ಕೋಕಿಲಜ್ಜಿ-ಘಾಟಿ ತಾತನ ಮೂಲಕವೇ ಮಗಳನ್ನು ಹೀಗೆ ಪರಿಚಯಿಸಿದ ಇಂದುಶ್ರೀ; ಸೋ ಕ್ಯೂಟ್​ ಅಂದ ಫ್ಯಾನ್ಸ್​

Published : Jun 29, 2024, 05:05 PM IST
ಕೋಕಿಲಜ್ಜಿ-ಘಾಟಿ ತಾತನ ಮೂಲಕವೇ ಮಗಳನ್ನು ಹೀಗೆ ಪರಿಚಯಿಸಿದ ಇಂದುಶ್ರೀ; ಸೋ ಕ್ಯೂಟ್​ ಅಂದ ಫ್ಯಾನ್ಸ್​

ಸಾರಾಂಶ

ಮಾತನಾಡುವ ಗೊಂಬೆಯ ಮೂಲಕ ಜಗದ್ವಿಖ್ಯಾತಿ ಗಳಿಸಿರುವ ಇಂದುಶ್ರೀ ಅವರು ತಮ್ಮ ಮುದ್ದುಮಗಳನ್ನು ತಮ್ಮ ಗೊಂಬೆಗಳ ಮೂಲಕವೇ ಪರಿಚಯ ಮಾಡಿಸಿದ್ದು ಹೀಗೆ...  

ಭಾರತದ ಮೊದಲ ಮಹಿಳಾ ವೆಂಟ್ರಿಲೋಕ್ವಿಸ್ಟ್ ಅಂದ್ರೆ ಧ್ವನಿಮಾಯೆ (Indushree Raveendra) ಇಂದುಶ್ರೀ ಪರಿಚಯ ಬಹುತೇಕ ಎಲ್ಲರಿಗೂ ಇದ್ದೇ ಇದೆ. ವಿಭಿನ್ನ ಕಲೆಯಾದ ‘ಧ್ವನಿಮಾಯೆ’ಯಿಂದ ಈ ಕಲಾವಿದೆ ವಿಶ್ವಾದ್ಯಂತ ಸುತ್ತುತ್ತಿದ್ದಾರೆ. ಕೈಯಲ್ಲಿ ಗೊಂಬೆಗಳನ್ನು ಹಿಡಿದುಕೊಂಡು ಆ ಗೊಂಬೆಗಳ ಕ್ಯಾರೆಕ್ಟರ್​ಗೆ ತಕ್ಕಂತೆ ತಮ್ಮದೇ ಧ್ವನಿಯನ್ನು ವಿಭಿನ್ನ ರೀತಿಯಲ್ಲಿ ನೀಡಿ ಯಾರ ಅರಿವಿಗೂ ಈ ಸತ್ಯ ಬಾರದಂತೆ ಮಾಡಿ ಎಲ್ಲರನ್ನೂ ನಕ್ಕು ನಗಿಸುವ ಜಾಣ್ಮೆಯನ್ನು ಇಂದುಶ್ರೀ ಕರಗತ ಮಾಡಿಕೊಂಡವರು. ತಮ್ಮ ನೆಚ್ಚಿನ ಡಿಂಕು ಗೊಂಬೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಇರುತ್ತಾರೆ ಅವರು.  

ಅಂದಹಾಗೆ ಕಳೆದ ಏಪ್ರಿಲ್​ನಲ್ಲಿ ಇಂದುಶ್ರೀ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಪುಟಾಣಿಗೆ ಈಗ ಸುಮಾರು ಮೂರು ತಿಂಗಳು. ಮಗು ಹುಟ್ಟಿದಾಗ,  ನಮ್ಮ ಮನೆಯ ʻಪುಟ್ಟಿʼ ಬಂದಳು ಎಂದು ಇಂದುಶ್ರೀ ಹೇಳಿಕೊಂಡಿದ್ದರು. ಇದಕ್ಕೂ ಮುನ್ನ ಆಪರೇಷನ್​ಗಾಗಿ ಅವರು ಆಸ್ಪತ್ರೆಗೆ ಹೋಗುವ ಸಮಯದಲ್ಲಿಯೂ ತಮ್ಮ ಎಂದಿನ ಹಾಸ್ಯದ ಅಜ್ಜಿ ಕೋಕಿಲಾ ಅನ್ನು ಕರೆದುಕೊಂಡು ಹೋಗಿರುವುದನ್ನು ಮರೆತಿರಲಿಲ್ಲ. ಇಲ್ಲಿಯವರೆಗೆ ಡಿಂಕು ಜೊತೆ ಮಾತನಾಡುತ್ತಿದ್ದ ಕೋಕಿಲಾ ಅಜ್ಜಿ ಮತ್ತು ಅಜ್ಜ, ಇದೀಗ ರಿಯಲ್​ ಡಿಂಕಿ ಅಂದ್ರೆ ಇಂದುಶ್ರೀ ಅವರ ಮಗಳ ಜೊತೆ ಮಾತನಾಡಿದ್ದಾರೆ. ಅದರ ವಿಡಿಯೋ ಅನ್ನು ಇಂದುಶ್ರೀ ಅವರು  ಶೇರ್​ ಮಾಡಿಕೊಂಡಿದ್ದಾರೆ. 

ನಾಗಲೋಕದಲ್ಲಿ ಆ್ಯಂಕರ್​ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!
  
ಆಪರೇಷನ್​ಗೆ ಹೋಗುವ ಮುನ್ನ ಅಜ್ಜ ಇಂದುಶ್ರೀಗೆ ಪ್ರಶ್ನೆ ಕೇಳಿದ್ರು.  'ಏನಮ್ಮಾ ಮಗು ಹುಟ್ಟಿದ್ಮೇಲೆ ತಿರ್ಗಾ ಹೊಟ್ಟೆಯೊಳಗೆ ಹಾಕ್ಕೊಂಡು ಹೋಗಲ್ವಾ ನೀನು' ಎಂದು ಪ್ರಶ್ನಿಸಿದ್ದಕ್ಕೆ ಇಂದುಶ್ರೀ 'ಇದೇನ್ ತಾತ, ಯಾರ್ ತಾನೇ ಹುಟ್ಟಿದ ಮಗುನ್ನ ವಾಪಸ್ ಹೊಟ್ಟೆಗೆ ಹಾಕಿಕೊಳ್ತಾರೆ' ಅಂದಿದ್ದಕ್ಕೆ ಘಾಟಿ ತಾತ, 'ಪ್ರೋಗ್ರಾಂ ಮುಗಿದ್ದಮೇಲೆ ಎಲ್ಲ ಗೊಂಬೆಗಳನ್ನು ಡಬ್ಬದಲ್ಲಿ ಹಾಕಿಕೊಂಡು ಹೋಗೋ ತರಾ ಮಗುನ್ನೂ ಹಾಕಿಕೊಳ್ತ್ಯೇನೋ ಅನ್ಕೊಂಡೆ' ಅನ್ನುವ ಮೂಲಕ ತಮಾಷೆ ಮಾಡಿದ್ದರು. ಇದೀಗ ಮಗಳ ಜೊತೆಯಲ್ಲಿ ಅಜ್ಜ-ಅಜ್ಜಿ ಮಾತನಾಡುವ ವಿಡಿಯೋ ಅನ್ನು ಇಂದುಶ್ರೀ ಶೇರ್​ ಮಾಡಿಕೊಂಡಿದ್ದಾರೆ. ಅಜ್ಜ-ಅಜ್ಜಿ ಇಬ್ಬರೂ ಮಗುವನ್ನು ಮುದ್ದು ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. 

ಇನ್ನು ಇಂದುಶ್ರೀ ಕುರಿತು ಹೇಳುವುದಾದರೆ, ತಮ್ಮ ಧ್ವನಿ ಮಾಯೆ ವಿದ್ಯೆಯ ಮೂಲಕ ಜಗದ್ವಿಖ್ಯಾತಿ ಗಳಿಸಿದವರು. ಈ ಕಲೆಯ ಬಗ್ಗೆ ಹಿಂದೊಮ್ಮೆ  ಮಾತನಾಡಿದ್ದ ಅವರು, ‘ಧ್ವನಿಮಾಯೆ' ಕಲೆಗೆ ಅಭ್ಯಾಸ ನಿರಂತರವಾಗಿರಬೇಕು. ಇದಕ್ಕೆ ಹಾಡುವುದನ್ನು ಕಲಿತಿರಬೇಕು. ಮಿಮಿಕ್ರಿ ಕಲಿತಿರಬೇಕು. ಒಮ್ಮೆಲೆ ಎರಡೆರಡು ಕೆಲಸಗಳನ್ನು ಮಾಡಬೇಕು. ಇದರಿಂದ ಮೆದುಳಿನ ಮೇಲೆ ಒಂದಷ್ಟು ಒತ್ತಡ ಬೀಳುತ್ತದೆ. ಮೆದುಳನ್ನು ಕಂಪಾರ್ಟ್‌ಮೆಂಟ್ ಮಾಡಿಕೊಂಡು ಒತ್ತಡ ನಿಯಂತ್ರಿಸಿಕೊಂಡರೆ ಮಾತ್ರ ಈ ಕಲೆ ಯಶಸ್ವಿಯಾಗುತ್ತದೆ. ನಾನು ನಾಲ್ಕು ಬೊಂಬೆಗಳ ಜತೆ ಮಾತಾಡುವಾಗ 32 ಆ್ಯಕ್ಷನ್‌ಗಳನ್ನು ಒಂದಾದ ಮೇಲೆ ಒಂದು ಮಾಡಬೇಕಾಗುತ್ತದೆ. ಇದು ನಾನು ಮಾಡಿರುವ ಅತ್ಯಂತ ಕ್ಲಿಷ್ಟ ಪ್ರಯೋಗ ಎಂದಿದ್ದರು. 

ನನ್ ಗಂಡನೂ ಹೀಗೆಯಪ್ಪಾ, ಹೇಳಿ ಹೇಳಿ ಸಾಕಾಗೋಗಿದೆ... ಸೀರಿಯಲ್​ ಜೋಡಿಯ ನೋಡಿ ಹೆಂಡ್ತಿಯರ ಗೋಳು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​