
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಟಾಪ್ ರೇಟಿಂಗ್ ಧಾರಾವಾಹಿ 'ಜೊತೆ ಜೊತೆಯಲಿ' ಪ್ರಮುಖ ಪಾತ್ರಧಾರಿ ಸುಬ್ರಹ್ಮಣ್ಯ ಸಿರಿಮನೆ ಅಲಿಯಾಸ್ ಶಿವಾಜಿ ರಾವ್ ಜಾದವ್ ಚಿತ್ರೀಕರಣ ಮುಗಿಸಿ ಮನೆಗೆ ಹಿಂದಿರುಗುವ ವೇಳೆ, ಕಳ್ಳರು ಅವರ ಕೈಯಲ್ಲಿದ್ದ ಫೋನ್ ಕದ್ದು ಪರಾರಿಯಾಗಿದ್ದಾರೆ.
ಬಸವನಗುಡಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿನ ಪೊಲೀಸರಿಗೆ ಶಿವಾಜಿ ರಾವ್ ದೂರು ದಾಖಲಿಸಿದ್ದಾರೆ. ಹಾಗೂ ಇಂಥದ್ದೇ ಘಟನೆ ಹಲವು ಬಾರಿ ನಡೆದಿರುವ ಕಾರಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಆರ್ಯವರ್ಧನ್?
'ಶೂಟಿಂಗ್ ಮುಗಿದಾಗ ರಾತ್ರಿ 9 ಗಂಟೆಯಾಗಿತ್ತು. ಮನೆ ಬೆಂಗಳೂರಿನಲ್ಲಿ ತುಂಬಾ ದೂರ ಇರುವ ಕಾರಣ ಕ್ಯಾಬ್ ಬುಕ್ ಮಾಡಲು ಜೇಬಿನಿಂದ ಮೊಬೈಲ್ ತೆಗೆದೆ. ಒಂದು ನಿಮಿಷದಲ್ಲಿ ಕ್ಯಾಬ್ ಬರಬೇಕಿತ್ತು. ಅಷ್ಟರಲ್ಲಿ ಒಬ್ಬ ವಯಸ್ಸಾದ ಹೆಂಗಸು ಬಂದು ನನ್ನ ಆ್ಯಕ್ಟಿಂಗ್ ಬಗ್ಗೆ ಮಾತನಾಡುತ್ತಿದ್ದರು. ನಾನು ಹಾಗೆ ಮೊಬೈಲ್ ನೋಡಿಕೊಂಡು ನಿಂತಿದ್ದೆ. ಬೈಕ್‌ನಲ್ಲಿ ಒಬ್ಬ ಸ್ಲೋ ಆಗಿ ಬಂದು ನನ್ನ ಮೊಬೈಲ್ ಕಿತ್ತುಕೊಂಡು ಹೋಗ್ಬಿಟ್ಟ,' ಎಂದು ಖಾಸಗಿ ವಾಹಿನಿಯೊಂದಕ್ಕೆ ಸುಬ್ರಹ್ಮಣ್ಯ ಘಟನೆ ಬಗ್ಗೆ ವಿವರಿಸಿದ್ದಾರೆ.
ಇಂಥ ನೋವು ಯಾರಿಗೂ ಬರಬಾರ್ದು, ಇಂದಿಗೂ ಮರೆಯೋಕೆ ಆಗ್ತಿಲ್ಲ: ಕಣ್ಣೀರಿಟ್ಟ ಅನು ಸಿರಿಮನೆ
'ಮೊಬೈಲ್ ಕದಿಯುವವರಿಗೆ ನನಗೊಂದು ಮನವಿ. ಜೀವನ ಮಾಡಲು ಕಷ್ಟವಿದ್ದರೆ, ಭಿಕ್ಷೆ ಬೇಡಿ. ಯಾರಾದ್ರೂ 10 ,20 ರೂ. ಕೊಡ್ತಾರೆ ಆದರೆ ಕಲಾವಿದರ ಮೊಬೈಲ್ ಕದಿಯುತ್ತೀರಲ್ಲ, ಇನ್ನು ಇಡೀ ಜೀವನ ಅದರಲ್ಲಿರುತ್ತದೆ. ಶೂಟಿಂಗ್ ಸೆಟ್ ಫೋಟೋಗಳು ಎಲ್ಲವೂ ಇರುತ್ತೆ. ಮನುಷ್ಯನಿಗೆ ಕಣ್ಣು, ಕಿವಿ, ಕಾಲು, ಬಾಯಿ ಎಷ್ಟು ಮುಖ್ಯವೋ ಮೊಬೈಲ್ ಕೂಡ ಅಷ್ಟೇ ಮುಖ್ಯ,' ಎಂದು ಶಿವಾಜಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.