Bigg Bossನಲ್ಲಿ ರಕ್ಷಿತಾ ಶೆಟ್ಟಿಗೆ ಕನ್ನಡ ಪರೀಕ್ಷೆ: ​ಸಿಂಹದ ಬಗ್ಗೆ ಮಾತನಾಡಿ ಸುದೀಪ್​ರನ್ನೂ ಸುಸ್ತು ಮಾಡಿದ ಪುಟ್ಟಿ!

Published : Nov 30, 2025, 05:25 PM IST
Bigg Boss Rakshita Shetty

ಸಾರಾಂಶ

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಕನ್ನಡ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ, ಮನೆಯಲ್ಲಿ ಅವರಿಗೆ ಸಿಂಹದ ಬಗ್ಗೆ ಓದುವ ಟಾಸ್ಕ್ ನೀಡಲಾಯಿತು, ಅವರ ಓದುವ ಶೈಲಿ ಮತ್ತು ತಡಬಡಾಯಿಸುವಿಕೆ ಎಲ್ಲರಿಗೂ, ವಿಶೇಷವಾಗಿ ಸುದೀಪ್ ಅವರಿಗೂ ನಗುವಿನ ಹೊನಲು ಹರಿಸಿತು.

ಬಿಗ್​ಬಾಸ್​ (Bigg Boss 12) ಕರಾವಳಿ ಪೋರಿ ರಕ್ಷಿತಾ ಶೆಟ್ಟಿಯ ಕನ್ನಡ ಬಗ್ಗೆ ಇದಾಗಲೇ ಹಲವಾರು ಮಂದಿ ಹಲವಾರು ರೀತಿ ಮಾತನಾಡಿದ್ದು ಇದೆ. ಈಕೆಯ ಕನ್ನಡದ ಬಗ್ಗೆ ವಾದ-ಪ್ರತಿವಾದ-ವಿವಾದ ಎಲ್ಲವೂ ನಡೆಯುತ್ತಲೇ ಇದೆ. ಈಕೆ ಜಗಳವಾಡುವಾಗ ಸರಿಯಾಗಿ ಕನ್ನಡ ಮಾತನಾಡುತ್ತಾಳೆ, ಇವೆಲ್ಲಾ ಡೋಂಗಿ ಎಂದು ಬಿಗ್​ಬಾಸ್​ನ ಸ್ಪರ್ಧಿಗಳು ಹೇಳಿದ್ದೂ ಇದೆ. ಆದರೆ ಹಲವರು ರಕ್ಷಿತಾ ಶೆಟ್ಟಿ ನಾಟಕ ಮಾಡುತ್ತಿಲ್ಲ. ಆಕೆ ಇತ್ತೀಚೆಗೆ ಕನ್ನಡ ಕಲಿತಿರುವುದು ಎಂದೂ ಹೇಳಿದ್ದಾರೆ. ಬಿಗ್​ಬಾಸ್​ನಿಂದ ಹೊರಬಂದಿರುವ ಸ್ಪರ್ಧಿಗಳು ಕೂಡ ಕನ್ನಡದ ವಿಷಯದಲ್ಲಿ ಈ ಪೋರಿಯ ಪರವಾಗಿಯೇ ಇದ್ದಾರೆ.

ರಕ್ಷಿತಾ ಕನ್ನಡ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಹುಟ್ಟಿದ್ದು ಮುಂಬೈನಲ್ಲಿ. ಊರು ಮಂಗಳೂರು ಆದರೂ ಎಲ್ಲವೂ ಮುಂಬೈನಲ್ಲಿಯೇ ಆಗಿದ್ದರಿಂದ ಕನ್ನಡ ದೂರ. ಮಾತೃಭಾಷೆ ತುಳು ಆದವರಿಗೆ ಕನ್ನಡ ಸ್ಪಷ್ಟವಾಗಿ ಬರುವುದು ಅಪರೂಪ. ಅದರಲ್ಲಿಯೂ ಮುಂಬೈನಲ್ಲಿಯೇ ಹುಟ್ಟಿ ಬೆಳೆದಿರುವ ಕಾರಣ ಕಷ್ಟಪಟ್ಟು ರಕ್ಷಿತಾ ಶೆಟ್ಟಿ ಕನ್ನಡ ಕಲಿತು, ಅರ್ಧಂಬರ್ಧ ಕನ್ನಡದಲ್ಲಿಯೇ ಯುಟ್ಯೂಬ್​ ನಡೆಸುತ್ತಿದ್ದಾರೆ. ಇದರಿಂದಲೇ ಆಕೆ ಸಕತ್​ ಫೇಮಸ್​​ ಕೂಡ ಆಗಿರೋದು. ಹಿಂದಿ, ಇಂಗ್ಲಿಷ್​, ತುಳು ಜೊತೆ ಕನ್ನಡ ಮಿಕ್ಸ್​ ಮಾಡಿ ಮುದ್ದಾಗಿ ಮಾತನಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು, ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ ರಕ್ಷಿತಾ ಶೆಟ್ಟಿ.

ಸಿಂಹದ ಬಗ್ಗೆ ಪರೀಕ್ಷೆ

ಇದೀಗ ಬಿಗ್​ಬಾಸ್​​ ಮನೆಯಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಕನ್ನಡ ಪರೀಕ್ಷೆ ನಡೆದಿದೆ. ಇವರ ಕನ್ನಡ ಕೇಳಿ ಸುದೀಪ್​ ಸೇರಿದಂತೆ ಮನೆಯಲ್ಲಿ ಇದ್ದವರೆಲ್ಲಾ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಧ್ರುವಂತ್​ ಅವರು ಸಿಂಹದ ಬಗ್ಗೆ ಇರುವ ಒಂದು ಚಿಕ್ಕ ಮಾಹಿತಿಯನ್ನು ಹಿಡಿದು ನಿಂತಿದ್ದಾರೆ. ಅದನ್ನು ರಕ್ಷಿತಾ ಓದಬೇಕಿದೆ. ಇದು ಆಕೆಗೆ ಇರುವ ಟಾರ್ಗೆಟ್​. ಅದರಂತೆ ರಕ್ಷಿತಾ ಶೆಟ್ಟಿ, ಅದನ್ನು ಓದಲು ಪ್ರಯತ್ನ ಮಾಡಿದ್ದಾರೆ. ಮಧ್ಯೆ ಮಧ್ಯೆ ಅಕ್ಷರ ಗೊತ್ತಾಗದೇ ಇರುವ ಕಾರಣ, ಅದೊಂದು ರೀತಿಯಲ್ಲಿ ತಮಾಷೆ ಎನಿಸಿದೆ.

ರಕ್ಷಿತಾ ಹೇಳಿದ್ದೇನು?

ಸಿಂಹದ ಬಗ್ಗೆ ಮಾತನಾಡುತ್ತಾ ಕೋಪವನ್ನು ವ್ಯಕ್ತಪಡಿಸಬೇಕಿತ್ತು. ಸಿಂಹವನ್ನು ಫೋಟೋದಲ್ಲಿ ನೋಡಿರ್ತಿಯಾ, ಸಿನಿಮಾದಲ್ಲಿ ನೋಡಿರ್ತಿಯಾ, ಟಿವಿಯಲ್ಲಿ ನೋಡಿರ್ತಿಯಾ, ಅಷ್ಟೇ ಯಾಕೆ ಜೂನಲ್ಲಿ ನೋಡಿರ್ತೀಯಾ, ರಾಜಗಾಂಭೀರ್ಯದಿಂದ ಇರುವ ಶಬ್ದವನ್ನು ಸರಿ ಮಾಡಿಕೊಂಡು ಕಷ್ಟಪಟ್ಟು ಹೇಳಿದ್ದಾರೆ. ಆದರೆ ಕಾಡಿನಲ್ಲಿ ಓಡಾಡುವುದನ್ನು ನೋಡಿರ್ತಿಯಾ ಎಂದು ಇರುವ ವಾಕ್ಯವನ್ನು ಸುದೀಪ್​ ಅವರೇ ಹೇಳಿಕೊಟ್ಟರು. ಆದರೂ ರಕ್ಷಿತಾಗೆ ಅದು ಹೇಳುವುದು ಕಷ್ಟವಾಯ್ತು. ಓಡಾಡುಡುವುಡುಡು ಎಂದು ಹೇಳಿದರು. ಧ್ರುವಂತ್​ ಅವರು ಸರ್​ ಕೋಪ ಸಾಲುತ್ತಿಲ್ಲ ಎಂದು ತಮಾಷೆ ಮಾಡಿದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!