'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ

Suvarna News   | Asianet News
Published : May 01, 2021, 11:19 AM IST
'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ

ಸಾರಾಂಶ

ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಬಿತ್ತು ಬಿಗ್ ಬ್ರೇಕ್, ತಾಯಿ ಪಾತ್ರ ಪರಿಚಯ ಮಾಡುವ ಮೂಲಕ ಹೊಸ ತಿರುವು...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ವಾರ ವಾರವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಾರು ವಿರುದ್ಧ ಪಿತೂರಿ ಮಾಡುತ್ತಿದ್ದ ಅನುಷ್ಕಾ ಅಲಿಯಾಸ್ ಮಾನ್ಸಿ ಜೋಶಿ ಪಾತ್ರಕ್ಕೆ ಬ್ರೇಕ್‌ ಬಿದ್ದಿದೆ. ಈ ವಿಚಾರದ ಬಗ್ಗೆ ಸ್ವತಃ ಮಾನ್ಸಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ರಿವೀಲಾಯ್ತು 'ಪಾರು' ವೈಲೆಂಟ್ ವಿಲನ್ ಅನುಷ್ಕಾಳ ಇನ್ನೊಂದು ಮುಖ!

ಮಾನ್ಸಿ ಪೋಸ್ಟ್:

'ನನ್ನ ಎಲ್ಲಾ ಅಭಿಮಾನಿಗಳು ಮತ್ತು ಸ್ನೇಹಿತರಿಗೆ, ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದಿಂದ ನನ್ನ ಪಾತ್ರವೂ ಕೊನೆಗೊಂಡಿದೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.  ನನಗೆ ಈ ಪಾತ್ರವನ್ನು ನೀಡಿದ ಮತ್ತು ನನ್ನನ್ನು ಎಲ್ಲ ರೀತಿಯಿಂದ ಪ್ರೋತ್ಸಾಹಿಸಿದಕ್ಕಾಗಿ ಇಡೀ ಪಾರು ತಂಡ ಮತ್ತು ಜೀ ಕನ್ನಡ ಚಾನೆಲ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಕನ್ನಡ ಉದ್ಯಮದಲ್ಲಿ ಹೊಸ ಯೋಜನೆಯೊಂದಿಗೆ ಬರುತ್ತೇನೆ ಮತ್ತು ನನ್ನ ನಟನೆಯೊಂದಿಗೆ ನಿಮ್ಮೆಲ್ಲರನ್ನು ಯಾವಗಲೂ ರಂಜಿಸುತ್ತೇನೆ. ನಿಮ್ಮ ಪ್ರೀತಿಯ ಮಾನ್ಸಿ' ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ಹಾಗೂ ಅರುಂಧತಿ ಮಾಡುತ್ತಿದ್ದ ಕುತಂತ್ರವನ್ನು ಬಯಲು ಮಾಡಲು ಪಾರು ಆದಿ ಸಹಾಯ ಪಡೆದುಕೊಳ್ಳುತ್ತಾಳೆ. ಇಡೀ ಕುಟುಂಬವನ್ನು ನಾಶ ಮಾಡುವುದು ಅನುಷ್ಕಾಳ ಉದ್ದೇಶ ಎಂದು ತಿಳಿದು ಆದಿ ಶಾಕ್ ಆಗಿದ್ದಾನೆ. ಅನುಷ್ಕಾ ಯಾರು ಎಂದು ಅಖಿಲಾಂಡೇಶ್ವರಿಗೆ ತಿಳಿಸಲು ಆದಿ ಫೋಟೋಗಳನ್ನು ಸಂಗ್ರಹಿಸುತ್ತಾನೆ. ವಿಚಾರ ತಿಳಿದು ಅಖಿಲಾಂಡೇಶ್ವರಿ ಅನುಷ್ಕಾಳಿಗೆ ಕಪಾಳ ಮೋಕ್ಷ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಮನೆಯಿಂದ ಹೊರ ಹಾಕುತ್ತಾಳೆ. ಪಾರುವಿನಿಂದ ಇಷ್ಟೆಲ್ಲಾ ಅನಾಹುತ ಆಗಿದೆ ಎಂದು ಅನುಷ್ಕಾ ಪಾರುಳನ್ನು ಕಿಡ್ನ್ಯಾಪ್ ಮಾಡಿಸುತ್ತಾಳೆ. ಆದಿ ಹಾಗೂ ಪ್ರೀತಮ್ ಪಾರುವನ್ನು ಪತ್ತೆ ಹಚ್ಚಿ ಕಾಪಾಡುತ್ತಾರೆ. ತನ್ನ ತಾಯಿ ಅರುಂಧತಿ ಆಸೆ ಈಡೇರಿಸಲಾಗದ ಕಾರಣ ಅನುಷ್ಕಾ ಚಾಕುವಿನಿಂದ ಚುಚ್ಚಿಕೊಂಡು ಪ್ರಾಣ ಬಿಡುತ್ತಾಳೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ