ಬಿಗ್‌ಬಾಸ್ ಸೀಸನ್ 10ರಲ್ಲಿ 50 ದಿನಗಳು ಪೂರೈಸಿದ ಬೆನ್ನಲ್ಲಿಯೇ ಉದಯ್ ಸೂರ್ಯ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆ ಸೇರಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಬೆಂಗಳೂರು (ನ.26): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 10 ಈಗಾಗಲೇ 50 ದಿನ ಪೂರೈಸಿದ್ದು, ಅಲ್ಲಿರುವ ಎಲ್ಲ ಕಂಟೆಸ್ಟಂಟ್‌ಗಳು 7ನೇ ವಾರದ ಕಿಚ್ಚನ ಜೊತೆ ವಾರದ ಕಥೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈಗ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮತ್ತೊಬ್ಬ ಸ್ಪರ್ಧಿಯಾಗಿ ಒಟಿಟಿ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಉದಯ್ ಸೂರ್ಯ ಮನೆಯೊಳಗೆ ಬರಲಿದ್ದಾನೆ ಎಂಬ ಸುದ್ದಿ ಕೇಳಿಬರುತ್ತಿದೆ.
ಹೌದು, ಬಿಗ್‌ಬಾಸ್ ಸೀಸನ್ 10ರ ಹೊಸ ಮನೆಯ ಮುಂದೆ ನಿಂತುಕೊಂಡಿರುವ ಉದಯ್ ಸೂರ್ಯ ಅವರು ತಾನು ಮನೆಯ ಒಳಗೆ ಹೋಗುವುದಾಗಿ ಕೈ ತೋರಿಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಗ್‌ಬಾಸ್ ಮನೆಗೆ 50 ದಿನಗಳ ನಂತರ ಉದಯ್ ಸೂರ್ಯ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಬಿಗ್‌ಬಾಸ್ ಮಾಹಿತಿ ನೀಡುವ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಅಭ್ಯರ್ಥಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎಂಬ ಪೋಸ್ಟ್ ಹಂಚಿಕೊಂಡಿದೆ. ಇದರಿಂದ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.
ಡ್ರೋನ್ ಪ್ರತಾಪ್ ಹೆಸರೇಳದೇ ಹಿಗ್ಗಾಮುಗ್ಗಾ ನೀರಿಳಿಸಿದ ಕನ್ನಡತಿ ಅಕ್ಕ ಅನು!
ಇನ್ನು ಬಿಗ್‌ಬಾಸ್ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗ 50 ದಿನಗಳುಯ ಪೂರೈಸಿದ್ದು, ಕೆಲವರು ಮನೆಯನ್ನು ಬಿಟ್ಟು ಹೋಗಿದ್ದಾರೆ. ಕಳೆದ ವಾರವಷ್ಟೇ ಡಬಲ್ ಎಲಿಮಿನೇಷನ್ ಮೂಲಕ ರ್ಯಾಪರ್ ಇಶಾನಿ ಹಾಗೂ ಧಾರಾವಾಹಿ ನಟಿ ಭಾಗ್ಯಶ್ರೀ ಹೊರ ಬಂದಿದ್ದಾರೆ. ಜೊತೆಗೆ, ಸ್ನೇಕ್ ಶ್ಯಾಮ್, ರಕ್ಷಕ್ ಬುಲೆಟ್ ಅವರೂ ಮನೆಯಿಮದ ಹೊರ ಬಂದಿದ್ದಾರೆ. ಈಗ ಬಿಬಿಕೆ ಅಭಿಮಾನಿಗಳು ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವುದಾದರೆ ರಕ್ಷಕ್ ಬುಲೆಟ್ ಅವರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಯಾರಿಗೆ ಈ ಅವಕಾಶ ಸಿಗುತ್ತದೆ ಎಂಬುದರ ಬಗ್ಗೆ ಶೀಘ್ರವೇ ತಿಳಿಯಲಿದೆ.
ನೀತು ವನಜಾಕ್ಷಿ ಔಟ್: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಬಿಗ್ ಬಾಸ್ ಕನ್ನಡ 10ನೇ ಸೀಸನ್ 7ನೇ ವಾರದ ಕೊನೆಗೆ ಸಾಗಿಬಂದಿದೆ. ಇಂದು, 26 ನವೆಂಬರ್ 2023ರಂದು ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಬೀಳಲಿದ್ದಾರೆ.
ಅವರು ಯಾರೆಂಬುದನ್ನು ಅಧಿಕೃತವಾಗಿ ಹೇಳಲಾಗದಿದ್ದರೂ ಊಹೆ ಮಾಡಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ಗಾಸಿಪ್ ಆಧರಿಸಿ ಹೇಳುವುದಾದರೆ ಇಂದು ಎಲಿಮಿನೇಟ್ ಆಗಲಿರುವ ಸ್ಪರ್ಧಿ ನೀತು ವನಜಾಕ್ಷಿ. ಹಾಗಂತ ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಆದರೆ ಇದನ್ನು ಗಾಸಿಪ್ ಎನ್ನಬಹುದೇ ಹೊರತೂ ಅಧಿಕೃತ ಸುದ್ದಿ ಎನ್ನಲು ಸಾಧ್ಯವಿಲ್ಲ.