ಕಿಲಾಡಿ ಅಜ್ಜಿ ಹೇಳಿದ ಸುಳ್ಳು ವರ್ಕ್​ಔಟ್​ ಆಗತ್ತಾ? ಅಸಲಿಯತ್ತು ಗೊತ್ತಾಗಿ ಫಸ್ಟ್​ ನೈಟ್​ ಠುಸ್​ ಆಗುತ್ತಾ?

By Suchethana D  |  First Published Jun 4, 2024, 12:13 PM IST

ಗೌತಮ್​  ಮತ್ತು ಭೂಮಿಕಾ ಫಸ್ಟ್​ ನೈಟ್​ಗೆ ಅಜ್ಜಿ ಮುಹೂರ್ತ ಫಿಕ್ಸ್ ಮಾಡಿಯಾಗಿದೆ. ಇಬ್ಬರೂ ಇದಕ್ಕೆ ಸಮ್ಮತಿ ಸೂಚಿಸಿಯೂ ಆಗಿದೆ. ಮುಂದೆ?
 


ಭೂಮಿಕಾ  ಮತ್ತು ಗೌತಮ್​ ಈ ಜನ್ಮದಲ್ಲಿ ಒಂದಾಗಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಗೊತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ದಂಪತಿಯಂತೆ ಬಾಳಲ್ಲ, ಇಬ್ಬರೂ ನಾಚಿಕೆಯಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದಾರೆ ಎಂದು ತಿಳಿದಿದೆ. ಇದೇ ಕಾರಣಕ್ಕೆ ಅಜ್ಜಿ ಇಬ್ಬರನ್ನೂ ಹನಿಮೂನ್​ಗೆ ಕಳಿಸಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಭೂಮಿಕಾಳ ಕೊಲೆ ಮಾಡಲು ಶಕುಂತಲಾ ದೇವಿ ಸಂಚು ಹೂಡಿದ್ದಳು. ನಂತರ ಭೂಮಿಕಾ ಅಪಹರಣವಾಗಿತ್ತು. ಅವಳನ್ನು ಹುಡುಕಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ಹರಸಾಹಸ ಪಟ್ಟು ಗೌತಮ್​ ಉಳಿಸಿಕೊಂಡದ್ದು ಆಯಿತು. ಇನ್ನೆಲ್ಲಿಯ ಹನಿಮೂನ್​? ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯದ ಅರಿವಾಗಿ ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಲು ಪ್ಲ್ಯಾನ್​ ಮಾಡಿದಳು.

ಇದೇ ಕಾರಣಕ್ಕೆ  ಅಜ್ಜಿ ಮುಹೂರ್ತನೂ ಫಿಕ್ಸ್​ ಮಾಡಿಬಿಟ್ಟಿದ್ದಾಳೆ. ಈ ಮುಹೂರ್ತ ಯಾಕೆ ಎಂದು ಗೌತಮ್​ ಪ್ರಶ್ನಿಸಿದಾಗ ಅಜ್ಜಿ ನಿಮ್ಮಿಬ್ಬರ ಸೋಬಾನಕ್ಕೆ ಅಂದಿದ್ದಾಳೆ. ಗೌತಮ್​ಗೆ ಶಾಕ್​ ಆಗಿದೆ. ಇದೆಲ್ಲಾ ಯಾಕೆ ಎಂದಿದ್ದಾನೆ. ಆದರೆ ಅಜ್ಜಿ ಇದು ನಿಮಗಲ್ಲ, ನಿಮ್ಮಮ್ಮ ಶಕುಂತಲಾಗಾಗಿ. ಅವಳಿಗೋಸ್ಕರ ನೀವಿಬ್ಬರೂ ಒಂದಾಗಬೇಕು, ಇಲ್ಲದಿದ್ರೆ ಸತ್ತೇ ಹೋಗ್ತಾಳೆ ಅಂದಿದ್ದಾಳೆ. ಪಾಪ ಅವಳಿಗೇನು ಗೊತ್ತು, ಇವರಿಬ್ಬರು ಒಂದಾದರೆ ಅವಳು ಶಾಕ್​ನಿಂದ ಸಾಯಬಹುದು ಎಂದು. ಆದರೆ ಗೌತಮ್​ ಫಸ್ಟ್​ ನೈಟ್​ ಹಾಂ ಹೂಂ ಏನೂ ಹೇಳದೇ ಹೋಗಿದ್ದಾನೆ.

Tap to resize

Latest Videos

ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆ: ಶ್ರುತಿ ಹರಿಹರನ್​ ಓಪನ್​ ಮಾತು​...

ಕಿಲಾಡಿ ಅಜ್ಜಿ ಸುಮ್ಮನಾಗಲಿಲ್ಲ. ಭೂಮಿಕಾಳನ್ನು ಕರೆದಿದ್ದಾಳೆ.  ಆದರೆ ಗೌತಮ್​ ಇದಕ್ಕೆ ಒಪ್ಪಲ್ಲ ಎನ್ನುವುದು ಭೂಮಿಕಾಗೆ  ಗೊತ್ತು. ಕೊನೆಗೆ ಅಜ್ಜಿ ಸುಳ್ಳಿ ಹೇಳಿ, ಗೌತಮ್​ ಇದಕ್ಕೆ ಓಕೆ ಅಂದಿದ್ದಾನೆ ಎಂದ ಮೇಲೆ ಅವರು ಓಕೆ ಅಂದ್ರೆ ನನಗೂ ಓಕೆ ಎಂದಿದ್ದಾಳೆ. ಒಟ್ಟಿನಲ್ಲಿ ಇವರಿಬ್ಬರೂ ಸೋಬಾನ ಫಿಕ್ಸ್ ಆಗಿದೆ.  ಪ್ರೀತಿಯ ನಿವೇದನೆ ಮಾಡಿಕೊಳ್ಳಲಿಕ್ಕೇ ವರ್ಷವಾಗುತ್ತಾ ಬಂತು. ಇನ್ನು ಪತಿ-ಪತ್ನಿಯಂತೆ ಬಾಳಲು ಇನ್ನೆಷ್ಟು ಕಾಲ ಬೇಕೋ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದರು. ಒಟ್ಟಿನಲ್ಲಿ ಫಸ್ಟ್​ನೈಟ್​ ಫಿಕ್ಸೇ  ಆಗೋಗಿದೆ.  ಆದರೆ?
 
ಭೂಮಿಕಾ ಹಾಲು ತೆಗೆದುಕೊಂಡು ಫಸ್ಟ್​ ನೈಟ್​ ಕೋಣೆಗೆ ಹೋಗಿದ್ದಾಳೆ. ಗೌತಮ್​ ಹರಳೆಣ್ಣೆ ಕುಡಿದವರ ಥರ ಇದ್ದಾನೆ. ಕಿಲಾಡಿ ಆನಂದ್​, ಗೆದ್ದು ಬಾ ಗೆಳೆಯ ಎಂದು ಹೇಳಿ ಕಳಿಸಿದ್ದಾನೆ. ಭೂಮಿಕಾ ನಾಚುತ್ತಲೇ ಬಂದಿದ್ದಾನೆ. ಆದರೆ ನಿಜವಾಗಿಯೂ ಇವರ ಫಸ್ಟ್​ ನೈಟ್​ ಆಗುತ್ತಾ ಎನ್ನುವುದೇ ಅಭಿಮಾನಿಗಳಿಗೆ ಡೌಟ್​ ಶುರುವಾಗಿದೆ. ಮಾತುಕತೆಯಲ್ಲಿ ಫಸ್ಟ್​ ನೈಟ್​ಗೆ ನಾನು ಒಪ್ಪಲಿಲ್ಲ ನೀವೇ ಒಪ್ಪಿದ್ದು ಎಂದು ಅವನು, ನೀವು ಹೂಂ ಅಂದಿದ್ದಕ್ಕೆ ನಾನು ಹೂಂ ಅಂದಿದ್ದರು ಎಂದು ಇವಳು... ಹೀಗೆ ಇಬ್ಬರ ನಡುವೆ ಜಟಾಪಟಿಯಾಗಿ ಫಸ್ಟ್​ನೈಟ್​ ಠುಸ್​ ಆಗಿ ಹೋಗುತ್ತಾ ಎನ್ನುವ ಗುಮಾನಿಯಲ್ಲಿದ್ದಾರೆ ಅಭಿಮಾನಿಗಳು, ಏನಾಗುತ್ತೋ ಎಂದು ಕಾತರದಿಂದ ಕಾಯುತ್ತಿದ್ದಾರೆ. 

ಮದುವೆಗೂ ಮುನ್ನವೇ ಇದೇ ಮಗು ಬೇಕು ಎಂದಿದ್ದ ವರುಣ್​ ಧವನ್​: ಅಪ್ಪ-ಅಮ್ಮನಾದ ಸೆಲೆಬ್ರಿಟಿ ಸ್ಟಾರ್ಸ್​!

click me!