ಕಪಲ್ಸ್ ಕಿಚನ್‌ಗೆ ಕಾಲಿಟ್ಟು ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಲಕ್ಷ್ಮಿ ಬಾರಮ್ಮ ಚಿನ್ನು. ಹೀಗೆ ಒಪ್ಪಿಸಬಹುದಾ ಎಂದ ಫ್ಯಾನ್ಸ್.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಲಚ್ಚಿ ಎಂದು ಜನರಿಗೆ ಪರಿಚಯವಾದ ರಶ್ಮಿ ಪ್ರಭಾಕರ್ ಮತ್ತು ಪತಿ ನಿಖಿಲ್ ದಂಪತಿ ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಜೀ ಕನ್ನಡ ಕಪಲ್ಸ್ ಕಿಚನ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ರಶ್ಮಿಕಾ ತಮ್ಮ ಲವ್ ಸ್ಟೋರಿ ಹಾಗೂ ತಂದೆಗೆ ತಮ್ಮ ಪ್ರೀತಿ ಮ್ಯಾಟರ್ ರಿವೀಲ್ ಮಾಡಿದ ರೀತಿ ಹಂಚಿಕೊಂಡಿದ್ದಾರೆ. ಅಲ್ಲದೆ ತಂದೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದ್ದ ಕಾರಣ ರಶ್ಮಿ ಪ್ರೀತಿಯಿಂದ ಟೈಗರ್ ಪಭಾಕರ್ ಎಂದು ಕರೆಯುತ್ತಾರಂತೆ.
ಸಿನಿಮಾದಲ್ಲಿ ನೋಡುವ ರೀತಿ ಹಳ್ಳಿ ಹುಡುಗಿ ತಮ್ಮ ಪ್ರೀತಿ ಒಪ್ಪಿಸಲು ಎಷ್ಟು ಕಷ್ಟ ಆಗುತ್ತದೆ ರೂಮ್‌ನಲ್ಲಿ ಕಾಲ್ ಮಾಡುತ್ತಾರೆ ಹಾಗೆ ಹೀಗೆ ಎಂದು ಯೋಚನೆ ಮಾಡಿದೆ ಆದರೆ ನನ್ನ ಮ್ಯಾಟರ್ ತುಂಬಾ ಸ್ಮೂತ್ ಅಗಿ ಆಯ್ತು ಏಕೆಂದರೆ ನಾನು ಕೊಂಚ ಆಕ್ಟಿಂಗ್ ಮಾಡುವ ಪರಿಸ್ಥಿತಿ ಎದುರಾಯಿತ್ತು. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನನ್ನ ಮನೆಯಲ್ಲಿ ಅಡುಗೆ ಮಾಡಿ ಫುಡ್ ಕಿಟ್ ವಿತರಣೆ ಮಾಡುತ್ತಿದ್ವಿ. ಅಡುಗೆ ಮಾಡಲು ಭಟ್ರು ಬಂದಿದ್ದಾರೆ ಅದರೆ ಅವರ ಜೊತೆ 20 ಮಂದಿ ಸ್ನೇಹಿತರನ್ನೂ ಸೇರಿಸಿಕೊಂಡೆ. ಯಾಕೆ 20 ಮಂದಿ ಅಂದ್ರೆ 20ರಲ್ಲಿ ಒಬ್ಬ ನಿಖಿಲ್ ಎಂದು ಪರಿಚಯ ಮಾಡಿಸಲು ಎಂದು ರಶ್ಮಿ ಪ್ರಭಾಕರ್ ಹೇಳಿದ್ದಾರೆ.
13 ವರ್ಷ ಆದ್ಮೇಲೆ ತಂದೆ ಜೊತೆ ಮಾತನಾಡಿದ ಜೇಂಡೆ; 6 ವರ್ಷ ಪ್ರೀತಿ ಹಿಂದಿರುವ ಅಸಲಿ ಕಥೆ!
19ರನ್ನು ಪರಿಚಯ ಮಾಡಿದ ಮೇಲೆ 20ನೇ ವ್ಯಕ್ತಿ ನಿಖಿಲ್ ಎಂದು ಪರಿಚಯ ಮಾಡಿಕೊಟ್ಟೆ. ಅದರಲ್ಲೂ ನಿಖಿಲ್ ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಕ್ಕೆ ನನ್ನ ತಂದೆ ಫುಲ್ ಖುಷಿ ಆಗಿಬಿಟ್ಟರು. ಆಮೇಲೆ ಏನೇ ಸಹಾಯ ಕೇಳಿದ್ದರೂ ಕೆಲಸ ಹೇಳಿದ್ದರೂ ಎಲ್ಲಾದಕ್ಕೂ ನಿಖಿಲ್ ಹೆಸರು ಹೇಳುತ್ತಿದ್ದೆ. ನಿಖಿಲ್‌ಗೆ ಗೊತ್ತು ನಿಖಿಲ್ ಕರ್ಕೊಂಡು ಬರುತ್ತಾರೆ ಹಾಗೆ ಹೀಗೆ ಹೇಳಿ ಹೇಳಿ ಪರಿಚಯ ಮಾಡಿಸಿಬಿಟ್ಟೆ ಎಂದಿದ್ದಾರೆ ರಶ್ಮಿ.