
ಕನ್ನಡ ನಾಡಿನ ಜನತೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳು, ಭಾಷೆಗಳು, ಅದ್ಭುತಗಳು, ಜನಜೀವನ ಹಾಗೂ ವಿವಿಧ ಮಾದರಿಯ ಜನಾಂಗಗಳನ್ನು ತೋರಿಸಿದ ಯೂಟ್ಯೂಬರ್ ಎಂದರೆ ಅದರು ಡಾ. ಬ್ರೋ ಅಲಿಯಾಸಗ ಗಗನ್ ಶ್ರೀನಿವಾಸ್. ಕಳೆದ 2 ವರ್ಷಗಳ ಹಿಂದೆ ಉಗಾಂಡಾ ದೇಶಕ್ಕೆ ಹೋಗಿ ಅಲ್ಲಿನ ಮೃಗಾಲಯ ಒಂದರಲ್ಲಿ ಪ್ರಾಣಿಗಳ ಬಗ್ಗೆ ಮಾತನಾಡುತ್ತಾ ವ್ಲಾಬ್ ಮಾಡುತ್ತಿರುತ್ತಾರೆ. ಆಗ ಸಿಂಹವೊಂದು ಡಾ ಬ್ರೋ ಮೇಲೆ ಮೂತ್ರ ವಿಸರ್ಜನೆ ಮಾಡಿ ಹೋಗುತ್ತದೆ. ಆಗ ನೀನು ಸಿಂಹ ಅಲ್ಲ ನಾಯಿ ಎಂದು ಬೈದು ಬಂದಿರುತ್ತಾರೆ. ಇದೀಗ 2 ವರ್ಷದ ಬಳಿಕ ಅದೇ ಸಿಂಹದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ದೈತ್ಯ ಸಿಂಹಗಳನ್ನು ಕೋಲಿನಿಂದ ಹೆದರಿಸಿ ನಾಯಿಯಂತೆ ವಾಕಿಂಗ್ ಮಾಡಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಡಾ ಬ್ರೋ, ಒಂದು ಟೈಮಲ್ಲಿ ಸಿಂಹ ನನಗೆ ಅವಮಾನ ಮಾಡಿತ್ತು. ಇದೀಗ ಅದೇ ಸಿಂಹವನ್ನು ನಾಯಿ ತರಹ ವಾಕಿಂಗ್ ಮಾಡಿಸಿದ್ದಾರೆ. ಇನ್ನು ಗಂಡು-ಹೆಣ್ಣು ಸಿಂಹಗಳನ್ನು ಕೋಲು ಹಿಡಿದುಕೊಂಡು ವಾಕಿಂಗ್ ಮಾಡಿಸುತ್ತಾ ಅವುಗಳ ಮೇಲೆ ಸೇಡನ್ನು ತೀರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಆನೆಯನ್ನು ಪಳಗಿಸುವುದಕ್ಕೆ ಮಾವುತ ಬರಬೇಕು, ಆದರೆ ಈ ತರಹದ ಸಿಂಹಗಳನ್ನು ಪಳಗಿಸುವುದಕ್ಕೆ ನಾನೇ ಬರಬೇಕು ಎಂದು ಡಾ.ಬ್ರೋ ಹೇಳುತ್ತಾರೆ.
ಸಿಂಹಗಳು ಒಂದೊಂದು ಹೆಜ್ಜೆ ಹಾಕುತ್ತಿದ್ದರೂ ಅತ್ಯಂತ ತೂಕದಿಂದ ಹೆಜ್ಜೆಗಳನ್ನು ಹಾಕುತ್ತವೆ. ಸುಖಾ-ಸುಮ್ಮನೆ ಸಿಂಹಗಳು ಓಡಾಡುವುದಿಲ್ಲ. ಸಿಂಹಗಳು ಎಂದಿಗೂ ಭೂಮಿಗೆ ಮೇಲ್ಮೇಲೆ ಪಾದ ಊರುವುದಿಲ್ಲ. ಗಾಂಭೀರ್ಯ ಹಾಗೂ ಭಾರವಾದ ಹೆಜ್ಜೆಗಳನ್ನು ಇಡುವುದರಿಂದ ಸಿಂಹಗಳ ಹೆಜ್ಜೆ ಭೂಮಿ ಮೇಲೆ ಗುರುತಾಗಿ ಉಳಿಯುತ್ತವೆ. ಸಿಂಹಗಳನ್ನು ವಾಕಿಂಗ್ ಮಾಡಿಸಿಕೊಂಡು ಬಂದ ಡಾ.ಬ್ರೋ ಈ ಸಿಂಹಗಳನ್ನು ನೋಡಿದರೆ ದ್ವೇಷ ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಹೀಗಾಗಿ, ಇನ್ಮೇಲೆ ನಾನು ಮತ್ತು ಈ ಸಿಂಹಗಳು ಫ್ರೆಂಡ್ಸ್ ಎಂದು ಹೇಳುತ್ತಾರೆ.
ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಎಲ್ಲರಿಗೂ ಇಷ್ಟವಾಗುತ್ತದೆ. ಅಂದಹಾಗೆ ಗಗನ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರೋ ಹುಡುಗ. 2ನೇ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿರುವ ಗಗನ್ ಈಗಲೂ ದೇವಸ್ಥಾನದ ಪೂಜೆ ಮಾಡುತ್ತಾರೆ. ಓದಿಗಿಂತ ಹೆಚ್ಚಾಗಿ ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದ್ದಾರೆ. ಇದೀಗ ವಿದೇಶಗಳನ್ನು ಸುತ್ತಾಡುತ್ತಾ, ವ್ಲಾಗ್ ಮಾಡುವ ಮೂಲಕ ಕನ್ನಡಿಗರಿಗೆ ಅಂಗೈನಲ್ಲಿಯೇ ಜಗತ್ತಿನ ಪರಿಚಯ ಮಾಡುತ್ತಿದ್ದಾರೆ.
ಇನ್ನು ಇದೇ ಮೃಗಾಲಯದಲ್ಲಿ ಸಿಂಹದ ಮರಿಗಳ ಜೊತೆಗೆ ಆಟವಾಡಿದ್ದಾರೆ. ಸಿಂಹದ ಮರಿ 5 ತಿಂಗಳವರೆಗೂ ಮರಿಗಳಾಗಿ ಸಣ್ಣದಾಗಿರುತ್ತವೆ. ನಂತರದ 5 ತಿಂಗಳಲ್ಲಿ ಪ್ರಾಣಿಗಳನ್ನು ಬೇಟೆ ಆಡಿ ತಿನ್ನುವಷ್ಟು ಬೆಳೆಯುತ್ತವೆ ಎಂಬುದನ್ನು ತಿಳಿಸಿದ್ದಾರೆ. 9 ತಿಂಗಳ ಸಿಂಹವೊಂದರ ಜೊತೆಗೆ ಆಟವಾಡುವಾಗ ಗಗನ್ ಅವರ ಪ್ಯಾಂಟನ್ನು ಹಿಡಿದು ಎಳೆಯುತ್ತದೆ. ಆಗ ಸಿಂಹದಿಂದ ಪ್ಯಾಂಟ್ ಬಿಡಿಸಿಕೊಂಡು ಕೋಪಗೊಂಡಂತೆ ಅದರ ಮೇಲೆ ರೇಗುತ್ತಾರೆ. ಆದರೆ, ಅವರ ಪಕ್ಕದಲ್ಲಿ ಸಿಂಹವನ್ನು ಪಳಗಿಸಿದ ಟ್ರೇನರ್‌ಗಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.