
ಸೀತಾರಾಮ ಸೀರಿಯಲ್ (Sitaram Serial) ಸೀತಾ ಅಲಿಯಾಸ್ ವೈಷ್ಣವಿ ಗೌಡ (Vaishnavi Gowda) ಸದ್ಯ ಎಂಗೇಜ್ಮೆಂಟ್ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ವೈಷ್ಣವಿ, ಅನುಕೂಲ್ ಜೊತೆ ಉಂಗುರ ಬದಲಿಸಿಕೊಂಡಿದ್ದಾರೆ. ಗ್ರ್ಯಾಂಡ್ ಎಂಗೇಜ್ಮೆಂಟ್ ನಂತ್ರ ಅನುಕೂಲ್ ಜೊತೆ ಡೇಟಿಂಗ್ (Dating) ಗೆ ಹೋಗಿದ್ದ ವೈಷ್ಣವಿ, ಅದ್ರ ಫೋಟೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವೈಷ್ಣವಿ ಎಂಗೇಜ್ಮೆಂಟ್ ಫೋಟೋ, ವಿಡಿಯೋ ನೋಡಿದ ಅಭಿಮಾನಿಗಳು ಅವರಿಗೆ ಒಂದಿಷ್ಟು ಪ್ರಶ್ನೆ ಕೇಳಿದ್ದಾರೆ. ಅದ್ರಲ್ಲಿ ಕೆಲವೊಂದು ಪ್ರಶ್ನೆಗೆ ವೈಷ್ಣವಿ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
ವೈಷ್ಣವಿ ಎರಡು ಎಂಗೇಜ್ಮೆಂಟ್ (Engagement) ಉಂಗುರ ಖರೀದಿಸಿದ್ದು ಏಕೆ? : ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವೈಷ್ಣವಿ ಗೌಡ, ತಮ್ಮ ಎಂಗೇಜ್ಮೆಂಟ್ ರಿಂಗ್ ತೋರಿಸಿದ್ದಾರೆ. ವೈಷ್ಣವಿ ಗೌಡ ಎರಡು ರಿಂಗ್ ಖರೀದಿ ಮಾಡಿದ್ದರು. ಅದಕ್ಕೆ ಕಾರಣ ಏನು ಅನ್ನೋದನ್ನು ವೈಷ್ಣವಿ ಹೇಳಿದ್ದಾರೆ. ಒಂದು ಪ್ಲಾಟಿನಂ ರಿಂಗ್ ಆದ್ರೆ ಇನ್ನೊಂದು ವಜ್ರದ ರಿಂಗ್. ಪ್ರತಿ ದಿನ ವಜ್ರದ ರಿಂಗ್ ಧರಿಸೋದು ಕಷ್ಟ. ಶೂಟಿಂಗ್ ಕಾರಣಕ್ಕೆ ಉಂಗುರವನ್ನು ತೆಗೆದಿಡುವಂತಿಲ್ಲ. ಹಾಗಾಗಿ ವೈಷ್ಣವಿ ಇನ್ನೊಂದು ಪ್ಲಾಟಿನಂ ರಿಂಗ್ ಖರೀದಿ ಮಾಡಿದ್ದು, ಪ್ರತಿ ದಿನ ಅದನ್ನು ಧರಿಸ್ತಾರೆ. ವೈಷ್ಣವಿ ರಿಂಗ್ ನಲ್ಲಿ ಇನ್ನೊಂದು ವಿಶೇಷತೆ ಇದೆ. ಅವರು ರಿಂಗನ್ನು ಎಡಗೈ ಬದಲು ಬಲಗೈಗೆ ಹಾಕಿದ್ದಾರೆ. ಅನೇಕ ವರ್ಷಗಳಿಂದ ಅವರಿಷ್ಟದ ಉಂಗುವನ್ನು ಅವರು ಬಲಗೈ ಬೆರಳಿಗೆ ಹಾಕಿಕೊಂಡು ಬರ್ತಿದ್ದಾರೆ. ಅದನ್ನು ತೆಗೆಯೋಕೆ ಇಷ್ಟವಿಲ್ಲ. ಹಾಗಾಗಿ ಎಂಗೇಜ್ಮೆಂಟ್ ಉಂಗುರವನ್ನು ಬಲಗೈಗೆ ಹಾಕಿದ್ದೇನೆ ಎಂದು ವೈಷ್ಣವಿ ಹೇಳಿದ್ದಾರೆ.
ದೇಶ ಬಿಟ್ಟು ಹೋಗ್ತಾರಾ ವೈಷ್ಣವಿ? : ವೈಷ್ಣವಿ ಅನುರಾಗ್ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ತಿದ್ದಂತೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದವರು ಸಿಗ್ಲಿಲ್ವಾ ಎನ್ನುವ ಕಮೆಂಟ್ ಸಿಕ್ಕಾಪಟ್ಟೆ ಬಂದಿತ್ತು. ಆ ನಂತ್ರ, ವೈಷ್ಣವಿ ಇನ್ಮುಂದೆ ಸೀರಿಯಲ್ ನಲ್ಲಿ ಕಾಣಸಿಗೋದಿಲ್ಲ. ಮದುವೆ ಆದ್ಮೇಲೆ ಫಾರೆನ್ ನಲ್ಲಿ ಸೆಟಲ್ ಆಗ್ತಾರೆ, ಆಕ್ಟಿಂಗ್ ಬಿಡ್ತಾರೆ ಎನ್ನುವ ಸುದ್ದಿಗಳು ವೈರಲ್ ಆಗಿದ್ದವು. ಅದಕ್ಕೆ ವೈಷ್ಣವಿ ಉತ್ತರ ನೀಡಿದ್ದಾರೆ. ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆದಿದ್ದಾರೆ. ಕರ್ನಾಟಕ, ಈ ದೇಶದ ಜನತೆ ನನಗೆ ಇಷ್ಟೊಂದು ಪ್ರೀತಿಕೊಟ್ಟಿದ್ದಾರೆ. ಅದನ್ನು ಮರೆಯಲು ಸಾಧ್ಯವಿಲ್ಲ. ನನ್ನ ಕೊನೆ ಉಸಿರಿರುವವರೆಗೂ ನಾನು ಕನ್ನಡ ಇಂಡಸ್ಟ್ರಿಯಲ್ಲಿ ಕೆಲ್ಸ ಮಾಡ್ತೇನೆ. ಇದ್ರ ಬಗ್ಗೆ ಆತಂಕ ಬೇಡ ಎನ್ನುವ ಮೂಲಕ ಸೀತಾರಾಮ ಸೀರಿಯಲ್ ಬಿಡೋದಿಲ್ಲ ಎಂಬುದನ್ನು ವೈಷ್ಣವಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿಡಿಯೋದಲ್ಲಿ ವೈಷ್ಣವಿ, ಎಂಗೇಜ್ ಮೆಂಟ್ ನಲ್ಲಿ ಧರಿಸಿದ್ದ ಔಟ್ ಫಿಟ್ ಬಗ್ಗೆಯೂ ವಿವರ ನೀಡಿದ್ದಾರೆ. ಔಟ್ ಫಿಟ್ ರೆಡಿ ಮಾಡಿರುವವರ ಮಾಹಿತಿ ಕೂಡ ವೈಷ್ಣವಿ ನೀಡಿದ್ದಾರೆ. ವೈಷ್ಣವಿ ವಿಡಿಯೋದಲ್ಲಿ ಸಾಬೂದಾನಿ ಡಂಪ್ಲಿಂಕ್ಸ್ ಮಾಡೋದು ಹೇಗೆ ಎಂಬುದನ್ನು ಕೂಡ ತೋರಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್, ಅನುರಾಗ್ ಜೊತೆ ವ್ಲಾಗ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಗೌಡ, ಸಿರಿಯಲ್ ಶೂಟಿಂಗ್, ಡಾನ್ಸ್, ಮನೆ ಹೀಗೆ ನಾನಾ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.
ವೈಷ್ಣವಿ ಗೌಡ, ಛತ್ತೀಸ್ಗಡದ ಸೊಸೆಯಾಗ್ತಿದ್ದಾರೆ. ಅನುರಾಗ್ ಮಿಶ್ರಾ, ಏರ್ಪೋರ್ಸ್ ನಲ್ಲಿ ಕೆಲ್ಸ ಮಾಡ್ತಿದ್ದಾರೆ. ವೈಷ್ಣವಿ ಹಾಗೂ ಅನುರಾಗ್ ಸಂಬಂಧವನ್ನು ಮನೆಯವರು ಗೊತ್ತು ಮಾಡಿದ್ದಾರೆ. ಇದು ಅರೇಂಜ್ಡ್ ಮ್ಯಾರೇಜ್ ಎಂದು ವೈಷ್ಣವಿ ಈ ಹಿಂದೆ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.