
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಗೌಡ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಜನಪ್ರಿಯತೆ ಹೊಂದಿದ್ದಾರೆ. ಲಾಕ್‌ಡೌನ್ ವೇಳಿ ಅಮೂಲ್ಯ ಹೆಚ್ಚಿನ ಸಮಯವನ್ನು ಚಿಕ್ಕಮಗಳೂರಿನಲ್ಲಿ ಕಳೆದಿದ್ದಾರೆ, ಡಿಫರೆಂಟ್ ಸ್ಟೈಲ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ.
ಲಂಗ ದಾವಣಿ ಹುಡ್ಗಿ 'ಕಮಲಿ' ಈಗ ಮಾಡ್ರನ್ ಬೆಡಗಿ; ನೋಡಿದ್ರೆ ಶಾಕ್ ಆಗ್ತೀರಾ!
ಅಮೂಲ್ಯ ಬಗ್ಗೆ ಜನರಿಗೆ ಗಮನ ಸೆಳೆಯುವುದು ಆಕೆಯ ಉದ್ದನೆಯ ಕೂದಲು. ಧಾರಾವಾಹಿಯಲ್ಲಿ ಪಾತ್ರಕ್ಕೆ ಬೇಕೆಂದು ಹಳ್ಳಿ ಹುಗುಡಿಯಂತೆ ವಸ್ತ್ರ ಧರಿಸುತ್ತಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಹಾಗೂ ಮಾಡರ್ನ್ ಡ್ರೆಸ್‌ಗಳಲ್ಲಿ ಮಿಂಚುತ್ತಾರೆ. ಅಮೂಲ್ಯ ಫೋಟೋ ಹಾಗೂ ವಿಡಿಯೋಗೆ 'ನೀವು ಬೆಂಗಳೂರಿಗೆ ಬರಲ್ವಾ?', 'ಯಾಕೆ ಪ್ರಕೃತಿಯ ಮಡಿಲಲ್ಲಿ ನೀವು ಎಂಜಾಯ್ ಮಾಡುತ್ತಿರುವುದನ್ನು ಪದೇ ಪದೇ ಹಾಕಿ ನಮಗೆ ಬೇಸರ ಮಾಡುತ್ತೀರಾ, ನಾವು ಟ್ರಿಪ್ ಮಿಸ್ ಮಾಡಿಕೊಳ್ಳುತ್ತಿದ್ದೀವಿ,' ಎಂದು ಫಾಲೋಯರ್ಸ್ ಕಾಮೆಂಟ್ ಮಾಡಿದ್ದಾರೆ.
'ಸ್ವಾತಿ ಮುತ್ತು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ, ಇದೀಗ ಕಮಲಿ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ. ಅನ್‌ಲಾಕ್ ಆಗುತ್ತಿದ್ದಂತೆ ಹೈದರಾಬಾದ್‌ನಲ್ಲಿ ನಾನ್ ಸ್ಟಾಪ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಧಾರಾವಾಹಿ ಲೋಕದಲ್ಲಿ ಡುಯಲ್ ಪಾತ್ರಗಳು ಕಮಲಿ ಧಾರಾವಾಹಿಯಲ್ಲಿ ಮಾತ್ರವಿರುವುದು. ಸರಿಯಾದ ಚಿತ್ರಕಥೆ ಸಿಕ್ಕರೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕೆಂದು ನಿರ್ಧರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.