
ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚಿರುವ ಲೇಡಿ ಸೂಪರ್ ಮಾಡಲ್ ಚಿತ್ರಾಲ್ ರಂಗಸ್ವಾಮಿ ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ವೋಟಿಂಗ್ ರೂಲ್ಸ್ ನೀಡಿ ಚಿತ್ರಾಲ್‌ರನ್ನು ರಿಜೆಕ್ಟ್ ಮಾಡಲಾಗಿತ್ತು. ಸೀಸನ್ 10ರಲ್ಲಿ ನಡೆದ ಘಟನೆ ಬಗ್ಗೆ ಈಗಲೂ ಚಿತ್ರಾಲ್ ಧ್ವನಿ ಎತ್ತುತ್ತಿದ್ದಾರೆ. ಅಂದು ನಡೆದ ಅವಮಾನದಿಂದ ಹೊರ ಬರಲು ಕಷ್ಟವಾಗಿದೆ ಎನ್ನುತ್ತಿದ್ದಾರೆ.
'ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಹೇಳುವುದು ಏನೆಂದರೆ..ನಿಮ್ಮ ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಅಕ್ಕ ಅಥವಾ ತಂಗಿಯನ್ನು ಕರೆದು ಅವಮಾನ ಮಾಡಿದ್ದರೆ ಏನ್ ಮಾಡ್ತಿರಾ? ನಾಲ್ಕು ವಾರದ ಲಗೇಜ್‌ನ ಒಂದು ತಿಂಗಳ ನಂತರ ತೆಗೆದಿದ್ದೀನಿ. ನಮ್ಮ ಮನೆಯ ಬ್ರೆಡ್ ಆಂಡ್ ಬಟರ್ ನಾನೇ ಆಗಿರುವ ಕಾರಣ ಮೂರು ತಿಂಗಳು ಬಾಡಿಯನ್ನು ಹೊಂದಿಸಿ ಕೊಟ್ಟು ಬಂದಿದ್ದೆ. ಈ ಶೋನಲ್ಲಿ ವ್ಯಕ್ತಿತ್ವವನ್ನು ಹೈಲೈಟ್ ಮಾಡುತ್ತಿದ್ದಾರೆ....ವ್ಯಕ್ತಿತ್ವ ಇರೋ ವ್ಯಕ್ತಿಯನ್ನು ಕರೆಯನ್ನು ಕರೆಸಿ ಅವಮಾನ ಮಾಡುವುದು ಎಷ್ಟು ಸರಿ? 15 ಜನ ಜ್ಯೂನಿಯರ್ ಆರ್ಟಿಸ್ಟ್‌ಗಳು ವೋಟ್ ಹಾಕಿದ್ದು...ಆ ವೋಟ್‌ಗಳನ್ನು ಇಡೀ ಕರ್ನಾಟಕದ ವೋಟ್ ಎಂದು ತೋರಿಸಿದ್ದಾರೆ. ಸೀಸನ್ 10ರಲ್ಲಿ ಹಾಗೆ ಮಾಡಿದ್ದರು...ಸೀಸನ್ 11ರಲ್ಲಿ ಯಾಕೆ ಮಾಡಲಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚಿತ್ರಾಲ್ ಮಾತನಾಡಿದ್ದಾರೆ.
'ಕಾಮೆಂಟ್ಸ್‌ನಲ್ಲಿ ನೋಡುತ್ತಿದ್ದೀನಿ...ನೀನು ಏನು ಸಾಧನೆ ಮಾಡಿದ್ಯಾ ಅಂತ ಕರೆಯಬೇಕು ಅಂದಿದ್ದಾರೆ, ದಿನ ಬೆಳಗ್ಗೆ ಎದ್ದು ಸೂರ್ಯನ ನೋಡುತ್ತೀನಿ ಅಲ್ವಾ ಅದೇ ನನಗೆ ಸಾಧನೆ. ಯಾರಿಗೂ ಮೋಸ ಮಾಡದೆ ಬದುಕುತ್ತಿರುವುದೇ ಸಾಧನೆ ನನಗೆ. ಹಾಗೆಂತ ಸಾಧನೆ ಮಾಡಿರುವವರನ್ನೇ ಕರೆಸಿದ್ದಾರಾ? ಪರಿಚಯವೇ ಇಲ್ಲದ ಜನರನ್ನು ಆಯ್ಕೆ ಮಾಡಿದ್ದಾರೆ. ಯಾಕೆ ನನಗೆ ಹೀಗೆ ಮಾಡಿದ್ದೀರಾ? ಈ ಬಗ್ಗೆ ಪ್ರಶ್ನೆ ಮಾಡಲು ನಿರ್ದೇಶಕರಿಗೆ ಕರೆ ಮಾಡಿದ್ದಾಗ ಸ್ವೀಕರಿಸಲಿಲ್ಲ. ರಿಜೆಕ್ಟ್ ಆದ್ಮೇಲೆ ಕ್ಯಾರವಾನ್‌ಗೆ ಬಂದ್ರೂ ಕ್ಯಾರೆ ಅನ್ನೋರು ಇರಲಿಲ್ಲ. ಬಿಟ್ಟು ಕೊಡುತ್ತಿವಿ ಅಂದಿದ್ರು ಆದರೆ ಬೇಸರ ಆಗಿತ್ತು ಅಂತ ನಾವೇ ಹೊರಟ್ವಿ...ಅದು 15 ಸಾವಿರ ಖರ್ಚು' ಎಂದು ಚಿತ್ರಾಲ್ ಹೇಳಿದ್ದಾರೆ.
ಆಂಟಿ ಅನ್ನೋ ಪದಕ್ಕೆ ಕೆಟ್ಟ ಅರ್ಥ ಕೊಟ್ಟಿದ್ದಾರೆ..ನಾನೇನು ಬಟ್ಟೆ ಬಿಚ್ಚಿ ಓಡಾಡುತ್ತಿದ್ದೀನಾ?: ಅನಸೂಯ ಭಾರದ್ವಾಜ್
'ಎರಡು ದಿನದಲ್ಲಿ ಎಲ್ಲಾ ತಯಾರಿ ಮಾಡಿಕೊಂಡಿದ್ದೀನಿ ಆ ಸಮಯದಲ್ಲಿ ನನಗೆ ಆದ ಒತ್ತಡ ಅಷ್ಟೇ ಅಲ್ಲ ತಿಂಗಳು ಕಳೆದರೂ ಆಗುತ್ತಿರುವ ಅವಮಾನ ಅಷ್ಟಿಷ್ಟಲ್ಲ. ನನಗೆ ಜನರಿಂದ ನೆಗೆಟಿವಿಟಿ ಸಿಕ್ಕಿರುವುದೇ ಈ ತಂಡದಿಂದ. ಕಾರಣ ಇಲ್ಲದೆ ನನ್ನನ್ನು ರಿಜೆಕ್ಟ್ ಮಾಡುತ್ತಾರೆ ಎಂದು ಬಿಗ್ ಬಾಸ್ ವಿಟಿ ವಿಡಿಯೋದಲ್ಲಿ ಹೇಳಿದ್ದೀನಿ ಅದೇ ವೇದಿಕೆಯಲ್ಲಿ ನನ್ನನ್ನು ರಿಜೆಕ್ಟ್ ಮಾಡುವುದಲ್ಲದೆ ಅವಮಾನ ಮಾಡಿದ್ದಾರೆ. ನಾನು ಏನಾದರೂ ಸೆನ್ಸಿಟಿವ್ ಹುಡುಗಿ ಆಗಿದ್ದು ಫ್ಯಾನ್‌ಗೆ ನೇಣಾಕೊಂಡಿದ್ರೆ ನನ್ನ ತಾಯಿಯನ್ನು ಯಾರು ನೋಡಿಕೊಳ್ಳುತ್ತಿದ್ದರು? ನನ್ನ ಸಾವಿಗೆ ಯಾರು ಹೊಣೆ ಆಗುತ್ತಿದ್ದರು?' ಎಂದಿದ್ದಾರೆ ಚಿತ್ರಾಲ್.
ಬೆಂಗಳೂರಿನ ಐಷಾರಾಮಿ ಪಬ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ರುತಿ ಹರಿಹರನ್; ಫೋಟೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.