ಬಿಗ್‌ ಬಾಸ್‌ನಲ್ಲಿ ರಾಜಕೀಯ ಕಿಚ್ಚು; ಅತಿದೊಡ್ಡ ರಿಯಾಲಿಟಿ ಶೋ ವೇದಿಕೆಯನ್ನ ಪಾಲಿಟಿಕ್ಸ್‌ಗೆ ಬಳಸಿಕೊಂಡರಾ ಖ್ಯಾತ ನಿರೂಪಕ?

Published : Nov 26, 2026, 07:23 PM IST
Bigg Boss Vijay Sethupathi

ಸಾರಾಂಶ

ತಮಿಳು ಬಿಗ್ ಬಾಸ್‌ನಲ್ಲಿ ನಿರೂಪಕ ವಿಜಯ್ ಸೇತುಪತಿ ನೀಡಿದ ಹೇಳಿಕೆಯೊಂದು ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಸಿಎಂ ವಿಜಯ್ ಅವರನ್ನು ಗುರಿಯಾಗಿಸಿ ಟೀಕಿಸಿದ್ದಾರೆ ಎಂಬ ವಿವಾದದ ಬಳಿಕ, ರಾಜಕೀಯ ಸೇವೆ ಹಾಗೂ ತಮ್ಮ ಹೇಳಿಕೆಯ ಕುರಿತು ಸೇತುಪತಿ ಸ್ಪಷ್ಟನೆ ನೀಡಿದ್ದಾರೆ. ಏನು ಹೇಳಿದ್ದರು ಸೇತುಪತಿ?

ಚೆನ್ನೈ: ಬಹುಶಃ ವಿವಾದಗಳು ಇಲ್ಲದೇ ಬಿಗ್‌ ಬಾಸ್ ಶೋಗಳು ನಡೆಯೋದೇ ಇಲ್ಲವೇನೋ. ಇತ್ತೀಚೆಗೆ ತಮಿಳು ಸೀಸನ್‌-10 ನಿರೂಪಕ ವಿಜಯ್ ಸೇತುಪತಿ ಒಂದು ಹೇಳಿಕೆ ನೀಡಿದ್ದರು. ಅದು ತಮಿಳುನಾಡು ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಮತ್ತು ಅವರ ಆಡಳಿತವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂಬ ಟೀಕೆಗಳು ಶುರುವಾಗಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧಗಳ ಚರ್ಚೆ ಜೋರಾಗಿ ನಡೆದಿತ್ತು. ಇದೀಗ ವಿಜಯ್ ಸೇತುಪತಿ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ವಿವಾದದ ಬಳಿಕ ಸೇತುಪತಿ ಹೇಳಿದ್ದೇನು?

'ಗಲಾಟಾ ತಮಿಳ್' ಜೊತೆಗಿನ ಸಂಭಾಷಣೆಯಲ್ಲಿ ವಿಜಯ್ ಸೇತುಪತಿ ಅವರು ಸಿಎಂ ವಿಜಯ್ ಜೊತೆಗಿನ ನಂಟಿನ ಬಗ್ಗೆ ಮಾತನ್ನಾಡಿದ್ದಾರೆ. ನನಗೆ ವಿಜಯ್ ಸರ್ ನಟನಾಗಿ ಗೊತ್ತು. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ರಾಜಕೀಯದ ವಿಷಯಕ್ಕೆ ಬಂದರೆ ಅವರ ನೀತಿಗಳು ಮತ್ತು ಯೋಜನೆಗಳು ಹಾಗೂ ಅವುಗಳನ್ನು ಹೇಗೆ ಜಾರಿಗೆ ತರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಅದನ್ನು ಮೀರಿ ರಾಜಕೀಯವನ್ನು ಹತ್ತಿರದಿಂದ ಗಮನಿಸುವುದು ಮತ್ತು ವಿಶ್ಲೇಷಿಸುವುದು ನನ್ನ ಕೆಲಸವಲ್ಲ. ನನಗೆ ಬೇರೆ ಕೆಲಸಗಳಿವೆ. ರಾಜಕೀಯ ಎಂದರೆ ಮಹತ್ವಾಕಾಂಕ್ಷೆಯಲ್ಲ. ಅದು ಸೇವೆ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ರಾಜಕೀಯಕ್ಕೆ ಬರುವ ಆಸೆ ಇಟ್ಟುಕೊಳ್ಳುವುದಲ್ಲ, ಜನರಿಗೆ ಸೇವೆ ಮಾಡುವ ಮನಸ್ಸು ಇರಬೇಕು. ನನ್ನ ಕೈಲಾದಷ್ಟನ್ನು ನಾನು ಮಾಡುತ್ತಿದ್ದೇನೆ. ನನಗೆ ಅಷ್ಟೇ ಸಾಕು. ನಾನು ಉಚಿತವಾಗಿ ಉದ್ಯೋಗಾವಕಾಶ ಒದಗಿಸುತ್ತಿದ್ದೇನೆ. ಇಲ್ಲಿಯವರೆಗೆ ನಮ್ಮ ತಂಡ ಎರಡು ಲಕ್ಷ ಜನರಿಗೆ ಉಚಿತವಾಗಿ ಕೆಲಸ ಹುಡುಕಲು ಸಹಾಯ ಮಾಡಿದೆ ಎಂದಿದ್ದಾರೆ.

ನಾವು ಸಿನಿಮಾ ಮಾಡೋರು. ಹಾಗಂತ ಇಲ್ಲಿ ಯಾವುದೇ ರಾಜಕೀಯ ಅಭಿಪ್ರಾಯ ಹೇಳಿಕೊಳ್ಳಲು ಅಭ್ಯಂತರ ಇಲ್ಲ. ಇಲ್ಲಿನ ಸಮಸ್ಯೆ ಏನೆಂದರೆ ಭಿನ್ನಾಭಿಪ್ರಾಯಗಳನ್ನು ಸಭ್ಯ ರೀತಿಯಲ್ಲಿ ಸ್ವೀಕರಿಸುವ ಪ್ರಬುದ್ಧತೆ ನಮ್ಮ ರಾಜಕೀಯದಲ್ಲಿ ಇಲ್ಲ. ಇದು ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅನ್ವಯಿಸುತ್ತದೆ. ನಾವು ಒಂದು ವಿಷಯದ ಬಗ್ಗೆ ಅಭಿಪ್ರಾಯ ಹೇಳಬೇಕಾದರೆ.. ಮೊದಲು ಅದನ್ನು ಹತ್ತಿರದಿಂದ ಗಮನಿಸಿ ಅರ್ಥ ಮಾಡಿಕೊಳ್ಳಬೇಕು. ಯಾವುದನ್ನಾದರೂ ಸರಿಯಾಗಿ ಅಧ್ಯಯನ ಮಾಡಿದಾಗ ಮಾತ್ರ ಅದರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಲು ಸಾಧ್ಯ. ಇಲ್ಲದಿದ್ದರೆ ಅದು ಸುಮ್ಮನೆ ಯೋಚಿಸದೇ ಮಾತನ್ನಾಡಿದ್ದೇವೆ ಎನಿಸಿಬಿಡುತ್ತದೆ.

ನಾವು ಸಿನಿಮಾವನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಗಮನ ಮತ್ತು ಪ್ರಯತ್ನಗಳೆಲ್ಲ ಅಲ್ಲೇ ಇರುತ್ತದೆ. ನಮಗೆ ಸರಿಯಾಗಿ ತಿಳಿಯದ ಅಥವಾ ಅಧ್ಯಯನ ಮಾಡದ ವಿಷಯದ ಬಗ್ಗೆ ಸುಮ್ಮನೆ ಮಾತನಾಡೋದ್ರಿಂದ ಯಾವುದೇ ಪ್ರಯೋಜನ ಇಲ್ಲ. ಅಂತಹ ಹೇಳಿಕೆಗಳ ನಂತರ ಬರುವ ಟೀಕೆಗಳು ನಮ್ಮ ಸಿನಿಮಾದ ಮೇಲೆ ಪರಿಣಾಮ ಬೀರಬಾರದು. ಆದರೆ ಇಂದಿನ ಸಾಮಾಜಿಕ ಜಾಲತಾಣಗಳು ಆ ರೀತಿ ಕೆಲಸ ಮಾಡುತ್ತಿಲ್ಲ ಎಂದರು.

ಬಿಗ್ ಬಾಸ್ ಶೋನಲ್ಲಿ ಸೇತುಪತಿ ಏನು ಹೇಳಿದ್ದರು?

ಓರ್ವ ಸ್ಪರ್ಧಿಯ ವಿಚಾರವನ್ನು ಇಟ್ಟುಕೊಂಡು ಮಾತನ್ನಾಡಿದ್ದ ನಿರೂಪಕ.. ನಾಯಕತ್ವ ಎಂದರೆ ಏನು ಎಂದು ತಿಳಿಯದೆ ಜವಾಬ್ದಾರಿ ತೆಗೆದುಕೊಳ್ಳುವುದು, ಯೋಚಿಸದೆ ಭರವಸೆಗಳನ್ನು ನೀಡುವುದು ಮತ್ತು ಸಮಸ್ಯೆಗಳು ಎದುರಾದಾಗ ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸಿ ಓಡಿಹೋಗುವುದು ನಾಯಕತ್ವವಲ್ಲ. ಅದು ಶುದ್ಧ ವಂಚನೆ ಎಂದಿದ್ದರು. ಇದು ಸಿಎಂ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಹೀಗೆ ಹೇಳಿದ್ದಾರೆ. ಸಿಎಂ ಅವರನ್ನು ಟೀಕಿಸಲು ಸೇತುಪತಿ ಬಿಗ್‌ಬಾಸ್ ಶೋ ಬಳಸಿಕೊಂಡಿದ್ದಾರೆ ಎಂಬ ಟೀಕೆಗಳು ಶುರುವಾಗಿದ್ದವು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ವಾಹಿನಿ ಮತ್ತು ಸೇತುಪತಿ ಇಬ್ಬರೂ ಸ್ಪಷ್ಟನೆ ನೀಡಿದ್ದರು. ಇದೀಗ ಆ ಬಗ್ಗೆ ಸೇತುಪತಿ ಮತ್ತಷ್ಟು ಮಾತಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಾಳಿ ಕಟ್ಟುವಾಗ ರಾಣವ್ ಗೌಡ ಕೇಳಿದ್ದೇನು? ಮದುವೆಯ ವಿಶೇಷ ಕ್ಷಣ ನೆನೆದು ನಾಚಿ ನೀರಾಗಿ ಬಿಟ್ರು ರಾಧಾ ಭಗವತಿ
ಈ ಶುಕ್ರವಾರ OTTಯಲ್ಲಿ ಧೂಳೆಬ್ಬಿಸಲಿವೆ ಈ 5 ಹೊಸ ಸಿನಿಮಾ, ವೆಬ್ ಸೀರಿಸ್‌ಗಳು!... ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ