Bharjari Bachelors Season 2: 'ಭರ್ಜರಿ ಬ್ಯಾಚುಲರ್ಸ್‌ 2' ವಿಜೇತರು ಯಾರು? ಸುನೀಲ್‌ ಅಥವಾ ರಕ್ಷಕ್?

Published : Jul 25, 2025, 03:04 PM ISTUpdated : Jul 25, 2025, 03:14 PM IST
bharjari bachelors season 2 grand finale date and winner name

ಸಾರಾಂಶ

Bharjari Bachelors Season 2 Grand Finale Date: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ 'ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2' ಶೋ ಗ್ರ್ಯಾಂಡ್‌ ಫಿನಾಲೆ ದಿನಾಂಕ ರಿವೀಲ್‌ ಆಗಿದೆ. ಹಾಗಾದರೆ ವಿಜೇತರು ಯಾರು? 

ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್‌ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ( Bharjari Bachelors Season 2 ) ಗ್ರ್ಯಾಂಡ್‌ ಫಿನಾಲೆಗೆ ರೆಡಿಯಾಗಿದೆ. ಮದುವೆ ಆಗುವುದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಆಗಿದೆ. ಹೀಗಾಗಿ ಯಾರು ಗೆಲ್ಲಬಹುದು ಎಂಬ ಕುತೂಹಲವೇ ಜಾಸ್ತಿ ಆಗಿದೆ.

ಅನೇಕ ಸುತ್ತುಗಳಿದ್ದವು!

'ಭರ್ಜರಿ ಬ್ಯಾಚುಲರ್ಸ್' ಮೊದಲ ಸೀಸನ್‌ನ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಪರಿಚಯ ಮಾಡಲಾಯಿತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸಹಜತೆ, ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ. ಇನ್ನು ಕೆಲ ನಟಿಯರು ಮೆಂಟರ್‌ ಆಗಿ ಆ ಹುಡುಗರನ್ನು ತಿದ್ದುವ ಕೆಲಸ ಮಾಡಿದ್ದಾರೆ. ಜೀವನದ ಪಾಠದ ಜೊತೆಗೆ ಭರ್ಜರಿ ಮನರಂಜನೆ ಕೂಡ ಇಲ್ಲಿತ್ತು.

ಜನರಿಗೆ ಕನೆಕ್ಟ್‌ ಆದ ಶೋ!

ಇನ್ನು ಈ ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಚೆನ್ನಾಗಿ ಭಾಗವಹಿಸಿ ಎಲ್ಲರನ್ನೂ ರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರವಿಚಂದ್ರನ್‌, ರಚಿತಾ ರಾಮ್‌ ಶೋ!

ನಟ, ನಿರೂಪಕ ನಿರಂಜನ್ ದೇಶಪಾಂಡೆ ಈ ಶೋ ನಿರೂಪಣೆ ಮಾಡಿದ್ದರು. ಇವರ ನಿರೂಪಣೆ, ಕಾಮಿಡಿ ಟೈಮಿಂಗ್‌ ಈ ಶೋಗೆ ಮೆರುಗು ತಂದಿದೆ. ಅಂದಹಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಶೋನ ತೀರ್ಪುಗಾರರಾಗಿದ್ದಾರೆ. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ರಂಜಿಸಿದ್ದಾರೆ.

ಫಿನಾಲೆ ಸ್ಪರ್ಧಿಗಳು ಯಾರು?

ಈ ಸೀಸನ್‌ನ ಅಂತಿಮ ಸುತ್ತಿನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯಾ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ಎನ್ನುವ ಕುತೂಹಲ ಹೆಚ್ಚಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಫಿನಾಲೆ ಪ್ರಸಾರ ಆಗಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?