Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ...

Kannadaprabha News   | Asianet News
Published : Apr 04, 2020, 04:12 PM IST
Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ...

ಸಾರಾಂಶ

ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

ಇದು ಆಕಸ್ಮಿಕ ಮತ್ತು ಅನಿವಾರ್ಯವಾಗಿ ಎದುರಾಗಿರುವ ಲಾಕ್‌ ಡೌನ್‌ ಬಂಧನ. ಇದನ್ನ ನಾನು ವಿರಾಮ ಎಂದುಕೊಳ್ಳುವೆ. ಕಿರುತೆರೆಗೆ ಮರಳಿ ಬಂದು ‘ಜೊತೆ ಜೊತೆಯಲಿ’ ಎಂದು ಒಂಚೂರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೆ. ಮನೆಯವರ ಜತೆಗೆ ಇರಲಿಕ್ಕೆ ಆಗರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲೇ ಕೂತು ಮಾಡಿಕೊಳ್ಳಬೇಕಾದ ಕೆಲಸಗಳನ್ನು ದಿನಾ ಮುಂದೂಡುತ್ತಿದ್ವಿ.

ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!

ಈ ಲಾಕ್‌ ಡೌನ್‌ ಈಗ ಆ ಎಲ್ಲ ಕೆಲಸಗಳನ್ನು ನೆನಪಿಸಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರ ಜೀವನ ಪುಟಗಳನ್ನು ತೆರೆದಿಡುವ ಸಾಕ್ಷ್ಯ ಚಿತ್ರ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಅದಕ್ಕೆ ಸಬ್‌ಟೈಟಲ್‌ ಬರೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಜತೆಗೆ ನಿಯಮಿತವಾಗಿ ಆಂಗ್ಲ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದೇನೆ. ಇದರ ನಡುವೆ ಸಿನಿಮಾ ನೋಡುವುದು. ಅಲ್ಲದೆ ಯಾರೂ ಈಗ ಮನೆಗೆ ಕೆಲಸಗಾರರು ಬರುತ್ತಿಲ್ಲ. ನಾವೇ ಅವರನ್ನು ಮನೆಗೆ ಕಳುಹಿಸಿದ್ದೇವೆ. ಈಗ ಅವರ ಕೆಲಸಗಳನ್ನು ನನ್ನ ಪತ್ನಿ ಕೀರ್ತಿ ಹಾಗೂ ತಾಯಿ ಭಾರತಿ ವಿಷ್ಣುವರ್ಧನ್‌ ಅವರೇ ಮಾಡಬೇಕಿದೆ.

ಕೌಟುಂಬಿಕ ಸಂಭ್ರಮಗಳ ಜೊತೆ ಜೊತೆಯಲಿ..!

ಮನೆ ಕೆಲಸಗಳಿಗೆ ನಾನು ಜತೆಯಾಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ನಟಿಸಿದ ಧಾರಾವಾಹಿಯನ್ನು ನಾನೇ ನೋಡುವ ಅವಕಾಶ ಸಿಕ್ಕಿದೆ. ಯಾಕೆಂದರೆ ನಿರಂತವಾಗಿ ನಡೆಯುತ್ತಿದ್ದ ಶೂಟಿಂಗ್‌ ಬ್ಯುಸಿಯಲ್ಲಿ ನಮ್ಮ ಧಾರಾವಾಹಿಯನ್ನು ನಾವೇ ನೋಡಲು ಆಗುತ್ತಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಜತೆಗೆ ಸೋಮವಾರದಿಂದ ಜೊತೆ ಜೊತೆಯಲಿ ಧಾರಾವಾಹಿ ಹಳೆಯ ಕಂತುಗಳು ಮರು ಪ್ರಸಾರ ಆಗುತ್ತಿದೆ. ಅದನ್ನು ನೋಡುತ್ತೇನೆ. ಬಹುಶಃ ಈ ಲಾಕ್‌ ಡೌನ್‌ ನಿಮ್ಮನ್ನು ನೀವು ನೋಡಿಕೊಳ್ಳಿ ಎನ್ನುವಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶೂವೊಳಗಡೆ ಊಟ ಇಟ್ಟು ತಿಂತೀನಿ ಎನ್ನೋನಿಗೆ Bigg Boss ಸ್ಟ್ಯಾಂಡರ್ಟ್‌ ಗೊತ್ತಾ? ಧ್ರುವಂತ್‌ ಚಳಿ ಬಿಡಿಸಿದ ರಜತ್
Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ