New Kannada Serial: ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಪ್ರೇಮಕಾವ್ಯ

Kannadaprabha News   | Asianet News
Published : Feb 21, 2022, 11:44 AM IST
New Kannada Serial: ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಪ್ರೇಮಕಾವ್ಯ

ಸಾರಾಂಶ

ಕಿರುತೆರೆ ಪ್ರೇಕ್ಷಕರಿಗೆ ಇಂದಿನಿಂದ (ಫೆ.21) ಹೊಸ ಧಾರಾವಾಹಿಯನ್ನು ಹೊತ್ತುತರುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ‘ಜೇನುಗೂಡು’ ಹೆಸರಿನ ಈ ಧಾರಾವಾಹಿ ಫೆ.21ರಿಂದ ಪ್ರತಿ ದಿನ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ. 

ಕಿರುತೆರೆ ಪ್ರೇಕ್ಷಕರಿಗೆ ಇಂದಿನಿಂದ (ಫೆ.21) ಹೊಸ ಧಾರಾವಾಹಿಯನ್ನು ಹೊತ್ತುತರುತ್ತಿದೆ ಸ್ಟಾರ್ ಸುವರ್ಣ (Star Suvarna) ವಾಹಿನಿ. ‘ಜೇನುಗೂಡು’ (Jenugoodu) ಹೆಸರಿನ ಈ ಧಾರಾವಾಹಿ ಫೆ.21ರಿಂದ ಪ್ರತಿ ದಿನ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ. ಬೆಂಗಾಲಿ ಮೂಲದ ಈ ಧಾರಾವಾಹಿ ಈಗಾಗಲೇ ಮಲಯಾಳಂ, ಹಿಂದಿ, ಮರಾಠಿ ಹಾಗೂ ತಮಿಳಿಗೆ ರೀಮೇಕ್ ಆಗಿ ಯಶಸ್ಸು ಕಂಡಿದೆ. ಈಗ ಕನ್ನಡಕ್ಕೂ ಬರುತ್ತಿದ್ದು, ಇಲ್ಲಿನ ಭಾಷೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಜೇನುಗೂಡು ಹೆಸರಿನಲ್ಲಿ ಧಾರಾವಾಹಿಯನ್ನು ರೂಪಿಸಲಾಗಿದೆಯಂತೆ. ಅಧುನಿಕ ಜೀವನ ಶೈಲಿಯ ಹುಡುಗಿ, ತಾನು ಮದುವೆ ಆಗುವ ಹುಡುಗನನ್ನು ಪ್ರೀತಿಸುತ್ತಾಳೆ. 

ಮತ್ತೊಂದು ಕಡೆ ಇನ್ನೊಂದು ಪ್ರೇಮ ಕತೆ ಶುರುವಾಗಿರುತ್ತದೆ. ಈ ಎರಡು ಪ್ರೇಮ ಕತೆಗಳ ಕೇಂದ್ರ ಪಾತ್ರಗಳು ಮತ್ತು ಕುಟುಂಬಗಳು ಬೇರೆ ಬೇರೆ ಆದರೂ ಮುಂದೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಧಾರಾವಾಹಿಯಲ್ಲಿ ನೋಡಬಹುದಾಗಿ. ಅನಿಲ್ ನಿರ್ದೇಶನದ ಈ ಧಾರಾವಾಹಿಯನ್ನು ರೇಖಾ ಕೆ ಪಿ ನಿರ್ಮಿಸುತ್ತಿದ್ದಾರೆ. ಆರವ್ ಹಾಗೂ ನಿತ್ಯ ಧಾರಾವಾಹಿಯ ಪ್ರಮುಖ ಜೋಡಿ. ಉಳಿದಂತೆ ವೀಣಾ ಸುಂದರ್, ರಮೇಶ್ ಪಂಡಿತ್, ರವಿ ಭಟ್, ಶ್ರೀಕಾಂತ್ ಹೆಬ್ಲೀಕರ್, ಮಾಲತಿ ಸರದೇಶಪಾಂಡೆ ಸೇರಿದಂತೆ ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರು ಇಲ್ಲಿ ನಟಿಸುತ್ತಿದ್ದಾರೆ. 

Star Suvarna ವಾಹಿನಿಯಲ್ಲಿ ಹೊಸ ಧಾರಾವಾಹಿ 'ಬೆಟ್ಟದ ಹೂ'

ಈ ಧಾರಾವಾಹಿಯ ಕಥೆ ಏನು?: ನಡುಕೋಟಿ ಕುಟುಂಬದ ಮೂವರು ಅಣ್ಣತಮ್ಮಂದಿರ ಸ್ವಭಾವ ಬೇರೆ ಬೇರೆ ಅಗಿದ್ದರೂ, ಅವರು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾರೆ. ಈ ಕುಟುಂಬದವರು ಯಾವುದೇ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಬಿಟ್ಟು ಕೊಡದೆ ಹೊಂದಾಣಿಕೆ ಜೀವನ ನಡೆಸುತ್ತಿರುತ್ತಾರೆ. ಇವರ ಕುಟುಂಬ ಜೇನುಗೂಡಿನ ತರಹ ಬೇರೆಯವರಿಗೆ ಮಾದರಿಯಾಗುವಂತಹ ಕೂಡುಕುಟುಂಬವಾಗಿರುತ್ತದೆ. ಈ ಧಾರಾವಾಹಿಯ ನಾಯಕನಾಗಿರುವ ಶಶಾಂಕ್‌ಗೆ ವಿಜ್ಞಾನಿಯಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುತ್ತದೆ. ಆದರೆ ಕುಟುಂಬಕ್ಕಾಗಿ ಅವನು ಆ ಅವಕಾಶವನ್ನು ತ್ಯಜಿಸುತ್ತಾನೆ.‌ ಇದು ಹೀರೋ ಫ್ಯಾಮಿಲಿಯ ಕಥೆಯಾದರೆ, ಹೀರೋಯಿನ್ ಹಿನ್ನೆಲೆ ಇದಕ್ಕೆ ಇದಕ್ಕೆ ವ್ಯತಿರಿಕ್ತವಾಗಿದೆ.

ಖ್ಯಾತ ವೈದ್ಯ ಶ್ರೀಧರ್ ಮೂರ್ತಿ ಅವರ ಪುತ್ರಿ ದಿಯಾ. ಆಕೆಗೆ ಕುಟುಂಬದ ಬಂಧಗಳ ಅರಿವೇ ಇರುವುದಿಲ್ಲ. ಏಕೆಂದರೆ ಅವರ ತಾಯಿ ಅವರ ಕೆಲಸಕ್ಕಾಗಿ ಅವಳನ್ನು ತ್ಯಜಿಸಿ ಅಮೆರಿಕಕ್ಕೆ ಹೋಗಿರುತ್ತಾರೆ. ದಿಯಾಳನ್ನು ಅವರ ತಂದೆ ಹಾಗೂ ಅವರ ತಂದೆಯ ತಂಗಿ ಸಾರಿಕಾ ಪ್ರೀತಿಯಿಂದ ಬೆಳೆಸುರುತ್ತಾಳೆ. ಸಾರಿಕಾ ಗಂಡನಿಂದ ದೂರವಾಗಿ ಅಣ್ಣನ ಮನೆಯಲ್ಲೇ ಇರುತ್ತಾಳೆ. ದಿಯಾ ಹಾಗೂ ಶಶಾಂಕ್ ಸದಾ ಜಗಳವಾಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ. ಆದರೆ ಇವರಿಬ್ಬರನ್ನು ಒಂದು ಮಾಡಲು ಎರಡೂ ಕುಟುಂಬದವರು ನಿರ್ಧರಿಸಿರುತ್ತಾರೆ. ಕೆಲವೊಂದು ಸಂದರ್ಭಗಳ ಒತ್ತಡಗಳಿಂದ ದಿಯಾ ಹಾಗೂ ಶಶಾಂಕ್ ಮದುವೆ ಆಗುತ್ತಾರೆ. ಮುಂದೆ ಅವರಿಬ್ಬರ ಬದುಕು ಹೇಗಿರಲಿದೆ? ಅವರಲ್ಲಿ ಪ್ರೀತಿ ಹುಟ್ಟಲಿದೆಯೇ? ದೂರ ಆಗುತ್ತಾರಾ ಎಂಬುದೇ ಕಥೆ.

'ರಾಧೆ ಶ್ಯಾಮ' ಧಾರಾವಾಹಿಯಿಂದ ಹೊರ ಬಂದ ನಟಿ ಅಶ್ವಿನಿ ಗೌಡ!

ಧಾರಾವಾಹಿ ಪ್ರಸಾರ ಆಗುತ್ತಿರುವ ಹಿನ್ನೆಲೆ ಈ ಕುರಿತು ಹೇಳಿಕೊಳ್ಳಲು ಇಡೀ ಧಾರಾವಾಹಿ ತಂಡ ಮಾಧ್ಯಮಗಳ ಮುಂದೆ ಬಂತು. ‘ಉತ್ತರ ಕರ್ನಾಟಕದ ಕುಟುಂಬ ಹಾಗೂ ಬೆಂಗಳೂರಿನ ಕುಟುಂಬದ ಕತೆಯಾಗಿ ತೆರೆ ಮೇಲೆ ಬರುತ್ತಿರುವ ಈ ಧಾರಾವಾಹಿ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದು ನಿರ್ದೇಶಕರು ಹೇಳಿಕೊಂಡರು. ನಟಿ ವೀಣಾಸುಂದರ್ ಮಾತನಾಡಿ, ‘ಇದು ರೆಗ್ಯೂಲರ್ ಕಿಚನ್ ಡ್ರಾಮಾ ಕತೆಯಲ್ಲ. ಜತೆಗೆ ಹೆಣ್ಣಿಗೇ ಹೆಣ್ಣು ವಿಲನ್ ಎನ್ನುವ ರೋಟಿನ್ ಪಾತ್ರಧಾರಿಗಳ ಧಾರಾವಾಹಿಯೂ ಅಲ್ಲ. ಹೊಸತನದಿಂದ ಕೂಡಿದೆ. ಈ ಕಾರಣಕ್ಕೆ ನಾನು ಇಲ್ಲಿ ನಟಿಸಲು ಒಪ್ಪಿಕೊಂಡೆ’ಎಂದರು. ತಮ್ಮ ಸಂಸ್ಥೆಯಿಂದ ಮೂಡಿ ಬರುತ್ತಿರುವ ಧಾರಾವಾಹಿಯನ್ನು ನೋಡಿ ಪ್ರೋತ್ಸಾಹಿಸುವಂತೆ ನಿರ್ಮಾಪಕಿ ರೇಖಾ ಕೆ ಪಿ ಅವರು ಮನವಿ ಮಾಡಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!