ಕಿಚ್ಚ ಸುದೀಪ್ ಜೊತೆ ದಾಖಲೆ ಮೇಲೆ ದಾಖಲೆ ಬರೆದಿದ್ದ ಬಿಗ್ ಬಾಸ್ 12 ಸೀಸನ್ ! 13ರ ಮೇಲಿಗ ಎಲ್ಲರ ಕಣ್ಣು

Published : Aug 31, 2026, 02:57 PM IST
Bigg Boss Kannada

ಸಾರಾಂಶ

ಒಂದ್ಕಡೆ ಕಿಚ್ಚ ಸುದೀಪ್ ಇನ್ನೊಂದು ಕಡೆ ಬಿಗ್ ಬಾಸ್ ಕನ್ನಡ ಸೀಸನ್ 12, ಎರಡೂ ದಾಖಲೆ ಬರೆದಿತ್ತು. ಬಿಗ್ ಬಾಸ್ 13ರ ಮೇಲೆ ಈಗ ಎಲ್ಲರ ಕಣ್ಣಿದ್ದು, ದಾಖಲೆ ಮುರಿಯುತ್ತಾ ಕಾದು ನೋಡ್ಬೇಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ದಿನಗಣನೆ ಶುರುವಾಗಿದೆ. ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಸೆಪ್ಟೆಂಬರ್ 6 ರಿಂದ ಶುರುವಾಗ್ತಿದೆ. ಸ್ಪರ್ಧಿಗಳು ಯಾರ್ಯಾರು, ಅಗ್ನಿ ಪರೀಕ್ಷೆ ಗೆದ್ದು ಬಿಗ್ ಬಾಸ್ ಮನೆ ಸೇರೋರು ಯಾರು ಎನ್ನುವ ಪ್ರಶ್ನೆಗಳಿಗೆ ಐದೇ ದಿನಗಳಲ್ಲಿ ಉತ್ತರ ಸಿಗಲಿದೆ.

ಬಿಗ್ ಬಾಸ್ ನಲ್ಲಿ ಕಿಚ್ಚನ ದಾಖಲೆ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶುರುವಾಗಿದ್ದು 2013ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್ ಸಾರಥ್ಯದಲ್ಲಿಯೇ ರಿಯಾಲಿಟಿ ಶೋ ನಡೆದುಕೊಂಡು ಬರ್ತಿದೆ. ಬೇರೆ ಭಾಷೆಗಳಲ್ಲಿ ನಿರೂಪಕರು ಬದಲಾಗಿದ್ದಾರೆ. ಆದ್ರೆ ಕಿಚ್ಚ ಸುದೀಪ್ 12 ಸೀಸನ್ಗಳನ್ನು ನಿರೂಪಣೆ ಮಾಡಿ ದಾಖಲೆ ಬರೆದಿದ್ದಾರೆ. ಈಗ 13ನೇ ಸೀಸನ್ ಕೂಡ ಸುದೀಪ್ ನಿರೂಪಣೆಯಲ್ಲಿ ಮುಂದುವರೆಯಲಿದೆ.

ಬಿಗ್ ಬಾಸ್ ಸೀನಸ್ 12ರ ದಾಖಲೆ

ಒಂದ್ಕಡೆ ಸುದೀಪ್ ದಾಖಲೆ ಬರೆದ್ರೆ ಇನ್ನೊಂದು ಕಡೆ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ನ 12ನೇ ಸೀಸನ್ ಸಾಕಷ್ಟು ದಾಖಲೆ ಮಾಡಿದೆ. ಬಿಗ್ ಬಾಸ್ ಸೀನಸ್ 13ರ ಮೇಲೆ ಈಗ ಎಲ್ಲರ ಕಣ್ಣಿದೆ. 12 ಸೀಸನ್ ನಲ್ಲಿ ಆದ ದಾಖಲೆಯನ್ನು ಸೀಸನ್ 13 ಮುರಿಯುತ್ತಾ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ಭರ್ಜರಿಯಾಗಿತ್ತು. ಆರಂಭದಲ್ಲಿಯೇ ಅಬ್ಬರ ಶುರುವಾಗಿದ್ದು ಸುಳ್ಳಲ್ಲ. ಗ್ರ್ಯಾಂಡ್ ಓಪನಿಂಗ್ 12.2 ಟಿವಿಆರ್ ರೆಕಾರ್ಡ್ ದಾಖಲೆ ಮಾಡಿತ್ತು. ಅಷ್ಟೇ ಅಲ್ಲ ಬಿಗ್ ಬಾಸ್ ವೀಕ್ಷಣೆ ಮಾಡಿದ ಸಮಯ ಕೂಡ ದಾಖಲೆ ಬರೆದಿತ್ತು. ಬಿಗ್ ಬಾಸ್ ಸೀನಸ್ 12ರ ವಾಚಿಂಗ್ ಟೈಮ್ 332 ಗಂಟೆಗಳು. ಇದು ಇದುವರೆಗಿನ ಸೀಸನ್ ಗಳಲ್ಲಿಯೇ ಅತಿ ಹೆಚ್ಚು ವಾಚ್ ಟೈಮ್ ಪಡೆದ ಸೀಸನ್. ರೀಚ್ ವಿಚಾರದಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ಸ್ಥಾನದಲ್ಲಿದೆ. ಇದು 11.7 ಮಿಲಿಯನಷ್ಟು ರೀಚ್ ಆಗಿದೆ.

ಇಷ್ಟೇ ಅಲ್ಲ ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಕಡಿಮೆ ಏನಿರಲಿಲ್ಲ. ಎಲ್ಲರೂ ಕುತೂಹಲದಿಂದ ಕಾಯ್ತಿದ್ದ ಸಮಯ ಅದು. ಯಾರ ಮುಡಿಗೆ ಕಿರೀಟ ಎನ್ನುವ ಕುತೂಹಲಕ್ಕೆ ತೆರೆ ಬೀಳುವ ಕ್ಷಣ. ಈ ಗ್ರ್ಯಾಂಡ್ ಫಿನಾಲೆ 19.4 ಟಿವಿಆರ್ ಪಡೆದು ಹೊಸ ಇತಿಹಾಸ ಸೃಷ್ಟಿಸಿತ್ತು.

ಈಗ ಹೊಸ ಅಧ್ಯಾಯ ಬರೆಯುವ ಸಮಯ ಬಂದಿದೆ. ಬಿಗ್ ಬಾಸ್ ಸೀನಸ್ 13 ಶುರುವಾಗ್ತಿದೆ. ಅಗ್ನಿಪರೀಕ್ಷೆ ಹಾಗೂ ಪ್ರೋಮೋ ಮೂಲಕ ಕುತೂಹಲ ಹೆಚ್ಚಿಸಿರುವ ಬಿಗ್ ಬಾಸ್ 13 ಎಷ್ಟು ದಾಖಲೆ ಬರೆಯುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್ 13: ಸಂಭವನೀಯ ಪಟ್ಟಿಯಲ್ಲಿ ಝೀ ಕನ್ನಡ ಸೀರಿಯಲ್‌ನ ಆರು ಸ್ಟಾರ್‌ಗಳ ಹೆಸರು
'ಬಿಗ್ ಬಾಸ್ ಕನ್ನಡ-13' ಗ್ರ್ಯಾಂಡ್ ಓಪನಿಂಗ್‌ ಯಾವಾಗ, ಎಷ್ಟು ಗಂಟೆಗೆ ಶುರು..? ಈ ಸೀಸನ್‌ ಸ್ಪೆಷಾಲಿಟಿ ಬೇರೇನೇ ಇದೆ!