
ʼರಾಕಿಂಗ್ ಸ್ಟಾರ್ʼ ಯಶ್ ಅವರ ತಾಯಿ ಹಾಗೂ ದೀಪಿಕಾ ದಾಸ್ ತಾಯಿ ಇಬ್ಬರೂ ಅಕ್ಕ-ತಂಗಿಯರು. ಹೀಗಾಗಿ ಸಂಬಂಧದಲ್ಲಿ ಯಶ್ ಅವರ ತಂಗಿ ದೀಪಿಕಾ ದಾಸ್. ಆದರೆ ಅವರು ಎಲ್ಲಿಯೂ ಯಶ್ ತಂಗಿ ಎಂದು ಹೇಳಿಕೊಳ್ಳೋದಿಲ್ಲ, ಯಶ್ ಮನೆಯ ಕಾರ್ಯಕ್ರಮಗಳಲ್ಲಿ ದೀಪಿಕಾ ದಾಸ್ ಹಾಜರಿ ಇರೋದಿಲ್ಲ, ದೀಪಿಕಾ ದಾಸ್ ಮದುವೆಯಲ್ಲಿ ಯಶ್ ಕುಟುಂಬದ ಹಾಜರಿಯೂ ಇರಲಿಲ್ಲ. ಈ ಬಗ್ಗೆ ಅವರು ರಾಜೇಶ್ ಗೌಡ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
ನಾನು ಪಬ್ಲಿಕ್ ಮಾಡಲ್ಲ!
“ನಮ್ಮ ಮಧ್ಯೆ ಜಗಳ ಅಂಥ ಏನೂ ಇಲ್ಲ. ನನಗೆ ನಮ್ಮಿಬ್ಬರ ಪ್ರೊಫೆಶನ್ ಡಿಫರೆಂಟ್ ಆಗಿಟ್ಟುಕೊಳ್ಳಲು ಪ್ರಯತ್ನಪಡ್ತೀವಿ. ಇಬ್ಬರಿಗೂ ಪರಸ್ಪರ ಗೌರವವಿದೆ. ಎಲ್ಲಿಯೂ ತಂಗಿ, ಅಣ್ಣ ಅಂತ ಹೇಳೋದು ಇಷ್ಟ ಇಲ್ಲ. ಮುಂಚಿನಿಂದಲೂ ನಾನು ಎಲ್ಲಿಯೂ ಈ ಥರ ಮಾತನಾಡಿಲ್ಲ, ಈಗಲೂ ಅದನ್ನೇ ಕಂಟಿನ್ಯೂ ಮಾಡ್ತೀನಿ. ನನ್ನ ಕೆಲಸ ಚೆನ್ನಾಗಿದ್ದಾಗ ಅವರು ಪ್ರಶಂಸೆ ಕೊಡ್ತಾರೆ. ಅದನ್ನು ನಾನು ಎಲ್ಲಿಯೂ ಪಬ್ಲಿಕ್ ಮಾಡೋಕೆ ಇಷ್ಟಪಡೋದಿಲ್ಲ. ಇದನ್ನು ಬಿಟ್ಟರೆ ಬೇರೆ ಏನೂ ಇಲ್ಲ” ಎಂದು ದೀಪಿಕಾ ಹೇಳಿದ್ದಾರೆ.
ಹೇಗಿದೆ ದೀಪಿಕಾ ದಾಸ್ ಹೊಸ ಗ್ಲಾಮರಸ್ ಲುಕ್… ಕ್ಲಿಯೋಪಾತ್ರ ಎಂದ ಫ್ಯಾನ್ಸ್
ಬದುಕನ್ನು ಪ್ರೈವೇಟ್ ಆಗಿ ಇಟ್ಟುಕೊಳ್ತೀವಿ!
“ನಮ್ಮ ಕಡೆಯಿಂದ ಏನಾದರೂ ಒಳ್ಳೆಯದಾದರೆ ಜನರು ತಗೊಳ್ತಾರೆ, ನೆಗೆಟಿವ್ ಆದರೆ ಸಮಸ್ಯೆ ಆಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯದಾಗುವವರೆಗೂ ಕಾಯಬೇಕು, ಅಲ್ಲಿಯವರೆಗೆ ನನ್ನ ಖಾಸಗಿ ಬದುಕನ್ನು ಪ್ರೈವೇಟ್ ಆಗಿ ಇಟ್ಕೊಳ್ಳಲು ಇಷ್ಟಪಡ್ತೀನಿ” ಎಂದು ನಟಿ ದೀಪಿಕಾ ದಾಸ್ ಅವರು ಹೇಳಿದ್ದಾರೆ.
8 ರಾಜ್ಯಗಳನ್ನು ಕಾರಲ್ಲಿಯೇ ಸುತ್ತಿದ ದೀಪಿಕಾ ದಾಸ್: ಪಾರು ಪಾರ್ವತಿ ಬಗ್ಗೆ ಏನ್ ಹೇಳಿದ್ರು?
ಯಶ್ ಅವರ ಬಗ್ಗೆ ದೀಪಿಕಾ ದಾಸ್ ಏನಂದ್ರು?
“ನಾವು ಹಾಸನದಲ್ಲಿದ್ದೆವು, ಯಶ್ ಅವರು ಮೈಸೂರಿನಲ್ಲಿದ್ದರು. ಚಿಕ್ಕ ವಯಸ್ಸಿನಲ್ಲಿ ಆಗಾಗ ಭೇಟಿ ಆಗುತ್ತಿದ್ದೆವು. ಯಶ್ ಅವರು ಯಾವಾಗಲೂ ನನಗೆ ಮೋಟಿವೇಶನ್. ಇಂದು ಜನರು ಅವರನ್ನು ಎಷ್ಟು ಹೊಗಳ್ತಾರೋ ಅದಕ್ಕಿಂತ ಜಾಸ್ತಿ ನಾನು ಹೊಗಳ್ತೀನಿ. ಯಶ್ ಅವರು ದೇಶ ದಾಟಿ ಇಂಟರ್‌ನ್ಯಾಶನಲ್ ಲೆವೆಲ್‌ನಲ್ಲಿ ಇಂದು ಹೆಸರು ಮಾಡುತ್ತಿದ್ದಾರೆ. ಇವರು ಭಾಗ ಆಗಿರೋ ಚಿತ್ರರಂಗದಲ್ಲಿ ನಾನು ಇರೋದು ತುಂಬ ಖುಷಿ ಇದೆ. ಅವರಿಗೆ ಇನ್ನಷ್ಟು ಒಳ್ಳೆಯದಾಗಲಿ” ಎಂದು ದೀಪಿಕಾ ದಾಸ್ ಹೇಳಿದ್ದಾರೆ.
Paru Parvati Film Review: ಭಾವನೆಗಳ ರಸ್ತೆಯಲ್ಲಿ ಕೌತುಕದ ಪಯಣ: ಒಂಟಿತನದಲ್ಲಿ ಪಾರು!
ʼನಾಗಿಣಿʼ ಜನಪ್ರಿಯತೆ!
ದೀಪಿಕಾ ದಾಸ್ ಅವರು ʼನಾಗಿಣಿʼ ಧಾರಾವಾಹಿ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ನಿಜ ಜೀವನದಲ್ಲಿ ದೀಪಿಕಾ ದಾಸ್‌ಗೆ ಹಾವು ಅಂದ್ರೆ ಭಯ ಅಂತೆ. ಅಷ್ಟು ವರ್ಷಗಳ ಕಾಲ ಕಾಡಿನಲ್ಲಿ ಶೂಟಿಂಗ್ ಮಾಡಿದ್ರೂ ಕೂಡ ದೀಪಿಕಾ ದಾಸ್‌ಗೆ ಹಾವು ಕಾಣಿಸಿರಲಿಲ್ಲವಂತೆ. ಇದಕ್ಕೂ ಮುನ್ನ ಅವರು ʼಕೃಷ್ಣ ರುಕ್ಮಿಣಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಆನಂತರ ʼಬಿಗ್ ಬಾಸ್ ಕನ್ನಡ ಸೀಸನ್ 7ʼ ಶೋನಲ್ಲಿಯೂ ಅವರು ಭಾಗವಹಿಸಿದ್ದರು. ಇದಾದ ಬಳಿಕ ಅವರು ಮತ್ತೆ ʼಬಿಗ್ ಬಾಸ್ ಕನ್ನಡ ಸೀಸನ್ 9ʼ ಶೋನಲ್ಲಿಯೂ ಭಾಗವಹಿಸಿದ್ದರು.
ದೀಪಿಕಾ ದಾಸ್ ಅವರು ಸಿನಿಮಾ ಕಡೆಗೆ ಹೆಚ್ಚು ಮುಖ ಮಾಡಿದ್ದಾರೆ. ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.