Bigg Boss 13ಕ್ಕೆ ಕಿಕ್​ ಕೊಡಲು ರಕ್ಷಿತಾ ಶೆಟ್ಟಿ ಬಳಿಕ ಗಿಲ್ಲಿ ನಟ ಎಂಟ್ರಿ ಆಗ್ತಾರಾ? ಅಭಿಮಾನಿಗಳ ಭಾರಿ ಡಿಮಾಂಡ್​

Published : Oct 29, 2026, 07:11 PM IST
Bigg Boss Kannada

ಸಾರಾಂಶ

ಈ ಬಾರಿಯ ಬಿಗ್‌ಬಾಸ್ ಸೀಸನ್ 13 ವೀಕ್ಷಕರಿಗೆ ರುಚಿಸದ ಕಾರಣ, ಮನೆಗೆ ಚೈತನ್ಯ ತುಂಬಲು ರಕ್ಷಿತಾ ಶೆಟ್ಟಿ ಅವರನ್ನು ಕಳುಹಿಸಲಾಗಿದೆ. ರಕ್ಷಿತಾ ಎಂಟ್ರಿಯಿಂದ ಷೋ ಸ್ವಲ್ಪ ಚಿಗುರಿಕೊಂಡಿದ್ದು, ಅವರ ಜೊತೆ ಗಿಲ್ಲಿ ನಟನನ್ನೂ ಕಳುಹಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಗಿಲ್ಲಿ ಎಂಟ್ರಿ ಕೊಡ್ತಾರಾ?

ಹಿಂದಿನ ಎಲ್ಲಾ ಸೀಸನ್​ಗಳಿಗಿಂತಲೂ ಈ ಬಾರಿಯ ಬಿಗ್​ಬಾಸ್ (Bigg Boss13)​ ತೀರಾ ಸಪ್ಪಗಾಗಿದೆ ಎನ್ನೋದು ಅಭಿಮಾನಿಗಳ ಕೊರಗು. ಅದರಲ್ಲಿಯೂ ಕಳೆದ ಸೀಸನ್​ನಲ್ಲಿ ಗಿಲ್ಲಿನಟ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ ಅವರಂಥವರು ಸಕತ್​ ಎಂಟರ್​ಟೈನ್​ ಮಾಡಿದ್ದರು. ಗಿಲ್ಲಿ ನಟ ದಾಖಲೆಯ ವೋಟ್​ ಪಡೆದರು. ಇದಾದ ನಂತರ ಈ ಬಾರಿ ಬಂದ ಬಿಗ್​ಬಾಸ್​​ ಯಾಕೋ ವೀಕ್ಷಕರಿಗೆ ರುಚಿಸುತ್ತಿಲ್ಲ. ಈ ಕುರಿತು ಖುದ್ದು ಸುದೀಪ್​ ಅವರೇ ಹೇಳಿದ್ದರು ಎಂದು ನಟಿ ಕಾವ್ಯಾ ಗೌಡ ಕೂಡ ಹೇಳಿದ್ದರು.

ಇದೇ ಕಾರಣಕ್ಕೆ ತಮ್ಮ ಚಟಪಟ ಮಾತಿನಿಂದ ಇನ್ನೇನು ಬಿಗ್​ಬಾಸ್​ಗೆ ಹೋಗ್ತಾರೆ ಎಂದುಕೊಂಡಿದ್ದ ಕುಮಾರಿ ಅವರು ಅನಾರೋಗ್ಯದ ನಿಮಿತ್ತ ಹೋಗದಿದ್ದಾಗ ಹಲವರಿಗೆ ಅಸಮಾಧಾನ ಆಗಿತ್ತು. ಆದರೆ ತೀರಾ ಸಪ್ಪಗಾಗಿರುವ ಬಿಗ್​ಬಾಸ್​ಗೆ ಒಂದಿಷ್ಟು ಚೈತನ್ಯ ತುಂಬಲು ಕುಮಾರಿಯನ್ನು ಕಳುಹಿಸಿದರೂ ಅದು ಸಾಕಾಗಲಿಲ್ಲ. ಅದಕ್ಕಾಗಿಯೇ ಚಿನಕುರುಳಿ ರಕ್ಷಿತಾ ಶೆಟ್ಟಿ (Rakshita Shetty) ಅವರನ್ನು ಮತ್ತೊಮ್ಮೆ ಬಿಗ್​ಬಾಸ್​ ಮನೆಗೆ ಕಳುಹಿಸಲಾಗಿದೆ. ಅಷ್ಟಕ್ಕೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳು ಈ ಷೋಗೆ ಹೋಗಲು ನಿರಾಕರಿಸುವುದು ಇದೆ. ಇಲ್ಲಿ ಹೋದರೆ, ತಮ್ಮ ವ್ಯಕ್ತಿತ್ವಕ್ಕೆ ಕುಂದು ಬರುತ್ತದೆ, ತಮ್ಮ ಮೇಲಿರುವ ಅಭಿಮಾನ ಬೇರೆಯ ರೂಪ ಪಡೆದುಕೊಳ್ಳುತ್ತದೆ ಎಂದು ಹೇಳುವುದು ಇದೆ. ಇದೇ ಕಾರಣಕ್ಕೋ ಏನೋ ಈ ಬಾರಿ ಬಿಗ್​ಬಾಸ್​ ಮೈನಸ್​ ಪಾಯಿಂಟ್​ ಕೂಡ ಆಯಿತು ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಚೈತನ್ಯ ತಂದ ರಕ್ಷಿತಾ

ಇದೀಗ ರಕ್ಷಿತಾ ಶೆಟ್ಟಿ ಮನೆಯೊಳಕ್ಕೆ ಹೋಗಿದ್ದರಿಂದ ಸ್ವಲ್ಪ ಮಟ್ಟಿಗೆ ಬಿಗ್​ಬಾಸ್​​ ಷೋ ಚಿಗುರಿಕೊಂಡಿದೆ. ಅದರಲ್ಲಿಯೂ ಸೌಂದರ್ಯ ಶೆಟ್ಟಿ ಅವರನ್ನು ಅಕ್ಕ ಎಂದು ಹೇಳುವ ಮೂಲಕ ರಕ್ಷಿತಾ ಎಲ್ಲರನ್ನೂ ನಗಿಸುತ್ತಿದ್ದಾರೆ. ಇದರಿಂದ ಷೋಗೆ ಸ್ವಲ್ಪ ಚೈತನ್ಯ ಬರುತ್ತಿದೆ.

ಗಿಲ್ಲಿ ನಟನಿಗೆ ಒತ್ತಾಯ

ಆದರೆ ರಕ್ಷಿತಾ ಶೆಟ್ಟಿ ಮನೆಯೊಳಕ್ಕೆ ಹೋಗಿರುವ ಬೆನ್ನಲ್ಲೇ ಗಿಲ್ಲಿ ನಟ (Bigg Boss Gilli Nata)ನನ್ನೂ ಕಳುಹಿಸಬೇಕು ಎನ್ನುವುದು ಅಭಿಮಾನಿಗಳ ಒತ್ತಾಯ. ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಮಂದಿ ಪೋಸ್ಟ್​ ಹಾಕುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ಜೋಡಿ ಇದ್ದರೆ ಅಲ್ಲಿ ಮಜಾನೇ ಬೇರೆ. ಬಿಗ್​ಬಾಸ್​ಗೆ ಕಿಕ್​ ಸಿಗುತ್ತದೆ. ಇದರಿಂದ ಈ ಬಾರಿಯ ಬಿಗ್​ಬಾಸ್​​ ನೋಡುವ ಮಟ್ಟಿಗೆ ಬರುತ್ತದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ ಫ್ಯಾನ್ಸ್​. ಇದೇ ಕಾರಣಕ್ಕೆ ಗಿಲ್ಲಿ ನಟನನ್ನೂ ಬಿಗ್​ಬಾಸ್​​ ಮತ್ತೊಮ್ಮೆ ಅತಿಥಿಯಾಗಿ ಕರೆಸಿಕೊಳ್ಳತ್ತಾ ಎಂದು ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್ ಮನೆಯಲ್ಲಿ ಲಕ್ಷ್ಮೀ-ತಾಂಡವ್ ನಡುವೆ ನಡೆದಿದ್ದೇನು? ಅಸಲಿ ಕಹಾನಿ ರಿವೀಲ್ ಮಾಡಿದ ಲಕ್ಷ್ಮೀ ಗೌಡ!
Amruthadhaare Serial ಮುಗಿಯತ್ತಾ? ಪಾರ್ಟ್​ 2 ಯಾವಾಗ? ನಟಿ ಛಾಯಾ ಸಿಂಗ್​ ಹೇಳಿದ್ದೇನು ಕೇಳಿ