ಕೊರೋನಾ ಪಾಸಿಟಿವ್ ಕಾರಣ ಧಾರಾವಾಹಿಯಿಂದ ಹೊರ ನಡೆದ ನಟಿ ವರ್ಷಿತಾ!

Suvarna News   | Asianet News
Published : Apr 30, 2021, 05:12 PM IST
ಕೊರೋನಾ ಪಾಸಿಟಿವ್ ಕಾರಣ ಧಾರಾವಾಹಿಯಿಂದ ಹೊರ ನಡೆದ ನಟಿ ವರ್ಷಿತಾ!

ಸಾರಾಂಶ

ಕಿರುತೆರೆ ನಟಿ ವರ್ಷಿತಾಗೆ ಕೊರೋನಾ ಪಾಸಿಟಿವ್. ಪ್ರಮುಖ ಪಾತ್ರಧಾರಿ ಆಗಿರುವ ಕಾರಣ ಲ್ಯಾಗ್ ಮಾಡಲಾಗದೇ ಪಾತ್ರಕ್ಕೆ ಹೊಸ ಕಲಾವಿದೆಯನ್ನು ಪರಿಚಯಿಸಿದ ತಂಡ.

ದಿನೆ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಮಂಜಾಗೃತ ಕ್ರಮಗಳನ್ನು ಕೈಗೊಂಡರೂ ಸಣ್ಣಪುಟ್ಟ ನಿರ್ಲಕ್ಷ್ಯದಿಂದ ಅಮಾಯಕರಿಗೆ ಸೋಂಕು ತಗಲುತ್ತಿದೆ. ಲಾಕ್‌ಡೌನ್‌ ಜಾರಿಗೊಳ್ಳುತ್ತಿದ್ದಂತೆ, ಚಿತ್ರರಂಗದ ಹಾಗೂ ಕಿರುತೆರೆ ಕ್ಷೇತ್ರಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಕಿರುತೆರೆ ಜನಪ್ರಿಯಾ ನಟಿ ವರ್ಷಿತಾಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಕೊರೋನಾ ಪಾಸಿಟಿವ್ ಹಾಗೂ ಧಾರಾವಾಹಿಯಿಂದ ಹೊರ ಬಂದಿರುವ ವಿಚಾರವನ್ನು ಖುದ್ದು ವರ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ನನಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣ ಚಿತ್ರೀಕರಣದಲ್ಲಿ ಭಾಗಿಯಾಗಲು ಅಸಾಧ್ಯವಾಗಿದೆ.  ಹೀಗಾಗಿ ನನ್ನ ಬದಲಾಗಿ ಹೊಸ ವ್ಯಕ್ತಿಯನ್ನು ನನ್ನ ಪಾತ್ರಕ್ಕೆ ಪರಿಚಯ ಮಾಡಲಾಗಿದೆ. ನಾನು ಕಸ್ತೂರಿ ನಿವಾಸ ಧಾರಾವಾಹಿಯಿಂದ ಹೊರ ಬಂದಿರುವೆ,' ಎಂದು ವರ್ಷಿತಾ ಬರೆದುಕೊಂಡಿದ್ದಾರೆ. 

21 ದಿನ ಕ್ವಾರಂಟೈನ್; ಕೊರೋನಾದಿಂದ ಪಾರಾದ ನಟಿ ಶ್ವೇತಾ ಚೆಂಗಪ್ಪ! 

ಸದ್ಯ ವರ್ಷಿತಾ ತಮ್ಮ ನಿವಾದಸಲ್ಲಿಯೇ ಸೆಲ್ಫ್ ಐಸೋಲೇಟ್ ಅಗಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಅತ್ತೆ-ಮಾವಂದಿರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂಬ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಕುಟುಂಬಸ್ಥರ ಆರೋಗ್ಯ ಸ್ಥಿತಿ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್