
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿಗಳಿಗೆ ಗುಡ್ ಬೈ ಹೇಳುವ ಕಾಲ ಕೂಡಿ ಬಂದಿದೆ. ಈಗಾಗಲೇ ಅಗ್ನಿಸಾಕ್ಷಿ ಮುಗಿದಿದೆ, ಪುಟ್ಟ ಗೌರಿ ಮದುವೆ ಬದಲು ಮಂಗಳ ಗೌರಿ ಶುರುವಾಗಿದೆ. ಇದೀಗ ಮತ್ತೊಂದು ಪ್ರಸಿದ್ಧ ಧಾರಾವಾಹಿಯ ಕಾಲ. ಸುಮಾರು 6 ವರ್ಷಗಳಿಂದ ಪ್ರಸಾರವಾಗುತ್ತಿದ್ದು, 2200ಕ್ಕೂ ಹೆಚ್ಚು ಸಂಚಿಕೆಗಳ ಮೂಲಕ ವೀಕ್ಷಕರನ್ನು ಮನರಂಜಿಸಿರುವ 'ಲಕ್ಷ್ಮಿ ಬಾರಮ್ಮ'ಗೆ ಗುಡ್ ಬೈ ಹೇಳುವ ಸಮಯ ಬಂದಿದೆ.
'ಅಗ್ನಿಸಾಕ್ಷಿ'ಯೇನೋ ಮುಗಿಯಿತು; ಮುಗಿಲು ಮುಟ್ಟಿದೆ ಮಹಿಳೆಯರ ಆಕ್ರಂದನ!
ಇನ್ನೇನು ಕ್ಲೈಮ್ಯಾಕ್ಸ್ ಹಂತದಲ್ಲಿ ಅಕ್ಕ-ತಂಗಿ, ಚಿನ್ನು - ಚಂದು, ಚಂದು- ಗೊಂಬೆ, ಗೊಂಬೆ ಮತ್ತು ಹಿಂದಿನ ಕುಟುಂಬದ ಸಂಬಂಧಗಳ ಪದರಗಳು ಒಂದೊಂದೇ ಬಹಿರಂಗಗೊಳ್ಳುತ್ತಿವೆ. ಎಲ್ಲವೂ ಒಂದು ಹಂತಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿದ್ದು, ಇದೇ ತಿಂಗಳ ಜನವರಿ 24 ಕೊನೆಗೊಳ್ಳಲಿದೆ.
ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!
ಜನವರಿ 27ರಂದು ರಾತ್ರಿ 7.30ಕ್ಕೆ 'ಪುಟ್ಟ ಗೌರಿ ಮದುವೆ' ಖ್ಯಾತಿಯ ರಜಿನಿ ರಾಘವನ್ ಅಭಿನಯಿಸಿರುವ 'ಕನ್ನಡತಿ' ಧಾರಾವಾಹಿ ಪ್ರಸಾರವಾಗಲಿದೆ. ರಜಿನಿ ಈ ಹಿಂದೆ 'ಇಷ್ಟ ದೇವತೆ' ಸೀರಿಯಲ್‌ಗೆ ಕ್ರಿಯೇಟಿವ್ ಡೈರೆಕ್ಟರ್ ಹಾಗೂ ಸ್ಕ್ರಿಪ್ಟ್ ರೈಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಾರಣಾಂತರಗಳಿಂದ ಧಾರಾವಾಹಿ ಅಂತಿಮಗೊಂಡಿತ್ತು.
ಈಗ ಭುವನೇಶ್ವರಿ ಪಾತ್ರದ ಮೂಲಕ 'ಕನ್ನಡತಿ' ಧಾರಾವಾಹಿ ಮೂಲಕ ಮತ್ತೊಮ್ಮೆ ಮನೋರಂಜಿಸಲು ಬರುತ್ತಿದ್ದಾರೆ. ಇನ್ನು ರಜಿನಿಗೆ ಜೋಡಿಯಾಗಿ 'ಕಿನ್ನರಿ' ಧಾರಾವಾಹಿಯ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.