ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಪಾರು' ಧಾರಾವಾಹಿ ವೀಕ್ಷಕರ ಗಮನ ಸೆಳೆದಿದೆ. ಅಖಿಲಾಂಡೇಶ್ವರಿಯ ಗಾಂಭಿರ್ಯತೆ, ಪಾರುಳ ಮುಗ್ಧತೆ ಹಾಗೂ ಆದಿತ್ಯನ ಡಿಗ್ನಿಫೈಡ್ ಮ್ಯಾನರಿಸಂ.
ಬಿಗ್ ಬಾಸ್ ಮನೆಯ ಮೇಕಪ್ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!
ಈ ಧಾರಾವಾಹಿಯಲ್ಲಿ ಪಾರುಗೆ ತಮ್ಮನಾಗಿ ಅಭಿನಯಿಸುತ್ತಿರುವ ಗಣೇಶ್ ನಿಗೆ ಜೀ ಕನ್ನಡ ಕುಟುಂಬ ಅವಾರ್ಡ್‌ನಲ್ಲಿ ಬಾಲನಟ ಅವಾರ್ಡ್ ದೊರೆಯಿತು. ಅವಾರ್ಡ್ ಸ್ವೀಕರಿಸಿದ ಗಣೇಶ್ ಮಾತನಾಡದೆ ಮೌನಿಯಾಗುತ್ತಾರೆ. ಈ ವೇಳೆ ಧಾರಾವಾಹಿಯ ನಿರ್ಮಾಪಕ ದಿಲೀಪ್ ರಾಜ್ ಮೈಕ್ ಹಿಡಿದು 'ಗಣೇಶ್ 6 ದಿನಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದಾರೆ. ತಂದೆ ಹೋದ ನೋವಿನಲ್ಲಿದ್ದರೂ ಗಣೇಶ್ ಮೂರನೇ ದಿನ ಬಂದು ಬಾಕಿಯಿದ್ದ ಡಬ್ಬಿಂಗ್ ಮುಗಿಸಿ ಹೋಗಿದ್ದಾರೆ. ಯಾರಿಗೂ ಹೇಳದೆ, ಯಾರಿಗೂ ಗೊತ್ತಾಗಬಾರದು, ತನ್ನಿಂದ ಧಾರಾವಾಹಿಗೆ ತೊಂದರೆ ಆಗಬಾರದು' ಎಂದು ಮೂರನೇ ದಿನಕ್ಕೆ ಬಂದು ಡಬ್ಬಿಂಗ್ ಮುಗಿಸಿದ್ದಾರೆ ಎಂದು ಹೇಳಿದರು.
ಚಿಕ್ಕ ವಯಸ್ಸಾದರೂ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುವ ಗಣೇಶನಿಗೆ ಈ ಅವಾರ್ಡ್ ಸೂಕ್ತವೆಂದು ಹೇಳುತ್ತಾರೆ ಅಷ್ಟೇ ಅಲ್ಲದೆ ವೇದಿಕೆ ಮುಂದೆ ಆಸೀನರಾಗಿದ್ದ ಅತಿಥಿಗಳು ಎದ್ದು ನಿಂತು ಗಣೇಶನಿಗೆ ಚಪ್ಪಾಳೆ ತಟ್ಟಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.