ನಾಮಿನೇಟ್​ ಆದವರ ಪೈಕಿ ಇಬ್ಬರನ್ನು ಸೇವ್​ ಮಾಡಲಿದ್ದಾರೆ ವೈಲ್ಡ್​ಕಾರ್ಡ್​ ಸ್ಪರ್ಧಿ: ಬಚಾವಾಗುವವರು ಯಾರು?

By Suvarna News  |  First Published Nov 27, 2023, 2:50 PM IST

ಬಿಗ್​ಬಾಸ್​ ಮನೆಯಲ್ಲಿ ಇಬ್ಬರನ್ನು ಸೇವ್​ ಮಾಡಲಿದ್ದಾರೆ ವೈಲ್ಡ್​ಕಾರ್ಡ್​ ಎಂಟ್ರಿ ಸ್ಪರ್ಧಿ: ಹಾಗಿದ್ದರೆ ಬಚಾವ್​ ಆಗುವವರು ಯಾರು? 
 


50ನೇ ದಿನಕ್ಕೆ ಕಾಲಿಟ್ಟಿರುವ ಬಿಗ್​ಬಾಸ್​ನಲ್ಲಿ ಇದಾಗಲೇ ಕೆಲವು ಸದಸ್ಯರು ನಾಮಿನೇಟ್​ ಆಗಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಉಳಿದಿರುವ ಸ್ಪರ್ಧಿಗಳ ಪೈಕಿ ಪೈಪೋಟಿ ಬಲು ಜೋರಾಗಿ ನಡೆದಿದೆ.  ಇದರ ನಡುವೆಯೇ ಇದೀಗ ಇಬ್ಬರು ಸ್ಪರ್ಧಿಗಳು ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. ಅದರ ಪ್ರೊಮೋ ಇದಾಗಲೇ ಬಿಡುಗಡೆಯಾಗಿದೆ.  ಒಬ್ಬರು ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದು, ಮತ್ತೊಬ್ಬರು ಮನೆಯೊಳಗಿನಿಂದ ಎಂಟ್ರಿ ಕೊಟ್ಟಿರುವುದನ್ನು ಪ್ರೊಮೋದಲ್ಲಿ ನೋಡಬಹುದು. ಓರ್ವ ಯುವಕ ಹಾಗೂ ಇನ್ನೋರ್ವ ಯುವತಿಯನ್ನು ಹಿಂಬದಿಯಿಂದ ತೋರಿಸಲಾಗಿದ್ದು, ಬಿಗ್​ಬಾಸ್​ ಕ್ಯೂರಿಯೋಸಿಟಿ ಹೆಚ್ಚಿಸಿದೆ. ಇದೀಗ ಈ ಸ್ಪರ್ಧಿಗಳೇ ಮನೆಯಲ್ಲಿ ಬಾಕಿ ಉಳಿದಿರುವ ಸ್ಪರ್ಧಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. 

ಇನ್ನು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿದೆ. ಪವಿ ಪೂವಪ್ಪ ಕೊಡಗು ಮೂಲದ  ರೂಪದರ್ಶಿ.   ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದ್ದಾರೆ.   ಅವರು ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ "ಸೊಪ್ಪನ ಸುಂದರಿ" ಯ ಸ್ಪರ್ಧಿಗಳಲ್ಲಿ ಒಬ್ಬರು.  ಇವರ ಇನ್ನೊಂದು ಹೆಸರು ಪವಿತ್ರ ಪೂವಪ್ಪ. ತನ್ನ ಹಾಟ್‌ ಮಾಡೆಲಿಂಗ್ ಫೋಟೋವನ್ನು ಶೇರ್‌ ಮಾಡುವ ಈಕೆಗೆ ಇನ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನು ಅವಿನಾಶ್​ ಅವರು, ಸುರತ್ಕಲ್ ಮೂಲದವರು. ಇವರು 2006ರಲ್ಲಿ ಕೋಕ್‌ ಮತ್ತು 2009ರಲ್ಲಿ  MRF ಟೈಯರ್‌ ಜಾಹೀರಾತಿಗೆ ಎಂಟ್ರಿ ಕೊಟ್ಟು ಗ್ಲಾಮರ್ ಜಗತ್ತನ್ನು ಪ್ರವೇಶಿಸಿದರು. ಅವಿನಾಶ್  2007 ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿಯನ್ನು ಗೆದ್ದಿರುವುದು ಫ್ಯಾಷನ್ ಜಗತ್ತಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ಈ ಸ್ಟೈಲಿಶ್ ಹಂಕ್ 2012 ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯನ್ನು ಕೂಡ ಗೆದ್ದರು. 

Tap to resize

Latest Videos

ಇವರೇ ನೋಡಿ ಕನ್ನಡ ಬಿಗ್‌ಬಾಸ್‌ಗೆ ವೈಲ್ಡ್‌ ಕಾರ್ಡ್ ಎಂಟ್ರಿ, ಒಬ್ಬಾಕೆ ಹಾಟ್‌ ಸುಂದರಿ ಮತ್ತೊಬ್ಬರು ಸ್ಟೈಲಿಶ್ ಹಂಕ್

ಇದರ ನಡುವೆಯೇ ಮನೆಯಲ್ಲಿ ಯಾರನ್ನು ನಾಮಿನೇಟ್​ ಮಾಡುವಿರಿ ಎಂದು ಬಿಗ್​ಬಾಸ್​ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದೆ. ವರ್ತೂರು ಸಂತೋಷ್​ ನಮ್ರತಾ ಅವರನ್ನು ನಾಮಿನೇಟ್​ ಮಾಡುವುದಾಗಿ ಹೇಳಿದರು. ಡ್ರೋನ್​ ಪ್ರತಾಪ್​  ಸಂಗೀತಾ ಅವರನ್ನು ನಾಮಿನೇಟ್​ ಮಾಡಿದರು. ಅವರು ನಾವು ಹೇಳುವ ಮಾತನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರತಾಪ್​ ಅವರನ್ನು ನಾಮಿನೇಟ್​ ಮಾಡಿದ ವಿನಯ್​, ಇದಕ್ಕೆ ಹೀಗೆ ಕಾರಣ ಕೊಟ್ಟರು. ಪ್ರತಾಪ್​ ಬೇರೆಯವರನ್ನು ಕೀಳಾಗಿ ತೋರಿಸಿ ಅವರು ಇಲ್ಲಿಯವರೆಗೂ ಬಂದಿದ್ದಾರೆ ಎಂದರು. ನಂತರ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿರುವ ಸದಸ್ಯರು ನಾಮಿನೇಟ್​ ಆಗಿರುವ ಸದಸ್ಯರ ಪೈಕಿ ಇಬ್ಬರನ್ನು ಸೇವ್​ ಮಾಡಬೇಕು ಎಂದು ಬಿಗ್​ಬಾಸ್​ ಹೇಳುತ್ತಾರೆ. ಆಗ ನಮ್ರತಾ, ನಾನು ತುಂಬಾ ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದೇನೆ ಎಂದರು. ಹೀಗೆ ಒಬ್ಬೊಬ್ಬ ನಾಮಿನೇಟ್​ ಆಗಿರುವವರು ತಮ್ಮನ್ನು ಬಚಾವ್​ ಮಾಡಿಕೊಳ್ಳುವಂತೆ ಕೇಳಿಕೊಂಡರು.

ಇದಾದ ಬಳಿಕ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ಸ್ಪರ್ಧಿ, ನಾನು ಬಚಾವ್​ ಮಾಡುತ್ತಿರುವ ಇಬ್ಬರು ಯಾರೆಂದರೆ... ಎನ್ನುವ ಮೂಲಕ ಪ್ರೊಮೋ ಕಟ್​ ಆಗುತ್ತದೆ. ಇದಕ್ಕೆ ಹಲವರು ಹಲವಾರು ರೀತಿಯ ಉತ್ತರ ಕೊಡುತ್ತಿದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿಯನ್ನು ಸೇವ್​ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ವಿನಯ್​ ಮತ್ತು ಡ್ರೋನ್​ ಪ್ರತಾಪ್​ ಅವರ ಅಭಿಮಾನಿಗಳು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಸೇವ್​ ಮಾಡಲು ವೋಟ್​ ಮಾಡಿ ಎಂದು ಸೋಷಿಯಲ್​  ಮೀಡಿಯಾದಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಆದರೆ ವೈಲ್ಡ್​ ಕಾರ್ಡ್​ ಎಂಟ್ರಿ ಸ್ಪರ್ಧಿ ಯಾರನ್ನು ಬಚಾವ್​ ಮಾಡುತ್ತಾರೋ ಎನ್ನುವ ಕುತೂಹಲಕ್ಕೆ ಬಿಗ್​ಬಾಸ್​ ನೋಡಲೇಬೇಕು. 

ಬಿಗ್​ಬಾಸ್​ ಮನೆಯಲ್ಲಿ ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್? ಬಿದ್ದೂ ಬಿದ್ದೂ ನಕ್ಕ ಕಿಚ್ಚ ಸುದೀಪ್​!

click me!