
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಕಾಮಿಡಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಚಿತ್ರರಂಗಕ್ಕೆ ಪ್ರತಿಭಾನ್ವಿತ ಕಲಾವಿದರನ್ನು ಕೂಡುಗೆಯಾಗಿ ನೀಡಿದೆ. ಅವರ ಪೈಕಿ ಸೀಸನ್ -1 ವಿನ್ನರ್ ಶಿವರಾಜ್ ಕೆ ಆರ್ ಪೇಟೆ ಹೆಚ್ಚು ಪ್ರಸಿದ್ಧರಾಗಿದ್ದಾರೆ.
ನಾನು ಹೀರೋ ಅಲ್ಲ, ಈ ಚಿತ್ರದ ಕೂಸು: ಶಿವರಾಜ್ ಕೆಆರ್ ಪೇಟೆ
ಶಿವರಾಜ್ ತಮ್ಮ ಹುಟ್ಟಿದ ಹಬ್ಬವನ್ನು ದೇಸಿ ಶೈಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಸದ್ಯಕ್ಕೆ ಅಕ್ಕ-ಭಾವನ ಜೊತೆ ಕೆ.ಆರ್. ನಗರದ ಮೇಲೂರಿನಲ್ಲಿರುವ ಶಿವರಾಜ್, ರಾಗಿ ಮುದ್ದಿಯನ್ನೇ ಕೇಕ್ ಶೈಲಿಯಲ್ಲಿ ತಯಾರಿಸಿ ಕಟ್ ಮಾಡಿದ್ದಾರೆ. ಹಾಸ್ಯ ನಟನ ಈ ದೇಸಿ ಆಚರಣೆ ನಟ್ಟಿಗರ ಗಮನ ಸಳೆದಿದೆ.
"
ಶಿವರಾಜ್ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ (ಇನ್ನೂ ಹೆಸರು ಇಟ್ಟಿಲ್ಲ), ಬಂಪರ್ ಹಾಗೂ ಶ್ರೀಮುರಳಿ ಅಭಿನಯದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಶಿವರಾಜ್ ಬಾಳಲ್ಲಿ ಹೊಸತನ್ನು ತರಲಿ ಹಾಗೂ ಚಿತ್ರರಂಗದಲ್ಲಿ ಉತ್ತುಂಗಕ್ಕೇರಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.