Dr Bro: ಡಾ ಬ್ರೋಗೆ ಅನ್ಯಾಯ, ಕ್ಷಮೆ ಕೇಳಿದ ಯೂಟ್ಯೂಬರ್ ಲೋಹಿತ್, ಇಷ್ಟಕ್ಕೂ ನಡೆದದ್ದೇನು?

By Suvarna NewsFirst Published Dec 14, 2022, 12:34 PM IST
Highlights

ಫೇಮಸ್ ಯೂಟ್ಯೂಬರ್ ಡಾ ಬ್ರೋಗೆ ಒಂದು ಅನ್ಯಾಯವಾಗಿದೆ. ತಾನು ಮಾಡಿದ ತಪ್ಪಿಗೆ ಮತ್ತೊಬ್ಬ ಯೂಟ್ಯೂಬರ್‌ ಲೋಹಿತ್‌ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಡಾ ಬ್ರೋ ಫೇಮಸ್‌ ಟ್ರಾವೆಲ್‌ ವ್ಲಾಗರ್‌. ತುಂಬ ಚಿಕ್ಕ ವಯಸ್ಸಿನ ಈ ಹುಡುಗ ದೇಶ ದೇಶ ಸುತ್ತುತ್ತಾ ಅರೆಬರೆ ಇಂಗ್ಲೀಷ್, ಗೂಗಲ್ ಟ್ರಾನ್ಸ್‌ಲೇಟರ್‌ ಮೂಲಕವೇ ಎಲ್ಲವನ್ನೂ ಮ್ಯಾನೇಜ್‌ ಮಾಡುತ್ತಾ ಇಡೀ ಜಗತ್ತನ್ನು ಕನ್ನಡಿಗರಿಗೆ ಪರಿಚಯಿಸುತ್ತೇನೆ ಅಂತ ಹೊರಟವರು. ಭಾಷೆ ಗೊತ್ತಿಲ್ಲದ ಪರಿಚಯ ಇಲ್ಲದ ಜಾಗದಲ್ಲಿ ನಿರ್ಭಯದಿಂದ ಓಡಾಡುತ್ತಾ, ನಮಸ್ಕಾರ ಬ್ರೋ ಅಂತ ಮಾತು ಶುರು ಮಾಡೋ ಈ ಟ್ರಾವೆಲ್ ವ್ಲಾಗರ್ ಗೆ ಇತ್ತೀಚೆಗೆ ಒಂದು ಪೋಸ್ಟ್ ಮಾಡಿದ್ದರು. ತನಗೆ ಯಾರೋ ಬೆನ್ನಿಗೆ ಚೂರಿ ಹಾಕಿದ್ದಾರೆ. ತಾನು ಸಹಾಯ ಮಾಡಿದವರೇ ತನಗೆ ಹಿಂದಿಂದ ಇರಿಯುವ ಕೆಲಸ ಮಾಡಿದ್ದಾರೆ ಎಂಬ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಷ್ಟಕ್ಕೂ ಆಗಿದ್ದೇನು ಅನ್ನೋ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ಸ್ಪಷ್ಟತೆ ಸಿಕ್ಕಿದೆ. ಅಷ್ಟೇ ಅಲ್ಲ, ಡಾ ಬ್ರೋ ಪೋಸ್ಟ್ ನೋಡಿ ಅನೇಕ ಫಾಲೋವರ್ಸ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕೊನೆಗೆ ಇವರಿಗೆ ಅನ್ಯಾಯ ಮಾಡಿದ ಇನ್ನೊಬ್ಬ ಯೂಟ್ಯೂಬರ್ ಲೋಹಿತ್ ಇದೀಗ ಡಾ ಬ್ರೋ ಕ್ಷಮೆ ಕೇಳಿದ್ದಾರೆ.

ನಡೆದದ್ದೇನು?
ಡಾ ಬ್ರೋ ಕೆಲವು ದಿನಗಳ ಹಿಂದೆ ತಾಂಜಾನಿಯಾ ದೇಶದ ಪ್ರವಾಸಕ್ಕೆ ಹೋಗಿದ್ದರು. ಆಗ ಅವರಿಗೆ ಮೆಸೇಜ್ ಮಾಡಿರುವ ಯೂಟ್ಯೂಬರ್ ಲೋಹಿತ್ 'ನೀವು ತಾಂಜಾನಿಯಾದ ಹಾಡ್ಜಬಿ ಬುಡಕಟ್ಟು ಜನಾಂಗದವರ ವಿಡಿಯೋ ಮಾಡ್ತೀರಾ?' ಎಂದು ಕೇಳಿದ್ದಾರೆ. ಅದಕ್ಕೆ ಡಾ ಬ್ರೋ 'ಹೌದು, ನಾನಾಗಲೇ ಅವರ ಬಗ್ಗೆ ಅಧ್ಯಯನ ಮಾಡಿದ್ದೇನೆ. ವೀಕೆಂಡ್‌ನಲ್ಲಿ ಚಿತ್ರೀಕರಣ ಮಾಡ್ತೀನಿ' ಎಂದಿದ್ದಾರೆ. ತಾನಂದ ಹಾಗೇ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಚಿತ್ರೀಕರಣವನ್ನೂ ಸಹ ಮಾಡಿದ್ದಾರೆ. ಅದೇ ಹೊತ್ತಿಗೆ ತಾಂಜಾನಿಯಾಕ್ಕೆ ವ್ಲಾಗರ್ ಲೋಹಿತ್ ಸಹ ಹೋಗಿದ್ದಾರೆ. ಕೂಡಲೇ ತಾಂಜಾನಿಯಾಗೆ ಹೋಗಿ ಅಲ್ಲಿ ಹಾಡ್ಜಬಿ ಬುಡಕಟ್ಟು ಜನರೊಟ್ಟಿಗೆ ವಿಡಿಯೋ ಮಾಡಿ ಅದನ್ನು ಡಾ. ಬ್ರೋ ಅಪ್‌ಲೋಡ್ ಮಾಡೋ ಮೊದಲೇ ತನ್ನ ವೀಡಿಯೋಗಳನ್ನು ಅಪ್‌ಲೊಡ್ ಮಾಡಿಬಿಟ್ಟಿದ್ದಾರೆ. ಇದು ಡಾ ಬ್ರೋಗೆ ತೀವ್ರ ಬೇಸರ ತರಿಸಿದೆ. ಅವರು ತಾನು ಸಹಾಯ ಮಾಡಿದವರೇ ತನಗೆ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಸ್ವತಃ ನನಗೆ ಇಂಥದ್ದೊಂದು ಅನುಭವ ಆಗಿದೆ ಎಂದು ಬೇಸರದಿಂದ ಹೇಳಿದ್ದರು.

Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!

ಡಾ ಬ್ರೋ ಪೋಸ್ಟ್ ನೋಡಿ ಹಲವರು ಅವರ ಬೆಂಬಲಕ್ಕೆ ಬಂದರು. ಲೋಹಿತ್ ವಿರುದ್ಧ ಟೀಕೆಗಳನ್ನು ಮಾಡಿದರು. ಲೋಹಿತ್ ಡಾ ಬ್ರೋ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದೀಗ ಲೋಹಿತ್ ಡಾ ಬ್ರೋ ಕ್ಷಮೆ ಕೇಳಿದ್ದಾರೆ.

ಗೊತ್ತಾಗದೇ ಅಪ್‌ಲೋಡ್ ಮಾಡಿದೆ ಎಂಬ ಲೋಹಿತ್
ಡಾ ಬ್ರೊ ಕ್ಷಮೆ ಕೇಳಿರುವ ಲೋಹಿತ್, 'ನಿಮಗೆ ತೊಂದರೆ ಕೊಡುವ ಉದ್ದೇಶ ನನಗಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಅಂತ ನಾನು ನಿಮ್ಮನ್ನು ಕೇಳಿ ಆಗಲೇ ಒಂದು ವಾರವಾಗಿತ್ತು. ಆದರೆ ನೀವು ಅದರ ಬಗ್ಗೆ ವೀಡಿಯೊ ಅಪ್‌ಲೋಡ್ ಮಾಡಿಲ್ಲ. ಹೀಗಾಗಿ ನೀವು ಅಲ್ಲಿಗೆ ಹೋಗಿಲ್ಲ ಎಂದು ನಾನು ಭಾವಿಸಿದೆ, ಹಾಗಾಗಿ ನಾನು ಹೋಗಿ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದ್ದೇನೆ. ಆ ಬುಡಕಟ್ಟಿನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೆ. ಅಂತಹ ಅದ್ಭುತ ಸ್ಥಳವನ್ನು ಜನರಿಗೆ ತೋರಿಸುವುದು ನನಗೆ ಇಷ್ಟ. ಹಾಗಾಗಿ ನಾನು ತಾಂಜಾನಿಯಾಗೆ ಹೋಗಿ ವಿಡಿಯೋ ಶೂಟ್ (Vedio Shoot) ಮಾಡಿ ಅಪ್‌ಲೋಡ್ ಮಾಡಿದೆ.

ನೀವು ಆ ದೇಶದಲ್ಲಿದ್ದರೆ ನಾನು ಆ ದೇಶಕ್ಕೆ ಬರಬಾರದು ಎಂದು ಗೊತ್ತಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಎಂದಷ್ಟೇ ನಾನು ಕೇಳಿದ್ದೆ. ನಿಮ್ಮಲ್ಲಿ ಸಹಾಯವನ್ನಾಗಲೀ, ವಿವರಗಳನ್ನಾಗಲೀ ಕೇಳಿರಲಿಲ್ಲ. ಇಷ್ಟಾಗಿಯೂ ನಾನು ಅಪ್‌ಲೋಡ್(Upload) ಮಾಡಿರುವ ಆ ವಿಡಿಯೋ ನಿಮಗೆ ತೊಂದರೆ ಕೊಡುತ್ತಿದ್ದರೆ ನನ್ನನು ಕ್ಷಮಿಸಿ, ಹಿಂದೆ ನಾನು ಹೇಳಿದಂತೆ ನೀವೇ ನನ್ನ ಸ್ಫೂರ್ತಿ(Inspiration), ನಿಮ್ಮ ವ್ಲಾಗ್ ನನಗೆ ಯಾವತ್ತೂ ಇಷ್ಟ. ನನ್ನ ಕನಸಿನಲ್ಲಿಯೂ ನಿಮಗೆ ತೊಂದರೆ ಕೊಡಲು ನಾನು ಟ್ರೈ(Try) ಮಾಡಲ್ಲ, ನೀವು ಪ್ರತಿಯೊಬ್ಬ ಕನ್ನಡಿಗನಿಗೆ ಮಾದರಿ, ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಕ್ಷಮಿಸಿ ಬ್ರೋ' ಎಂದು ವ್ಲಾಗರ್ ಲೋಹಿತ್ ಬರೆದಿದ್ದಾರೆ.

ಅಲ್ಲಿಗೆ ಡಾ ಬ್ರೋ ತಾಂಜಾನಿಯ ಪ್ರಕರಣ ಮುಕ್ತಾಯವಾಗಿದೆ.

ಭಟ್ ಎನ್ ಭಟ್: ಗಡಿನಾಡಿನ ಈ ಅವಳಿ ಸೋದರರ ಅಡುಗೆ ಚಾನೆಲ್ಲೀಗ ಕನ್ನಡಿಗರ ಮನೆ ಮಾತು

click me!