ವಿಜಯ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ 'ಶಿವದೂತೆ ಗುಳಿಗೆ' ಮಸ್ಕತ್ ನಲ್ಲಿ ಮೇ 12ರಂದು ಪ್ರದರ್ಶನ

By Suvarna News  |  First Published Mar 12, 2023, 6:52 PM IST

ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ  “ಶಿವದೂತೆ ಗುಳಿಗೆ"  ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ  ಪ್ರದರ್ಶನಗೊಳ್ಳಲಿದೆ.


ಉಡುಪಿ (ಮಾ.12): ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸಿದ   “ಶಿವದೂತೆ ಗುಳಿಗೆ" ನಾಟಕವು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ  ಪ್ರದರ್ಶನಗೊಳ್ಳಲಿದೆ. 

ವಿಶ್ವ ಪಸಂಚಾರದಲ್ಲಿರುವ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾದೀಶರಾದ  ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಸ್ಕತ್ ಗೆ ಆಗಮಿಸಿದ್ದ ಈ ಸಂಧರ್ಭದಲ್ಲಿ ಅವರ ಸಾನಿಧ್ಯದಲ್ಲಿ  ಆಮಂತ್ರಣ ಪತ್ರ  ಬಿಡುಗಡೆ ಸಮಾರಂಭ ಮಸ್ಕತ್ ನ  ಶ್ರೀ ಕೃಷ್ಣ ದೇವಸ್ಥಾನ ದಾರ್ಸೈಟ್ನಲ್ಲಿ ಇತ್ತೀಚೆಗೆ ನಡೆಯಿತು.

Tap to resize

Latest Videos

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಾತನಾಡಿ “ತುಳುನಾಡಿನ ದೈವ ದೇವರುಗಳ ಕಥೆಯನ್ನು ಒಳಗೊಂಡ ಈ ನಾಟಕವನ್ನು ಮಸ್ಕತ್ ನಲ್ಲಿ ಇರುವ ಎಲ್ಲಾ ತುಳು  ಕನ್ನಡಿಗರು ನೋಡಲೇಬೇಕು. ವಿಶೇಷವಾಗಿ ಈ ನಾಟಕವನ್ನು ನಮ್ಮ ಮಕ್ಕಳಿಗೆ ತೋರಿಸಿ ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಂತಹ ಪ್ರಯತ್ನ ಆಗಬೇಕು ಎಂದರು. 

ಈಗಾಗಲೇ ಕರ್ನಾಟಕ, ಮುಂಬೈ ಮತ್ತು ಕೇರಳದ ಗಡಿನಾಡಿನಲ್ಲಿ 400 ಕ್ಕೂ ಅಧಿಕ ಪ್ರದರ್ಶನಗೊಂಡ ಈ ನಾಟಕವನ್ನು ಮಸ್ಕತ್ ನಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಾತನಾಡಿ  ನಾಟಕಕ್ಕೆ ಶುಭ ಹಾರೈಸಿದರು.”

ಸಮಾರಂಭದಲ್ಲಿ  ಜಿ.ವಿ.ರಾಮಕೃಷ್ಣ, ಲಕ್ಷ್ಮೀ ನಾರಾಯಣ ಆಚಾರ್ಯ, ಹಿರಿಯಣ್ಣ ನಾರಾಯಣ ಸ್ವಾಮಿ ,  ಶಶಿಧರ್ ಶೆಟ್ಟಿ ಮಲ್ಲಾರ್, ದಿವಾಕರ್ ಶೆಟ್ಟಿ ಮಲ್ಲಾರ್, ಗಣೇಶ್ ಶೆಟ್ಟಿ ಕುತ್ತಾರ್ ಪದವು, ಎಂ. ಜೆ. ಚಂಗಪ್ಪ, ಮಂಜುನಾಥ್ ನಾಯಕ್,  ನರೇಶ್ ಪೈ,  ನಾಗೇಶ್ ಶೆಟ್ಟಿ ಕಿನ್ನಿಗೋಳಿ,  ಡಾ ಅಂಚನ್ ಸಿ ಕೆ,  ಯುವರಾಜ್ ಸಾಲಿಯಾನ್ ಅವರು ಉಪಸ್ಥಿತರಿದ್ದರು. 

ನಾಟಕ ಸಂಘಟಕರಾದ ಕರಾವಳಿ ಫ್ರೆಂಡ್ಸ್ ಮಸ್ಕತ್ನ ರಾಜೇಂದ್ರ ಶೆಟ್ಟಿ, ಹಿತೇಶ್ ಮಂಗಳೂರು , ಪದ್ಮಾಕರ್ ಮೆಂಡನ್ , ರಮಾನಂದ ಶೆಟ್ಟಿ ,ಮಂಜುನಾಥ್ ರಾವ್ , ರವೀಂದ್ರ ಆಚಾರ್ಯ , ಶಿವಾನಂದ್ ಕೋಟ್ಯಾನ್ , ರಾಮಕೃಷ್ಣ ಪ್ರಭು , ಸುಕುಮಾರ್ ಅಂಚನ್ ನೆರೆದ ಗಣ್ಯರನ್ನು ಬರಮಾಡಿಕೊಂಡು   ಸ್ವಾಗತಿಸಿದರು. 

ಫತ್ವಾಗೆ ಡೋಂಟ್‌ ಕೇರ್‌: ಹೆಣ್ಮಕ್ಳಿಗೆ ಆಸ್ತಿ ವರ್ಗಾಯಿಸಲು ಮತ್ತೆ ವಿವಾಹವಾದ ಮುಸ್ಲಿಂ ದಂಪತಿ..!

ಮಜಾನ್ ಈವೆಂಟ್ಸ್ ಈ ಕಾರ್ಯಕ್ರಮವನ್ನು ಮಸ್ಕತ್ ನಲ್ಲಿ ಆಯೋಜಿಸಿ,ನ್ಯಾಷನಲ್ ಬ್ಯಾಂಕ್ ಆಫ್ ಒಮಾನ್ ಪ್ರಸ್ತುತ ಪಡಿಸಲಿದೆ.
ಕಾರ್ಯಕ್ರಮದ ಮುಖ್ಯ ಪ್ರಯೋಜಕರಾಗಿ ಅಲ್ ಮಹಾ ಪೆಟ್ರೋಲಿಯಂ ಮತ್ತು ಸಹಪ್ರಯೋಜಕರಾಗಿ ಮಲ್ಟಿಟೆಕ್ ಕಾಂಟ್ರಾಕ್ಟಿಂಗ್ ಸಹಕಾರ ನೀಡಿದ್ದಾರೆ.

ಉಡುಪಿ: 100 ಪುಸ್ತಕ ಪ್ರಕಟಿಸಿದರೂ ಪ್ರಕಾಶಕ್ಕೆ ಬರದ ಸಾಹಿತಿ ಈ ಹಿರಿಯಜ್ಜಿ

ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಕಲಾಸಂಗಮದ ಸುಮಾರು 28 ಕಲಾವಿದರು  ವಿಜಯ್ ಕುಮಾರ್ ಕೊಡಿಯಾಲಬೈಲ್ ರವರ ದಕ್ಷ ನಿರ್ದೇಶನದಲ್ಲಿ ಈ ನಾಟಕವನ್ನು  ಪ್ರದರ್ಶಿಸಲಿದ್ದಾರೆ. ಕಾಂತಾರ ಚಲನಚಿತ್ರ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಗುಳಿಗನ ಪಾತ್ರದಲ್ಲಿ ಮಿಂಚಲಿದ್ದಾರೆ.

click me!