ಪೊಲೀಸ್‌ ಠಾಣೆಯಲ್ಲಿ ಸಿಕ್ಕ ಶಾರ್ವರಿ! ಗುರಿ ಗೊತ್ತಾಗುವುದರೊಳಗೆ ನಾಶವಾಗುತ್ತಾ ಇಡೀ ಕುಟುಂಬ?

By Suvarna News  |  First Published Apr 16, 2024, 1:31 PM IST

ಶಾರ್ವರಿಯ ಬಹುದೊಡ್ಡ ಗುಟ್ಟು ರಟ್ಟಾಗಿದೆ. ಆದರೆ ಈಗಿರುವ ಪ್ರಶ್ನೆ ಈಕೆಯ ಗುರಿ ಏನು ಎಂದು ಮನೆಯವರಿಗೆ ತಿಳಿಯುವಷ್ಟರಲ್ಲಿ ಇಡೀ ಕುಟುಂಬವೇ ನಾಶವಾಗುತ್ತಾ?
 


ಶಾರ್ವರಿ ಸದಾ ಕುಟುಂಬದ ವಿರುದ್ಧ, ಮಾಧವ್‌ ವಿರುದ್ಧ ಕಿಡಿ ಕಾರುತ್ತಿರುವುದು ಏಕೆ ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಮಾಧವ್‌ ಇಡೀ ಕುಟುಂಬವನ್ನು ಸರ್ವನಾಶ ಮಾಡಲು ಅಪಘಾತ ಮಾಡಿಸಿ ಮಾಧವ್‌ ಪತ್ನಿಯನ್ನು ಕೊಲ್ಲಿಸಿದ್ದಾಳೆ. ಆದರೆ ತನ್ನ ಚಾಣಾಕ್ಯತನದಿಂದ ಈ ಅಪಘಾತ ನಡೆದಿರುವುದು ಮಾಧವ್‌ನಿಂದ ಎಂಬುದಾಗಿ ನಂಬಿಸಿದ್ದಾಳೆ. ಈ ಬಗ್ಗೆ ಖುದ್ದು ಮಾಧವ್‌ಗೂ ಗೊತ್ತಿಲ್ಲ. ಆದರೆ ಮಹೇಶ್‌ಗೆ ಪತ್ನಿಯ ಕುತಂತ್ರ ಗೊತ್ತಿದೆ. ಆದರೆ ಅವಳಿಗೆ ಕುಟುಂಬದ ವಿರುದ್ಧ ಯಾಕಿಷ್ಟು ಸಿಟ್ಟು ಎನ್ನುವುದು ಗೊತ್ತಿಲ್ಲ. ಅಪಘಾತ ಮಾಡಿಸಿರುವ ಬಗ್ಗೆ ಆಗಾಗ್ಗೆ ಶಾರ್ವರಿಗೆ ಶಾಕ್‌ ಕೊಡುತ್ತಲೇ ಇರುತ್ತಾನೆ.

ಅಷ್ಟಕ್ಕೂ ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು. ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು.  

Tap to resize

Latest Videos

ಒಮ್ಮೊಮ್ಮೆ ಹೀಗೂ ಆಗುವುದು... ಸೀತಾ ರಾಮರ ಮದುವೆಗೆ ಒಪ್ಪಿಕೊಂಡು ಬಿಟ್ಲಲ್ಲಾ ವಿಲನ್​ ಭಾರ್ಗವಿ! ಆದರೆ...?

ಇದೀಗ ಬಹುದೊಡ್ಡ ರಹಸ್ಯ ಬಯಲಾಗಿದೆ. ಶಾರ್ವರಿ ಮತ್ತು ಮಹೇಶ್‌ ವಿವಾಹ ವಾರ್ಷಿಕೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಹೇಶ್‌, ಶಾರ್ವರಿ ತನಗೆ ಮೊದಲು ಎಲ್ಲಿ ಸಿಕ್ಕಿದ್ದು ಎಂದು ಹೇಳಿದ್ದಾನೆ. ಈಕೆ ಪೊಲೀಸ್‌ ಠಾಣೆಯಲ್ಲಿ ನನಗೆ ಸಿಕ್ಕಿದ್ದಳು. ತಾನೊಬ್ಬ ಅನಾಥೆ ಎಂದು ಹೇಳಿದ್ದಳು ಎಂದಾಗ, ದೀಪಿಕಾ ಮಧ್ಯೆ ಬಾಯಿ ಹಾಕಿ ಹಾಗಿದ್ರೆ ಅತ್ತೆನೂ ಅನಾಥೆನಾ ಎಂದು ಕೇಳುತ್ತಾಳೆ. ಇಲ್ಲಿಯವರೆಗೆ ಪೂರ್ಣಿಯನ್ನು ಅನಾಥೆ ಎಂದು ಆಕೆ ಹಂಗಿಸುತ್ತಾ ಇರುತ್ತಾಳೆ. ಇದನ್ನು ಕೇಳಿ ಶಾರ್ವರಿಗೂ ಶಾಕ್‌ ಆಗುತ್ತದೆ, ತನ್ನ ಇತಿಹಾಸ ಕೆದಕಿದ ಪತಿಯ ವಿರುದ್ಧವೂ ಸಿಟ್ಟು ಬರುತ್ತದೆ.

ನಾನು ಅನಾಥೆ ಎಂದು ತಿಳಿದುಕೊಂಡದ್ದು ಆಯ್ತು, ಆದರೆ ನನ್ನ ಗುರಿ ಏನು, ಈ ಮನೆಗೆ ಯಾಕೆ ಬಂದೆ ಎಂದು ತಿಳಿಯುವಷ್ಟರಲ್ಲಿ ಇಡೀ ಕುಟುಂಬವೇ ನಾಶವಾಗಿರುತ್ತದೆ ಎಂದು ಶಾರ್ವರಿ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ. ಹಾಗಿದ್ದರೆ ಅವಳಿಗೆ ಯಾಕಿಷ್ಟು ದ್ವೇಷ? ಅವಳ ಹಿನ್ನೆಲೆ ಏನು ಎನ್ನುವುದು ಈಗಿರುವ ಕುತೂಹಲ. 

ಸೊಂಟದ ಭಾಗ ಜೀರೋಸೈಜ್‌, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?


click me!