
ಕನ್ನಡತಿ ಧಾರವಾಹಿಯಲ್ಲಿ ಆಕ್ಸಿಡೆಂಟ್ ನಡೆದರೂ ಪತ್ರಕರ್ತೆ ಪೂಜಾ ಸಾಕ್ಷಿ ಹೇಳಲು ತಲುಪುತ್ತಾರೆ. ವರುಧಿನಿಗೆ ಜಾಮೀನು ಸಿಗುತ್ತಾ..? ಜೈಲಿಂದ ಬಿಡುಗಡೆಯಾಗ್ತಾರಾ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ವರುಧಿನಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಖುಷಿ ಆಯ್ತಾ..? ಹೌದಲ್ಲಾ.. ಯಾವುದೇ ತಪ್ಪು ಮಾಡದೆ ತನ್ನ ಹೀರೋಗಾಗಿ ಜೈಲಿಗೆ ಹೋದ ವರೂ ಹೊರಗೆ ಬರುತ್ತಿದ್ದಾಳೆ. ಭುವಿ ಮತ್ತು ಹರ್ಷನ ಸತತ ಪ್ರಯತ್ನದಿಂದ ಜಾಮೀನು ಲಭಿಸಲಿದೆ.
ಬೆಸ್ಟ್ ಕನ್ನಡ ಸೀರಿಯಲ್ ಯಾವುದು ಅಂದ್ರೆ ಕನ್ನಡತಿ ಅನ್ನುತ್ತೆ ಗೂಗಲ್
ಜೈಲಿನಿಂದ ಹೊರಬಂದು ಓಡೋಡಿ ಬರುವ ವರುಧಿನಿ ಗೆಳತಿ ಭುವಿ ಹತ್ತಿರ ಬರುವುದಿಲ್ಲ, ಬದಲಾಗಿ ಹರ್ಷನನ್ನು ಕಂಡ ಕೂಡಲೇ ಭಾವುಕಳಾಗುತ್ತಾಳೆ. ತನ್ನ ಹೀರೋನ ಮುಖ ನೋಡುತ್ತಲೇ ಓಡಿ ಬಂದು ತಬ್ಬಿಕೊಳ್ಳುತ್ತಾಳೆ.
ಹರ್ಷ ವರುಧಿನಿಯ ಈ ಸಡನ್ ನಡವಳಿಕೆಗೆ ಶಾಕ್ ಆದ್ರೂ ಸಾವರಿಸಿಕೊಳ್ತಾನೆ. ದೂರದಲ್ಲಿ ನಿಂತು ಇದನ್ನು ನೋಡೋ ಭುವಿ ಕಣ್ಣೀರಾಗ್ತಾಳೆ. ಲವ್, ಫ್ರೆಂಡ್‌ಶಿಪ್, ಟ್ರಯಾಂಗಲ್ ಲವ್ ಸ್ಟೋರಿ ಹೇಗೆ ಹೋಗುತ್ತೆ ಅನ್ನೋದೆ ಕುತೂಹಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.