
'ಗಟ್ಟಿಮೇಳ' ಧಾರವಾಹಿಯಲ್ಲಿ ಸಹೋದರಿಯ ಪಾತ್ರ ನಿರ್ವಹಿಸುತ್ತಾ ಇರುವ ಅನ್ವಿತಾ ಈಗ ಸಖತ್ ಫೇಮಸ್ ಆಗಿದ್ದಾರೆ. ಮೂಲತಃ ಸಾಗರದವರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದು ನಂತರ ಕಾಲೇಜು ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ.
ನಿರೂಪಣೆಯ ಮೂಲಕ ಮೊದಲ ಹೆಜ್ಜೆ:
ತಾನು ನಟಿಯಾಗಬೇಕೆಂದು ಯಾವತ್ತೂ ಅನ್ವಿತಾ ಅಂದುಕೊಂಡಿರಲಿಲ್ಲ. ಆದರೆ ನಿರೂಪಕಿಯಾಗಬೇಕೆಂಬ ಆಸೆ ಮೊದಲಿನಿಂದಲೇ ಇತ್ತು. ಮಂಗಳೂರಿನಲ್ಲಿ ಎಂಬಿಎ ಓದುತ್ತಿದ್ದ ವೇಳೆ ಅಲ್ಲಿನ 'ನಮ್ಮ ಟಿವಿ' ಎಂಬ ಲೋಕಲ್ ಚಾನಲ್‌ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಸ್ಕ್ರೀನ್‌ಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ ಇವರಿಗೆ ಅದೇ ಸಂದರ್ಭದಲ್ಲಿ ತುಳು ಚಿತ್ರಕ್ಕೆ ಆಫರ್ ಬಂದಿತ್ತು. ಚಾನಲ್‌ನಲ್ಲಿ ಆ್ಯಂಕರಿಂಗ್ ಮಾಡುತ್ತಲೇ ಸಾಕಷ್ಟು ಸ್ಟೇಜ್ ಶೋಗಳನ್ನೂ ನಡೆಸಿಕೊಟ್ಟಿದ್ದಾರೆ.
ಗಟ್ಟಿಮೇಳ 'ಜಗಳ ಗಂಟಿ' ನಿಶಾ ರವಿಕುಮಾರ್ ಗ್ಲಾಮರಸ್ ಫೋಟೋ!
ರಿಯಲ್ ಲೈಫ್ ನಲ್ಲೂ ಅಣ್ಣನೆಂದರೆ ಪಂಚಪ್ರಾಣ!
ರೀಲ್‌ನಲ್ಲಿ ಇರುವಂತೆ ರಿಯಲ್ ಲೈಫ್‌ನಲ್ಲೂ ಅನ್ವಿತಾರಿಗೆ ಅಣ್ಣ ಎಂದರೆ ಜೀವ. ಇವರ ಅಣ್ಣ ಅನೂಪ್ ಸಾಗರ್ ಕೂಡಾ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ತಂಗಿಗೆ ನಟನೆಗೆ ಬೇಕಾದ ಎಲ್ಲಾ ರೀತಿಯ ಸಲಹೆ ಸೂಚನೆ, ಮಾರ್ಗದರ್ಶನವನ್ನು ನೀಡುತ್ತಾರೆ.
ತುಳು ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ:
ಅನ್ವಿತಾ ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದು ತುಳು ಚಿತ್ರದಲ್ಲಿ. ನಿರ್ದೇಶಕ ರಂಜಿತ್ ಬಜ್ಪೆಯವರ ‘ದಂಡ್’ ಚಿತ್ರದ ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದರು. ತದನಂತರ ಬಲೆಪುದರ್ ದೀಕ, ಪೆಟ್ ಕಮ್ಮಿ ಮೊದಲಾದ ತುಳು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಣ್ಣಬಣ್ಣದ ಬದುಕು, 'ಜೀವನಯಜ್ಞ' ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. 5 ವರ್ಷಗಳ ಕಾಲ ತುಳು ಚಿತ್ರದಲ್ಲಿ ನಟಿಸಿದ ಇವರು ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಮಿಂಚಿನ ನಾಯಕಿದ್ದಾರೆ.
‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!
ಕಠಿಣ ಪರಿಶ್ರಮವಿದ್ದರೆ ಯಶಸ್ಸು ಖಚಿತ:
ನಾವು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದರೆ ಸಾಲದು ಅದಕ್ಕೆ ಸರಿಯಾಗಿ ಶ್ರಮ ಪಡಬೇಕು. ಯಾವಾಗ ನಮ್ಮ ಕೆಲಸವನ್ನು ಇಷ್ಟಪಟ್ಟು ಮಾಡುತ್ತೇವೋ ಒಂದಲ್ಲ ಒಂದು ದಿನ ಆ ಬೆವರಿನ ಫಲ ನಮ್ಮದಾಗುತ್ತದೆ. ಒಂದು ಸಲ ನೇಮ್ ಫೇಮ್ ಬಂದ್ರೆ ಅಹಂಕಾರ ಪಡದೇ ಬೆಳೆಯಬೇಕು ಎನ್ನುತ್ತಾರೆ ಅನ್ವಿತಾ.
'ಗಟ್ಟಿಮೇಳ' ದ ಮೂಲಕ ಫೇಮಸ್ ಆದ ನಟಿ:
ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರವಾಹಿಯಲ್ಲಿ ನಾಯಕನ ಅಕ್ಕನ ಪಾತ್ರವನ್ನು ನಿರ್ವಹಿಸುತ್ತಿರುವ ಆದ್ಯಾ ಅಲಿಯಾಸ್ ಅನ್ವಿತಾ ಈಗ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಜನರಂತೂ ಇವರನ್ನು ಗಟ್ಟಿಮೇಳದ ಅಕ್ಕ ಎಂದೇ ಗುರುತಿಸುವುದರಿಂದ ಒಂದು ರೀತಿಯಲ್ಲಿ ಕರುನಾಡಿನ ಅಕ್ಕ ಎಂದೇ ಖ್ಯಾತಿ ಪಡೆದಿದ್ದಾರೆ.
ರಿಯಲ್ ಲೈಫ್ ನಲ್ಲೂ ಅಣ್ಣ ಎಂದರೆ ತುಂಬಾ ಪ್ರೀತಿ ಇವರು ಇವರಿಗೆ ರೀಲ್ ನಲ್ಲೂ ಅಂತದೇ ಪಾತ್ರ ಸಿಕ್ಕಿರುವುದು ತುಂಬಾ ಖುಷಿ ತಂದು ಕೊಟ್ಟಿದೆಯಂತೆ. ಕ್ರಾಫ್ಟ್, ಕುಕ್ಕಿಂಗ್, ಡ್ಯಾನ್ಸಿಂಗ್ ಅಂದ್ರೆ ಸಿಕ್ಕಾ ಪಟ್ಟೆ ಕ್ರೇಜ್. ಇವರಿಗೆ ಪೆಟ್‍ಗಳೆಂದರೆ ಅಷ್ಟೇ ಪ್ರೀತಿ. ಅವುಗಳನ್ನು ನೋಡಬೇಕೆಂದಾಗೆಲ್ಲಾ ವಿಡಿಯೋ ಕಾಲ್ ಮಾಡಿ ಸಂತಸಪಡುತ್ತಾರಂತೆ. ಈಗಾಗಲೇ ಸಾಕಷ್ಟು ಆಫರ್ಸ್ ಗಳು ಇವರನ್ನು ಅರಸಿ ಬಂದಿದೆ. ಎರಡು ಸಿನಿಮಾ ಹಾಗೂ ಒಂದು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ವಿಲನ್ ಹಾಗೂ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದು ಅನ್ವಿತಾ ಅವರ ಕನಸು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.