
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ದಿನೇ ದಿನೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅನು ಸಿರಿಮನೆ ಕಾಲೇಜು ಪರೀಕ್ಷೆ ಎದುರಿಸುತ್ತಿರಬಹುದು. ಆದರೆ, ಪ್ರೀತಿಯಲ್ಲಿ ಸಿಲುಕಿಕೊಂಡಿರುವುದು ಮಾತ್ರ ಆರ್ಯವರ್ಧನ್!
'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?
ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅನು ಸಿರಿಮನೆ ಪಾತ್ರಧಾರಿ ಮೇಘ ಶೆಟ್ಟಿ ಶೂಟಿಂಗ್ ಸೆಟ್‌ಗೆ ಆಗಮಿಸಿದ ಪುಟಾಣಿ ಫ್ಯಾನ್ ಜೊತೆ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲದೆ ಆ ಮಗುವಿಗೆ ಕೈ ತುತ್ತು ಕೊಟ್ಟು ಪ್ರೀತಿ ತೋರಿರುವ ವಿಡಿಯೋವನ್ನು ನಿರ್ದೇಶಕ ಆರೂರು ಜಗದೀಶ್ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ಕುಟುಂಬದೊಂದಿಗೆ ಶೂಟಿಂಗ್ ನೋಡಲು ಬಂದ ಮಗುವಿಗೆ ಅನು ಸಿರಿಮನೆಯ ಕೈತುತ್ತು. ಮಕ್ಕಳು ಹಚ್ಚಿಕೊಂಡರೆ ಹಾಗೇಯೇ. ಪ್ರೀತಿಗೆ, ಅಭಿಮಾನಕ್ಕೆ ಯಾವುದೇ ಅಡೆತಡೆ ಇರಲ್ಲ' ಎಂದು ವೀಡಿಯೋಗೆ ಒಕ್ಕಣಿಕೆ ಬರೆದಿದ್ದಾರೆ.
ಜಲಂದರ್ ಬಲೆಯಲ್ಲಿ ಸಿಲುಕಿಕೊಂಡಿರುವ ಆರ್ಯವರ್ಧನ್ ಪಿಜ್ಜಾ ಡೆಲಿವರಿ ಬಾಯ್ ವೇಷದಲ್ಲಿ ಮನೆಯಿಂದ ಹೊರ ಬಂದು, ಅನು ಸಿರಿಮನೆಯನ್ನು ಭೇಟಿ ಮಾಡುತ್ತಾರೆ. ಈ ವೇಳೆ ಅನು ತನ್ನ ನೆನಪಿಗೆಂದು ಹೂ ಗಿಡವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ, ಒಂದು ಶರತ್ತಿನೊಂದಿದಗೆ.....
‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ!?
ಪರೀಕ್ಷೆ ಮುಗಿಯುಷ್ಟರಲ್ಲಿ ಗಿಡದಲ್ಲಿ ಗುಲಾಬಿ ಅರಳಿದರೆ, ಅರ್ಯ ತನ್ನ ಪ್ರೀತಿಯನ್ನು ಅನು ಬಳಿ ಒಪ್ಪಿಕೊಳ್ಳಬೇಕು. ಹಾಗೇ ಅನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ, ಆರ್ಯ ಸರ್ಪ್ರೈಸ್ ಗಿಫ್ಟ್‌ವೊಂದನ್ನು ನೀಡುವುದಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.