪ್ರೇಮ ಚಿಗುರಿದೆ. ಎದೆ ಮೇಲೆ 'ಅವ್ವ' ಅಂತ ಬಂಗಾರಮ್ಮನ ಹಚ್ಚೆ ಹಾಕಿಸಿಕೊಂಡಿರೋ ಕಾಂತಿಯನ್ನು ಸ್ನೇಹ ಒಳಗೊಳಗೇ ಮೆಚ್ಚುವಂತೆ ಕಾಣುತ್ತದೆ. ಇದಕ್ಕೆ ಸರಿಯಾಗಿ ಅವರಿಬ್ಬರನ್ನು ಮತ್ತೂ ಹತ್ತಿರಾಗಿಸುವ ಸನ್ನಿವೇಶವೊಂದು ನಿರ್ಮಾಣವಾಗಿದೆ. ಇನ್ನೇನು ಕಾಂತಿ ಸ್ನೇಹಾಳ ಮುಂದೆ ತನ್ನ ಪ್ರೇಮ ನಿವೇದನೆ ಮಾಡಬೇಕು ಅನ್ನುವ ಹೊತ್ತಿಗೆ ಹೆಜ್ಜೇನು ದಾಳಿ ನಡೆಯುತ್ತೆ. ಸ್ನೇಹಳನ್ನು ರಕ್ಷಿಸುವ ನೆವದಲ್ಲಿ ಕಾಂತಿ ಸ್ನೇಹಾಗೆ ಇನ್ನಷ್ಟು ಹತ್ತಿರವಾಗ್ತಾನೆ. ಆದರೆ ಈ ಆಕಸ್ಮಿಕವನ್ನು ದುಷ್ಟ ಬುದ್ಧಿಯ ರಾಜಿ ಬೇರೆಯೇ ರೀತಿ ಬಂಗಾರಮ್ಮನಿಗೆ ರಿಪೋರ್ಟ್(Report) ಮಾಡುತ್ತಿದ್ದಾಳೆ.

ತನ್ನ ಮಗ ಒಬ್ಬ ಹುಡುಗಿಯ ಜೊತೆಗೆ ಚಕ್ಕಂದ ಆಡುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬಂಗಾರಮ್ಮ ಕೆರಳಿ ಕೆಂಡವಾಗಿದ್ದಾಳೆ. ತನ್ನ ಮಗ ಇರೋದು ಪುಟ್ಟಕ್ಕನ ಮಗಳು ಸ್ನೇಹಾ ಜೊತೆಗೆ ಅನ್ನೋದು ಗೊತ್ತಾದ್ರೆ ಅವಳೇನು ಮಾಡಬಹುದು. ಈಗ ಚಿಗುರುತ್ತಿರುವ ಪ್ರೀತಿಗೆ ಅವಳ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದು ಕುತೂಹಲ ಹೆಚ್ಚಿಸೋ ಹಾಗಿದೆ. ಬಂಗಾರಮ್ಮನ ಪಾತ್ರದಲ್ಲಿ ಮಿಂಚುತ್ತಿರುವ ಮಂಜುಭಾಷಿಣಿಯ ನಟನೆಯನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ.

Tap to resize

Latest Videos

ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ಇನ್ನಿಲ್ಲ

ಮಂಜುಭಾಷಿಣಿ 'ಭೂಮಿಗೀತ' ಅನ್ನೋ ಚಿತ್ರದಲ್ಲಿ ನಾಯಕಿಯಾಗಿದ್ದವರು. ಗಿರೀಶ್ ಕಾರ್ನಾಡ್ (Girish Karnad)ಅವರ 'ಅಂತರಾಳ'  ಸೀರಿಯಲ್ ಮೂಲಕ ಅವರು ಕಿರುತೆರೆಗೆ ಬರುತ್ತಾರೆ. ಆದರೆ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಟಿ ಎನ್ ಸೀತಾರಾಂ(T N seetharam) ನಿರ್ದೇಶನದ 'ಮಾಯಾಮೃಗ' ಸೀರಿಯಲ್. ಇದರಲ್ಲಿ ಇವರ ನಟನೆಯನ್ನು ಹಲವರು ಮೆಚ್ಚಿಕೊಂಡರು. ಆದರೆ ಮಂಜುಭಾಷಿಣಿ ಪ್ರಸಿದ್ಧಿ ಉತ್ತುಂಗಕ್ಕೇರಿದ್ದು 'ಸಿಲ್ಲಿ ಲಲ್ಲಿ' (Silli lalli) ಸೀರಿಯಲ್‌ ಮೂಲಕ. ಅದರಲ್ಲಿ 'ನಾನು ಸಮಾಜ ಸೇವಕಿ ಲಲಿತಾಂಬಾ, ನನ್ನ ನಂಬಿ ಪ್ಲೀಸ್' ಅನ್ನೋ ಇವ್ರ ಡೈಲಾಗ್‌ ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ಬಾಯಲ್ಲಿ ನಲಿದಾಡ್ತಾ ಇತ್ತು. ಆ ಮಟ್ಟಿಗೆ ಲಲಿತಾಂಬಾ ಪಾತ್ರವನ್ನ ಸಖತ್ ಫನ್ನಿಯಾಗಿ ಮನೆಮಾತಾಗುವಂತೆ ನಟಿಸಿದ್ದರು ಮಂಜುಭಾಷಿಣಿ.

Film Review: ಪುರುಷೋತ್ತಮ

ಇದಾಗಿ ಮಂಜುಭಾಷಿಣಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಸೀರಿಯಲ್‌ನಲ್ಲಿ ಸಿಕ್ಕಿರೋ ಜನಪ್ರಿಯತೆ ಅಲ್ಲಿ ಸಿಕ್ಕಿಲ್ಲ. ಕೆಲವು ವರ್ಷಗಳ ಕೆಳಗೆ ಮಗುವಾದ ಕಾರಣ ಜೊತೆಗೆ ಇವರೂ ಇವರ ಪತಿ ಸೇರಿ ಹೊಸತೊಂದು ಕಂಪನಿ ನಡೆಸುತ್ತಿರುವ ಕಾರಣ ಮನರಂಜನಾ ಕ್ಷೇತ್ರದಿಂದ ಹೊರಗುಳಿದಿದ್ದರು. ಕಿರುತೆರೆ ಹಿರಿತೆರೆಯಿಂದ ಅನೇಕ ಆಫರ್ ಬಂದರೂ ಒಪ್ಪಿಕೊಳ್ಳೋಕೆ ಸಾಧ್ಯವಾಗಿಲ್ಲ. ಕೋವಿಡ್‌ ಸಮಯದಲ್ಲಿ 'ಸಿಲ್ಲಿ ಲಲ್ಲಿ' ಸೀರಿಯಲ್‌ ಕಲಾವಿದರು ಮತ್ತು ಇವರು ಸೇರ್ಕೊಂಡು ಯೂಟ್ಯೂಬ್‌ನಲ್ಲಿ ಹಾಸ್ಯವೇ ಪ್ರಧಾನವಾಗಿರುವ ವೀಡಿಯೋಗಳನ್ನು ಮಾಡಿದ್ರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು. ಅವರ ಕಂ ಬ್ಯಾಕ್‌ಗೆ ಕಾರಣವಾಗಿದ್ದು 'ಬಡ್ಡಿ ಬಂಗಾರಮ್ಮ' ಪಾತ್ರ. ಟಿಆರ್‌ಪಿಯಲ್ಲಿ (TRP)ಯಾವತ್ತೂ ಮುಂದಿರುವ 'ಪುಟ್ಟಕ್ಕನ ಮಕ್ಕಳು' (Puttakkana Makkalu) ಸೀರಿಯಲ್‌ನಲ್ಲಿ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವಲ್ಲಿ ಇವರ ಪಾತ್ರದ ಕೊಡುಗೆಯೂ ಇದೆ. ಮಂಜುಭಾಷಿಣಿಯ ಕಂಬ್ಯಾಕ್ ಸಕ್ಸಸ್‌ಫುಲ್‌ ಆಗಿದೆ ಅನ್ನಬಹುದು.

ಜಾನಿ ಡೆಪ್‌ ವಿರುದ್ಧ ಮಾಜಿ ಪತ್ನಿ ಲೈಂಗಿಕ ಕಿರುಕುಳದ ಆರೋಪ!

click me!