ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಸಂಕಷ್ಟ ಎದುರಿಸಿದ ಕೌಶಿಕ್.... ಮನೆ ಕೆಲಸ ಅಫೀಸ್ ಕೆಲಸ ಮಾಡಿಸಿ ಅವಮಾನ...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುರ್ಶಿ ಎಂದೇ ಖ್ಯಾತಿ ಪಡೆದಿರುವ ಕೌಶಿಕ್ ಡಿಫರೆಂಟ್ ಫ್ಯಾನ್ ಬೇಸ್ ಹೊಂದಿದ್ದಾರೆ. 'ಅನೇಕರಿಗೆ ಪುರ್ಶಿ ಪಾತ್ರ ಇಷ್ಟವಾಗುತ್ತದೆ ಅದರ ಬಗ್ಗೆ ನನಗೆ ಖುಷಿ ಇದೆ' ಎಂದು ಕೌಷಿಕ್ ಹೇಳುತ್ತಲೇ ಇರುತ್ತಾರೆ. 'ನನ್ನ ತೆರೆ ಮೇಲೆ ಕಾಣಿಸುವ ವ್ಯಕ್ತಿತ್ವಕ್ಕೂ ತೆರೆ ಹಿಂದಿರುವ ವ್ಯಕ್ತಿತ್ವಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನನ್ನ ಕುಟುಂಬದಲ್ಲೂ ನನಗೆ ಅಷ್ಟೇ ಪ್ರೀತಿ ಕೊಡುತ್ತಾರೆ. ಹೀಗಾಗಿ ಪಾತ್ರ ಮಾಡಲು ಸುಲಭವಾಗಿತ್ತು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕೌಶಿಕ್ ಮಾತನಾಡಿದ್ದಾರೆ.
'ನಟನೆ ನನ್ನ ಪ್ಯಾಶನ್ ಆಗಿತ್ತು, ಇದಕ್ಕೆ ದೊಡ್ಡ ಸಪೋರ್ಟ್ ಆಗಿ ನಿಂತಿದ್ದು ನಮ್ಮ ಅಪ್ಪ ಅಮ್ಮ. ನಟಿಸಬೇಕು ಎಂದು ಆಸೆ ವ್ಯಕ್ತ ಪಡಿಸಿದಾಗ ನನ್ನನ್ನು ಒಳ್ಳೆಯ ಥಿಯೇಟರ್‌ಗೆ ಸೇರಿಸಲು ಸಹಾಯ ಮಾಡಿದ್ದರು. ನಟನಾ ತಂಡವನ್ನು ಸೇರಿಕೊಂಡ ಮೇಲೆ ನನ್ನ ನಟನೆ ಜರ್ನಿ ಆರಂಭಿಸಿದೆ. ಇಲ್ಲಿ ನಟನ ಮತ್ತು ಜೀವನ...ಎರಡರ ಬಗ್ಗೆ ಹೇಳಿಕೊಟ್ಟರು. ನನ್ನ ಪ್ರಕಾರ ಸಣ್ಣ ಕೆಲಸವೂ ನಮಗೆ ದೊಡ್ಡ ಅವಕಾಶ ಕೊಡುತ್ತದೆ ಅದರಿಂದ ನಾವು ಕಲಿತು ಬೆಳೆಯಬಹುದು' ಎಂದು ಕೌಶಿಕ್ ಹೇಳಿದ್ದಾರೆ.
ನಟನೆ ಕಲಿತ ಮೇಲೆ ಬಣ್ಣದ ಜರ್ನಿ ಆರಂಭಿಸಲು ಕೌಶಿಕ್ ಬೆಂಗಳೂರಿಗೆ ಬರುತ್ತಾರೆ. 'ಬೆಂಗಳೂರಿನಲ್ಲಿ ಒಂದು ತಂಡದ ಜೊತೆ ಸೇರಿಕೊಂಡೆ, ಒಳ್ಳೆ ಅವಕಾಶ ಒಳ್ಳೆ ಪಾತ್ರ ಕೊಡುವುದಾಗಿ ನಂಬಿಸಿದರು ಆದರೆ ದಿನ ಕಳೆಯುತ್ತಿದ್ದಂತೆ ನಾನು ಅವರ ಮನೆ ಕೆಲಸ ಮತ್ತು ಆಫೀಸ್ ಕೆಲಸ ಮಾಡಿಸುತ್ತಿದ್ದರು. ಈ ಮೂಲಕ ನನ್ನನ್ನು ಟೆಸ್ಟ್ ಮಾಡುತ್ತಿದ್ದಾರೆ ಅಂದುಕೊಂಡು ಸುಮ್ಮನೆ ಕೆಲಸ ಮಾಡುತ್ತಿದ್ದೆ. ಒಂದು ದಿನ ನಿರ್ಧಾರ ಮಾಡಿ ಅಲ್ಲಿಂದ ಹೊರಟು ನನ್ನ ಆಕ್ಟಿಂಗ್ ಮೇಲೆ ಗಮನ ಕೊಟ್ಟೆ. ನಾನು ಬಿಟ್ಟು ಹೋಗುವಾಗ ಸುಲಭವಾಗಿ ಇರಲಿಲ್ಲ, ನನ್ನ ನಟನೆ ಕನಸಿಗೆ ಬೆಂಕಿ ಹಾಕುವುದಾಗಿ ಹೆದರಿಸಿದ್ದರು. ಈಗ ಅದನ್ನು ನೆನಪಿಸಿಕೊಂಡೆ ಒಳ್ಳೆ ಪಾಠ ಕಲಿತಿರುವೆ ಅನಿಸುತ್ತದೆ' ಎಂದಿದ್ದಾರೆ ಕೌಶಿಕ್.
ಕನಸಿನಲ್ಲಿ ಕಾಣಿಸುತ್ತಿತ್ತು ತಂದೆ ಆತ್ಮ; ಷಾಮನಿಷಂ ವಿದ್ಯೆ ಮೂಲಕ ಪರಿಹಾರ ಹುಡುಕಿದ ನಟಿ ನೀತು!