ಹೆಣ್ಮಕ್ಳೇ ಹುಷಾರ್​! ದುಡುಕು ಬುದ್ಧಿಯಿಂದ ಮನೆ ಸರ್ವನಾಶವಾದೀತು: ಈಗ್ಲಾದ್ರೂ ಕಲೀರಿ ಎಂದ ನೆಟ್ಟಿಗರು

By Suvarna NewsFirst Published Apr 20, 2024, 4:39 PM IST
Highlights

ಅನ್ಯಾಯ ಆಗುತ್ತಿದ್ದರೆ ನ್ಯಾಯ ಕೊಡಿಸುವುದು ಒಳ್ಳೆಯದೇ. ಹಾಗೆಂದು ದುಡುಕು ಬುದ್ಧಿ ತೋರಿದರೆ, ಮನೆ ಸರ್ವನಾಶವಾದೀತು ಎನ್ನುವುದಕ್ಕೆ ಸ್ನೇಹಾಳೇ ಸಾಕ್ಷಿ. 
 

ಸ್ನೇಹಾಗೆ ದುಡುಕು ಬುದ್ಧಿ. ಅವಳೇ ಒಪ್ಪಿಕೊಂಡಿರುವಂತೆ ಅವಳಿಗೆ ಇದು ಚಿಕ್ಕಂದಿನಿಂದಲೂ ಬಂದಿರುವ ಕೆಟ್ಟ ಬುದ್ಧಿಯೇ. ಅನ್ಯಾಯವನ್ನು ಕಂಡಾಕ್ಷಣ ಹಿಂದೆ ಮುಂದೆ ಯೋಚಿಸದೇ ದುಡುಕು ಬುದ್ಧಿಯಿಂದ ನ್ಯಾಯ ಒದಗಿಸಲು ಹೋಗುವುದು ಅವಳ ಚಾಳಿ. ಕೆಲವು ಸಂದರ್ಭದಲ್ಲಿ ಇದು ಸರಿ ಎನ್ನಿಸಿದ್ದು ಉಂಟು. ಕೆಟ್ಟದ್ದನ್ನು ಕಂಡಾಗ ರೋಷ ಉಕ್ಕಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸಿದ್ದೂ ಇದೆ. ಆದರೆ ದುಡುಕು ಬುದ್ಧಿ ಎಲ್ಲಾ ಸಂದರ್ಭದಲ್ಲಿಯೂ ಸರಿ ಹೊಂದುವುದಿಲ್ಲ ಎನ್ನುವುದು ಈ ಸ್ನೇಹಾಳಿಗೂ ತಿಳಿದಿದೆ. ತನ್ನ ತಪ್ಪಿನ ಅರಿವಾಗಿರೋ ಸ್ನೇಹಾ ಅತ್ತೆ ಬಂಗಾರಮ್ಮನ ಕಾಲು ಹಿಡಿದುಕೊಂಡಿದ್ದಾಳೆ. ಕ್ಷಮೆ ಕೇಳಿದ್ದಾಳೆ. ಚಿಕ್ಕ ವಯಸ್ಸಿನಿಂದಲೇ ನನಗೆ ಈ ರೀತಿ ದುಡುಕು ಬುದ್ಧಿ ಇದೆ. ಅದು ತಪ್ಪು ಎನ್ನುವುದು ನನಗೆ ಗೊತ್ತಾಗಿದೆ ಎಂದು ಕೇಳಿಕೊಂಡಿದ್ದಾಳೆ. ಆದರೆ ಬಂಗಾರಮ್ಮ ಮತ್ತು ಕಂಠಿ ಆಕೆಯನ್ನು ಕ್ಷಮಿಸುತ್ತಾರೋ ಇಲ್ಲವೋ ಎನ್ನುವುದು ಈಗಿರುವ ಪ್ರಶ್ನೆ. 

 ಗಟ್ಟಿಗಿತ್ತಿ ಎಂದು ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿದ್ದಾಳೆ ಸ್ನೇಹಾ. ಅತ್ತೆ ಬಂಗಾರಮ್ಮನ ವಸೂಲಿ ವಿಷಯ ಈಕೆಗೆ ಇಷ್ಟವಿಲ್ಲವಾದರೂ, ಎಲ್ಲದ್ದಕ್ಕೂ ಅವಳೇ ತಪ್ಪು ಎಂದು ಏಕಾಏಕಿ ತೀರ್ಮಾನಕ್ಕೆ ಬಂದು ಅತ್ತೆಯನ್ನೇ ಜೈಲಿಗೆ ಕಳುಹಿಸಿದಳು. ಈ ಹಿಂದೆ ಕೂಡ ಅತಿಬುದ್ಧಿವಂತಿಕೆ ಉಪಯೋಗಿಸಿದ್ದರಿಂದ ಮನೆಯವರಿಗೆ ತೊಂದರೆ ಮಾಡಿದ್ದಳು. ಇದೀಗ ಬಂಗಾರಮ್ಮನ ಕೋಪ ಮಿತಿಮೀರಿದೆ. ಅದೇ ಇನ್ನೊಂದೆಡೆ ಕಂಠಿ ವಿಚ್ಛೇದನ ಪತ್ರ ಕೊಟ್ಟಿರುವುದಾಗಿ ಅವಳಿಗೆ ಹೇಳಲಾಗಿದೆ. ಇದರಿಂದ ಸಿಡಿದೆದ್ದ ಸ್ನೇಹಾ ತವರಿಗೆ ವಾಪಸಾಗುತ್ತೇನೆ ಎಂದು ಹೇಳುತ್ತಿದ್ದಾಳೆ.

ಐದು ವರ್ಷಗಳಲ್ಲಿ ಹಲವು ಗರ್ಭಪಾತ: ಆಮೀರ್​ ​ಖಾನ್​ ಮಾಜಿ ಪತ್ನಿ ಕಿರಣ್​ ರಾವ್​ ಓಪನ್​ ಮಾತು!

ಅಷ್ಟಕ್ಕೂ ಯಾರಿಗೋ ನ್ಯಾಯ ಕೊಡಿಸಲು ಹೋಗಿ ಹೀಗೆ ಎಡವಟ್ಟು ಆಗಿದೆ. ರಾಜಿಯ ಕುತಂತ್ರದಿಂದ ಮಹಿಳೆಯೊಬ್ಬಳು ತನ್ನ ಗಂಡನ ಸಾವಿಗೆ ಬಂಗಾರಮ್ಮನೇ ಕಾರಣ ಎಂದಿದ್ದಳು. ಅದನ್ನು ಕೇಳಿದ ಸ್ನೇಹಾ ಅತ್ತೆ ಬಂಗಾರಮ್ಮನ ವಿರುದ್ಧ ಕಿಡಿ ಕಾರಿ ಆಕೆಯನ್ನು ಜೈಲಿಗೆ ಕಳುಹಿಸಿದ್ದಳು. ಕೊನೆಗೆ ಪುಟ್ಟಕ್ಕನ ನೆರವಿನಿಂದ ಸತ್ಯ ಬಹಿರಂಗಗೊಂಡಿದೆ. ಆದರೆ ಇದಕ್ಕೆ ರಾಜಿ ಕಾರಣ ಎನ್ನುವ ಸತ್ಯ ಮಾತ್ರ ತಿಳಿದಿಲ್ಲ. ಆದರೆ ಬಂಗಾರಮ್ಮನ ತಪ್ಪಿಲ್ಲ ಎನ್ನುವ ಅರಿವು ಸ್ನೇಹಳಿಗೆ ಆಗುತ್ತಿದ್ದಂತೆಯೇ ಆಕೆ ಬಂಗಾರಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. 

ಅದೇ ಇನ್ನೊಂದೆಡೆ ಸಹನಾ ತವರು ಸೇರಿದ್ದಾಳೆ. ಆಗ ಸಹನಾ, ಈಗ ಸ್ನೇಹಾ. ಪುಟ್ಟಕನ್ನ ಇಬ್ಬರೂ ಮಕ್ಕಳ ಜೀವನ ಅಲ್ಲೋಲ ಕಲ್ಲೋಲ ಆಗ್ತಿದೆ. ಆದರೆ ಸಹನಾ ದೌರ್ಜನ್ಯದ ವಿರುದ್ಧ ದನಿ ಎತ್ತಿ ತವರು ಸೇರಿದ್ದರೆ, ಸ್ನೇಹಾ ಬೇರೆಯವರಿಗೆ ನ್ಯಾಯ ಒದಗಿಸಲು ಹೋಗಿ ಹಿಂದೆ ಮುಂದೆ ಯೋಚಿಸದೇ ಅತಿಬುದ್ಧಿ ಉಪಯೋಗಿಸಿ ತವರು ಸೇರುವವಳಿದ್ದಳು. ಸಹನಾ ಬಗ್ಗೆ ಜನರು ಭೇಷ್‌ ಭೇಷ್‌ ಎನ್ನುತ್ತಿದ್ದರೆ, ಸ್ನೇಹಾಳನ್ನು ಬೈಯುತ್ತಿದ್ದಾರೆ. ಈಕೆ ಓದಿದ್ದು ಅತಿಯಾಯ್ತು, ತಲೆ ಉಪಯೋಗ ಮಾಡದೇ ಏನೇನೋ ಮಾಡುತ್ತಿದ್ದಾಳೆ. ಇವಳಿಗೆ ತಕ್ಕ ಶಾಸ್ತಿಯಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೆಣ್ಣು ದೌರ್ಜನ್ಯದ ವಿರುದ್ಧ ತಲೆ ಎತ್ತಿದರೂ ಕಷ್ಟ, ಬೇರೆಯವರಿಗೆ ನ್ಯಾಯ ಒದಗಿಸಲು ಹಿಂದೆ ಮುಂದೆ ಯೋಚಿಸದೇ ಮನೆಯವರನ್ನು ಎದುರು ಹಾಕಿಕೊಂಡರೂ ಕಷ್ಟ. ಆದ್ದರಿಂದ ಹೆಣ್ಣುಮಕ್ಕಳು ಸ್ವಲ್ಪ ತಲೆ ಉಪಯೋಗಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. 

ಪುಟ್ಟಕ್ಕನ ಮಕ್ಕಳು ನಂಜವ್ವನಿಗೆ ಹುಟ್ಟುಹಬ್ಬ: 400 ಸೀರಿಯಲ್​ಗಳ ನಟಿಯ ರೋಚಕ ಪಯಣ ಇಲ್ಲಿದೆ...

click me!