ಕನ್ನಡ ಕಿರುತೆರೆ ನಟರಾದ ಚಂದನ್ ಕವಿತಾ ಮದ್ವೆ ಮುಂದಕ್ಕೆ ಹೋಯ್ತಾ!

Suvarna News   | Asianet News
Published : Apr 30, 2021, 06:03 PM IST
ಕನ್ನಡ ಕಿರುತೆರೆ ನಟರಾದ ಚಂದನ್ ಕವಿತಾ ಮದ್ವೆ ಮುಂದಕ್ಕೆ ಹೋಯ್ತಾ!

ಸಾರಾಂಶ

ಕೊರೋನಾ, ಲಾಕ್‌ಡೌನ್ ಗಲಾಟೇಲಿ ಕ್ಯೂಟ್ ಕಪಲ್ ಕವಿತಾ ಹಾಗೂ ಚಂದನ್ ಮದ್ವೆ ಮುಂದಕ್ಕೆ ಹೋಗಿದೆಯಾ?  

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಕಿರುತೆರೆ ಮೂಲಕ ಒಂದಾದ ಜೋಡಿ. ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸುವ ಮೂಲಕ ಪರಿಚಯವಾದ ಈ ಜೋಡಿಯ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿ ಇದೀಗ ಮದುವೆಗೆ ಕ್ಷಣಗಣನೆ. ಎಲ್ಲಾ ಅಂದುಕೊಂಡ ಹಾಗೆ ನಡೆದಿದ್ರೆ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಮದುವೆಯ ಒಂದೊಂದೇ ಶಾಸ್ತ್ರಗಳು ಈಗ ಶುರುವಾಗಬೇಕಿತ್ತು. ಆದರೆ ಕೊರೋನಾ ಲಾಕ್ ಡೌನ್ ಈ ಜೋಡಿಯ ಹಸೆಮಣೆ ಕನಸನ್ನುತಾತ್ಕಾಲಿಕವಾಗಿ ಮುಂದೂಡಿದೆಯಾ? 

ಹಾಗೆ ನೋಡಿದರೆ ಒಂದು ತಿಂಗಳಿಗೂ ಮೊದಲು ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಕೊರೋನಾ ಕೇಸ್‌ಗಳು ಕ್ಷೀಣವಾಗುತ್ತಿದ್ದವು. ಕಳೆದ ವರ್ಷದ ಕೊರೋನಾ ಶಾಕ್ ನಿಂದ ಹೊರಬಂದು ಜನ ಮತ್ತೆ ನಾರ್ಮಲ್ ಲೈಫ್‌ಗೆ ಮರಳುತ್ತಿದ್ದವು. ಬ್ಯುಸಿನೆಸ್ ನಿಧಾನಕ್ಕೆ ಲಯ ಕಂಡುಕೊಳ್ಳಲು ಶುರುವಾಗಿತ್ತು. ಈ ವರ್ಷವಾದರೂ ಮಕ್ಕಳು ಶಾಲೆಗೆ ಹೋಗುವಂತಾಗಲಪ್ಪ ಅಂತ ಹೆತ್ತವರು ಹರಸಿಕೊಂಡಿದ್ದು ಕೈಗೂಡುವ ಎಲ್ಲ ಲಕ್ಷಣಗಳೂ ಕಾಣಿಸಿದ್ದವು. ಮದುವೆಗಳೂ, ಮನೆ ಫಂಕ್ಷನ್, ಜಾತ್ರೆ ಮತ್ತಿತರರ ಕಾರ್ಯಕ್ರಮಗಳು ಹಿಂದಿನ ವೈಭವಕ್ಕೆ ಮರಳಿದ್ದವು. ಇಂಥಾ ಟೈಮ್‌ನಲ್ಲೇ ನಾನಿಲ್ಲೇ ಇದ್ದೀನಿ ಅಂತ ಮಾಯಾವಿ ರಾಕ್ಷಸನಂತೆ ಬದಲಾದ ರೂಪದಲ್ಲಿ ಕೊರೋನಾ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದ ಹಾಗೆ ಇಡೀ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿದೆ. ಖುಷಿಯಲ್ಲಿದ್ದ ಮನೆಮಂದಿಯಲ್ಲಿ ಆತಂಕ, ಸಾವಿನ ಭೀತಿ ಹೆಚ್ಚಿದೆ. ಕೊರೋನಾ ರೋಗಿಗಳ ಸಂಖ್ಯೆ ಎಣಿಕೆಗೂ ಮೀರಿ ಮುಂದುವರಿದು ಎಲ್ಲೆಡೆ ಸಾವು ನೋವುಗಳ ಸುದ್ದಿ ಸಾಂಕ್ರಾಮಿಕವಾಗುತ್ತಿರುವಂತೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಜನ ಮನೆ ಸೇರ್ಕೊಂಡಿದ್ದಾರೆ. 

5 ದಿನ ಆಕ್ಸಿಜನ್ ಪಡೆದು 'ಮಜಾ ಟಾಕೀಸ್‌' ರೆಮೋ ಕೊರೋನಾ ಗೆದ್ದ ಕತೆ! ...
 

ಒಂದು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಮಾಡಿಕೊಂಡು ಮದುವೆಯ ಕನಸು ಕಾಣುತ್ತಿದ್ದ ಚಂದನ್-ಕವಿತಾ ಮುಖದಲ್ಲಿ ಕೊಂಚ ನಿರಾಸೆಯ ಭಾವ ಮೂಡಿದಂತಿದೆ. ಏಕೆಂದರೆ ಲೈಫ್‌ನಲ್ಲಿ ಒಮ್ಮೆ ಮದ್ವೆ ಆಗೋದು, ಮದುವೆಯಾಗುವ ಆ ಕ್ಷಣಗಳು ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಹಾಗಿರಬೇಕು ಅಂತ ಎಲ್ಲರೂ ಬಯಸುತ್ತಾರೆ. ಅಂಥದ್ರಲ್ಲಿ ಕ್ಯೂಟ್ ಜೋಡಿ ಕವಿತಾ ಹಾಗೂ ಚಂದನ್‌ಗೆ ಆ ಆಸೆ ಇಲ್ಲದೇ ಇರುತ್ತಾ..

ಹಾಗಂತ ಈ ಲಾಕ್‌ಡೌನ್‌ನಲ್ಲಿ ಮದ್ವೆ ಆದ ಕೆಲವು ಮಂದಿಯೂ ಸಿಗುತ್ತಾರೆ. ಆದರೆ ಭರ್ಜರಿ ರೂಲ್ಸ್ ರೆಗ್ಯುಲೇಶನ್ ನಡುವೆ, ಮಾರ್ಶೆಲ್ ಗಳ ಸುಪರ್ದಿಯಲ್ಲಿ, ಯಾರಿಂದ ಎಲ್ಲಿ ಕೊರೋನಾ ತಮಗೆ ಬರಬಹುದೋ ಎಂಬ ಭೀತಿಯಲ್ಲಿ ಮದುವೆ ಆಗೋದು ಹೇಗ ತಾನೇ ಖುಷಿ ಕೊಡುತ್ತೆ ಎಂಬುದು ಹಲವರ ಪ್ರಶ್ನೆ. ಈಗ ಐವತ್ತು ಜನರಿಗಿಂತ ಹೆಚ್ಚು ಮಂದಿ ಮದುವೆಯಲ್ಲಿ ಭಾಗವಹಿಸುವಂತಿಲ್ಲ. ಮಾಸ್ಕ್ ಕಡ್ಡಾಯ.

ಭಾರತಕ್ಕಾಗಿ ಕೊರೋನಾ ಫಂಡ್ ಕಲೆಕ್ಟ್ ಮಾಡ್ತಿದ್ದಾರೆ ಪ್ರಿಯಾಂಕ: ಪತ್ನಿಗೆ ನಿಕ್ ಸಾಥ್ ...

ಇನ್ನು ಚಂದನ್ ಕವಿತಾ ವಿಷಯಕ್ಕೆ ಬಂದರೆ ಅವರ ಮದುವೆ ಮೇ ಮೊದಲ ವಾರ ನಿಗದಿಯಾಗಿತ್ತು. ಈ ವಿಚಾರವನ್ನು ಈ ಜೋಡಿ ಕೆಲವು ದಿನಗಳ ಹಿಂದೆ ತಮ್ಮ ಎಂಗೇಜ್‌ಮೆಂಟ್ ಆದ ಕೆಲವೇ ದಿನಗಳಲ್ಲಿ ಹಂಚಿಕೊಂಡಿತ್ತು. ಅದರಂತೆ ಭರ್ಜರಿ ಮದುವೆ ಪ್ಲಾನಿಂಗ್ ನಡೀತಾ ಇತ್ತು. ಆದರೆ ಈ ನಡುವೆ ಕೊರೋನಾ ಲಾಕ್‌ಡೌನ್ ಬಂದಿದೆ. ಇಂಥಾ ಟೈಮ್‌ನಲ್ಲಿ ಈ ಸೆಲೆಬ್ರಿಟಿ ಜೋಡಿ ಹಸಮಣೆ ಏರುವುದರಲ್ಲಿ ಅನುಮಾನ ಇದೆ. ಜೊತೆಗೆ ವಿವಾಹಕ್ಕೂ ಮುನ್ನ ನಡೆಯುವ ಯಾವುದೇ ಶಾಸ್ತ್ರಗಳ ಬಗೆಗಾಗಲೀ, ಮದುವೆಯ ಬಗೆಗಾಗಲೀ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲೆಲ್ಲೋ ಯಾವ ಪೋಸ್ಟ್‌ಅನ್ನೂ ಹಾಕಿಲ್ಲ. ಚಂದನ್ ಕರೋನಾ ಜಾಗೃತಿಯ ಮೆಸೇಜ್‌ಗಳನ್ನು ಹಾಕುತ್ತಿದ್ದರೆ, ಕವಿತಾ ತಂಗಿ ಜೊತೆಗಿನ ಸ್ಪೆಷಲ್ ಮೊಮೆಂಟ್ಗಳನ್ನು ಹಂಚಿಕೊಂಡಿದ್ದಾರೆ. 

ಹೀಗಾಗಿ ಕವಿತಾ-ಚಂದನ್‌ ಮದುವೆ ಡೇಟು ಮುಂದಕ್ಕೆ ಹೋದಂತಿದೆ. ಎಲ್ಲದಕ್ಕೂ ಇನ್ನೊಂದೆರಡು ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಬಹುದು. 

ದಳಪತಿ ವಿಜಯ್ ಸಾಂಗ್‌ಗೆ ಕೆನಡಾ ಹುಡುಗರ ಸಖತ್ ಸ್ಟೆಪ್ಸ್ ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?