ಗೌತಮ್ ಮತ್ತು ಭೂಮಿಕಾ ಅವರನ್ನು ಹೇಗಾದರೂ ದೂರ ಮಾಡಬೇಕು ಎಂದುಕೊಂಡಿರೋ ಶಕುಂತಲಾ ಇದೀಗ ಇಬ್ಬರ ಜೀವಕ್ಕೆ ಅಪಾಯ ತಂದಿಟ್ಟಿದ್ದಾಳೆ. ಆಗಿರೋದೇನು?
ಮಗ ಗೌತಮ್ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಈಗ ಇಬ್ಬರನ್ನೂ ಹನಿಮೂನ್ಗೆ ಕಳಿಸುವ ಪ್ಲ್ಯಾನ್ ಮಾಡಿದ್ದಾಳೆ. ಹೀಗೆಂದ ಮಾತ್ರಕ್ಕೆ ಆಕೆಯೇನೂ ಹನಿಮೂನ್ ಎಂಜಾಯ್ ಮಾಡಲಿ ಎಂದು ಕಳಿಸುತ್ತಿಲ್ಲ ಎನ್ನುವುದೂ ದಿಟವೇ. ಹಾಗಿದ್ದರೆ ಇದೇನಿದು ಅಮೃತಧಾರೆ ಟ್ವಿಸ್ಟ್? ನಿಜಕ್ಕೂ ಶಕುಂತಲಾ ದೇವಿ ಬದಲಾಗಿ ಬಿಟ್ಟಳಾ ಎನ್ನುವ ಪ್ರಶ್ನೆ ಮೂಡುತ್ತದೆ. ಇಡೀ ಸೀರಿಯಲ್ ನಿಂತಿರುವುದು ಶಕುಂತಲಾ ದೇವಿಯ ಕುತಂತ್ರದ ಮೇಲೆ. ಹಾಗಿದ್ದ ಮೇಲೆ ಈಕೆ ಇಷ್ಟು ಬೇಗ ಬದಲಾಗಲು ಸಾಧ್ಯವೇ ಇಲ್ಲ ಬಿಡಿ. ಹಾಗಿದ್ದರೆ ಇಬ್ಬರನ್ನೂ ಹನಿಮೂನ್ಗೆ ಕಳುಹಿಸುವ ಹಿಂದಿರುವುದು ಕೊಲೆಯ ಸಂಚು!
ಹೌದು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ತಿಳಿಸದಂತೆ ಭೂಮಿಕಾಗೂ ಮನೆಯವರು ಹೇಳಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್ ಮಾಡಿದ್ದಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್.
ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?
ಹಾಗಾದರೆ ನಿಜಕ್ಕೂ ಅವಳ ಪ್ಲ್ಯಾನ್ ಸಕ್ಸಸ್ ಆಗುತ್ತಾ? ಅಥವಾ ಪ್ರತಿ ಬಾರಿಯಂತೆ ಹೀಗೆಲ್ಲಾ ಪ್ಲ್ಯಾನ್ ಮಾಡಿದಾಗ ದಂಪತಿ ಹತ್ತಿರ ಆಗುವಂತೆ ಈ ಬಾರಿಯೂ ಆಗುತ್ತಾ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ಗೌತಮ್ ಮೊದಲು ಪ್ರೀತಿ ಬಗ್ಗೆ ಹೇಳಲಿ ಎಂದು ಭೂಮಿಕಾ, ಭೂಮಿಕಾ ಮೊದಲು ಹೇಳಲಿ ಎಂದು ಗೌತಮ್... ಒಟ್ಟಿನಲ್ಲಿ ಇಬ್ಬರೂ ಐ ಲವ್ ಯೂ ಅನ್ನೋದಕ್ಕೆ ಪರದಾಡುತ್ತಿದ್ದಾರೆ. , ಗೌತಮ್ ಮತ್ತು ಭೂಮಿಕಾ ನಡುವೆ ಲವ್ ಶುರುವಾಗಿದೆ. ಆದರೆ ಇಬ್ಬರೂ ಒಬ್ಬರಿಗೊಬ್ಬರು ಈ ವಿಷಯವನ್ನು ಹೇಳಿಕೊಂಡಿಲ್ಲ. ಆನಂದ್ ಮತ್ತು ಪತ್ನಿ ಇವರಿಬ್ಬರನ್ನು ಹೇಗಾದರೂ ಒಂದು ಮಾಡಲು ನೋಡುತ್ತಿದ್ದಾರೆ. ಭೂಮಿಕಾಳಿಗೆ ಆನಂದ್ ಪತ್ನಿ ಬಂದು ಎಲ್ಲಿಗೆ ಬಂತು ಲವ್‌ಸ್ಟೋರಿ ಎಂದಿದ್ದಾಳೆ. ಅದಕ್ಕೆ ಭೂಮಿಕಾ, ಗೌತಮ್ ನನ್ನನ್ನು ತುಂಬಾ ಪ್ರೀತಿಸ್ತಾರೆ. ಅವರೇ ಮೊದಲು ಹೇಳಲಿ ಎಂದುಕೊಂಡು ಸುಮ್ಮನಿದ್ದೇನೆ. ನಾನು ಹೇಳಲು ಹೋಗುವುದಿಲ್ಲ ಎಂದಿದ್ದಾಳೆ. ಹೀಗೆ ಮೊದಲೇ ಹೆಣ್ಣುಮಕ್ಕಳ ಲವ್ ಫೀಲಿಂಗ್ಸ್ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರೆ. ಅದಕ್ಕೇ ಅವರೇ ಮೊದಲು ಹೇಳಲಿ. ಅವರಿಗೆ ನನಗಿಂತಲೂ ಹೆಚ್ಚಾಗಿ ನನ್ನ ಮೇಲೆ ಲವ್ ಇದೆ ಅದಕ್ಕಾಗಿಯೇ ಅವರೇ ಮೊದ್ಲು ಹೇಳಿ ಎನ್ನುತ್ತಿದ್ದಾಳೆ.
ಹೀಗೆ ಬಿಟ್ಟರೆ ಇವರಿಬ್ಬರೂ ಲವ್ ಬಗ್ಗೆ ಹೇಳುವುದೇ ಇಲ್ಲ ಎಂದು ಆನಂದ್ ಮತ್ತು ಪತ್ನಿ ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ಅದೇ ಇನ್ನೊಂದೆಡೆ ಬಂಗಾಳಿಯ ಕ್ಲೈಂಟ್ಸ್ ಜೊತೆ ಗೌತಮ್ ಮೀಟಿಂಗ್ ಫಿಕ್ಸ್ ಆಗಿದೆ. ಅವರನ್ನು ಸ್ವಾಗತಿಸಲು ಬಂಗಾಳಿಯಲ್ಲಿ ಮಾತನಾಡುವಂತೆ ಆನಂದ್ ಹೇಳಿದ್ದಾನೆ. ಒಂದಿಷ್ಟು ಬಂಗಾಳಿಯಲ್ಲಿ ಗೌತಮ್ ಮಾತನಾಡಿದ್ದಾನೆ. ಕೊನೆಗೆ ಅಲ್ಲಿ ಭೂಮಿಕಾ ಬಂದಿದ್ದಾಳೆ. ನಾವು ನಿಮ್ಮವರು ಎನ್ನಲು ಬೆಂಗಾಳಿಯಲ್ಲಿ ಹೇಗೆ ಹೇಳ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಗೌತಮ್ ಬಂಗಾಳಿಯಲ್ಲಿ ಮಾತನಾಡಿದ್ದಾನೆ. ನಿಜವಾಗಿ ಹೇಳಬೇಕು ಎಂದರೆ ಅದು ಬಂಗಾಳಿಯಲ್ಲಿ ಐ ಲವ್ ಯು ಎನ್ನುವುದು. ಇದು ಗೌತಮ್ಗೂ ತಿಳಿದಿರಲಿಲ್ಲ, ಭೂಮಿಕಾಗೂ ತಿಳಿದಿರಲಿಲ್ಲ. ಕೊನೆಗೆ ಆನಂದ್ನೇ ನೀನು ಹೇಳಿದ್ದು ಐ ಲವ್ ಯು ಅಂತ ಹೇಳಿದ್ದಾನೆ. ಇದನ್ನು ಮರೆಯಿಂದ ಕೇಳಿಸಿಕೊಂಡು ಭೂಮಿಕಾ ನಾಚಿ ನೀರಾಗಿದ್ದಾಳೆ. ಗೌತಮ್ ತಲೆ ತಲೆ ಚಚ್ಚಿಕೊಂಡಿದ್ದಾನೆ. ಇದೀಗ ಮತ್ತಷ್ಟು ಹತ್ತಿರವಾಗಿರೋ ಜೋಡಿ, ಹನಿಮೂನ್ನಲ್ಲಿ ಒಂದಾಗ್ತಾರಾ ಎನ್ನುವುದು ಮುಂದಿರುವ ಪ್ರಶ್ನೆ.
ರಾತ್ರೋರಾತ್ರಿ ಕೋಟ್ಯಧಿಪತಿಯಾದ ಖುಷಿಗೆ ಪೂರ್ಣಿ ಡ್ಯಾನ್ಸ್ ಮಾಡಿದ್ರೆ ದೀಪಿಕಾ ಕುಣಿತೀರೋದ್ಯಾಕೆ ಕೇಳಿದ ಫ್ಯಾನ್ಸ್