
ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಗೀತಾ ಭಾರತಿ ಭಟ್ ಕೆಲ ದಿನಗಳಿಂದ ಹಲವು ವಿಚಾರಗಳಿಗೆ ಸುದ್ದಿಯಲ್ಲಿದ್ದಾರೆ. ಧಾರವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಬಿಗ್ ಬಾಸ್ ಪ್ರವೇಶಿಸುತ್ತಾರೆಂಬ ವಿಚಾರ ಹರಿದಾಡಿತ್ತು. ಆದರೀಗ ಮತ್ತೆ ಸುದ್ದಿಯಾಗುತ್ತಿರುವುದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ.
2020ರಲ್ಲಿ ಮಾಡಿಕೊಂಡ ಈ ಎಡವಟ್ಟಿನಿಂದ ಬಿಗ್ ಬಾಸ್ ಪ್ರವೇಶಿಸುವ ಅವಕಾಶ ಪಡೆದ್ರಾ ಗೀತಾ?
ಗೀತಾ ನಟಿ ಮಾತ್ರವಲ್ಲ ಗಾಯಕಿ ಕೂಡ ಹೌದು. ಪ್ರೇಮಿಗಳ ದಿನಾಚರಣೆ ಅಂಗವಾದ ಒಂದು ಲವ್ ಆಲ್ಬಂ ಸಾಂಗ್ ರಿಲೀಸ್ ಮಾಡುತ್ತಿದ್ದಾರೆ. ಆದಿತ್ಯ ವಿನೋದ್‌ಗೆ ಜೊತೆಯಾಗಿ ಗೀತಾ 'ಸ್ವೀಟೂ' ಆಲ್ಬಂ ರೆಡಿ ಮಾಡಿದ್ದಾರೆ. ಆಲ್ಬಂ ಪೋಸ್ಟ್ ಸಖತ್ ರೊಮ್ಯಾಂಟಿಕ್ ಆಗಿದ್ದು ಅಭಿಮಾನಿಗಳು ಹಾಡು ಬಿಡುಗಡೆಗಾಗಿ ಕಾಯುತ್ತಿದ್ದಾರೆ.
'ಸ್ವೀಟೂ..ಆದಿತ್ಯ ವಿನೋದ್ ಜೊತೆಗೆ ಮಾಡಿರುವ ಸಂಗೀತಾ ಅಲ್ಬಂ ವ್ಯಾಲೆಂಟೈನ್ಸ್ ದಿನ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ದಯವಿಟ್ಟು ಎಲ್ಲರೂ ವೀಕ್ಷಿಸಿ ನಿಮ್ಮ ಪ್ರೀತಿ ತೋರಿಸಿ ಆಶೀರ್ವಾದ ಮಾಡಬೇಕು. ಪ್ರೀತಿ ಬಗ್ಗೆ ಇದು ಬೇರೆಯೇ ಕಲ್ಪನೆ ನೀಡುತ್ತದೆ. ಪ್ರೇಮಿಗಳ ದಿನದಿಂದ ನಾವೆಲ್ಲರೂ ಪ್ರೀತಿಯಲ್ಲಿ ಬೀಳೋಣ' ಎಂದು ಗೀತಾ ಬರೆದುಕೊಂಡಿದ್ದಾರೆ. ಗೀತಾ ಹಣೆಗೆ ಮುತ್ತಿಡುತ್ತಿರುವ ಪೋಸ್ಟರ್ ವೈರಲ್ ಆಗಿದ್ದು 'ನಿಮ್ಮ ನಿಜವಾದ ವ್ಯಾಲೆಂಟೈನ್ ಇವರೇನಾ' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ವೀಕೆಂಡ್ ನೈಟ್ ಪಾರ್ಟಿಯಲ್ಲಿ ಪೆಡ್ಲರ್ ಜೊತೆ 'ಗೀತಾ'; ಇವರೂ ತಗೋತಿದ್ರಾ ಡ್ರಗ್ಸ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.